ಪ್ರತಿನಿಧಿ ವರದಿ ಚಿಕ್ಕಬಳ್ಳಾಪುರ
ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೆಗಾ ಬ್ರದರ್ಸ್ ಫ್ಯಾನ್ಸ್ ಅಸೋಸಿಯೇಷನ್ ಚಿಕ್ಕಬಳ್ಳಾಪುರ ವತಿಯಿಂದ ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮಚರಣ್ ಹುಟ್ಟುಹಬ್ಬವನ್ನು ವಿಶೇಷ ಪೂಜೆ, ಕೇಕ್ ವಿತರಣೆ ಹಾಗೂ ಗಿಡ ನೀಡುವುದರ ಮೂಲಕ ಆಚರಿಸಲಾಯಿತು.
ಮೊಬೈಲ್ ಬಾಬು ಮಾತನಾಡಿ, ಮೆಗಾ ಬ್ರದರ್ಸ್ ಅವರು ದೇಶದಾದ್ಯಂತ ಸಮಾಜ ಸೇವೆಯಲ್ಲಿ ಒಳ್ಳೆಯ ಹೆಸರು ಗಳಿಸಿದ್ದಾರೆ. ನೇತ್ರದಾನ, ರಕ್ತದಾನ, ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಮಹತ್ತರವಾದ ಕೆಲಸವನ್ನು ಮಾಡುತ್ತಿದ್ದಾರೆ. ಆದ್ದರಿಂದ ಅವರ ಹೆಸರಿನಲ್ಲಿ ನಾವೂ ರಕ್ತದಾನ, ಗಿಡ ನೆಡುವ ಕಾರ್ಯಕ್ರಮಗಳನ್ನು ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.
ಗುಂಪು ಮರದ ಆನಂದ್ ಮಾತನಾಡಿ, ಯಾರು ಸಮಾಜಕ್ಕಾಗಿ ಹಾಗೂ ಬಡವರಿಗಾಗಿ ದುಡಿಯುತ್ತಾರೋ ಅಂತವರ ಹುಟ್ಟುಹಬ್ಬ ಆಚರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ರಾಮ್ ಚರಣ್ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗೆ ಗಿಡಗಳನ್ನು ನೀಡಿದರು. ರಮೇಶ್. ಚಿರಂಜೀವಿ. ಕಾರ್ತಿಕ್. ಇದ್ದರು

