ಮಂಡ್ಯ : ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಅನ್ಯಾಯಕ್ಕೆ ಮುಖ್ಯ ಕಾರಣ. ತಮಿಳುನಾಡಿನವರು ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿದ ಮೇಲೆ ನಮ್ಮವರು ದಾಖಲೆಗೆ ಹುಡುಕಾಟ ನಡೆಸಿದ್ದಾರೆ ಎಂದು ಮಾಜಿ ಸಚಿವ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮಿಳುನಾಡು ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿದ ತಕ್ಷಣವೇ, ಕೋರ್ಟ್ ಆದೇಶ ನೀಡುವ ಮುನ್ನ ತಮಿಳುನಾಡಿಗೆ ನೀರು ಹರಿಸುತ್ತಾರೆ ಎಂದು ಟೀಕಿಸಿದರು.
ಕಾವೇರಿ ಉಳಿವಿಗಾಗಿ ರೈತರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಕಾವೇರಿ ನೀರು ಬಳಸುವುದರಲ್ಲಿ ಬೆಂಗಳೂರಿಗರೇ ಹೆಚ್ಚು. ಮಂಡ್ಯದ ಜನರು ವಿರೋಧ ಮಾಡಿದ್ದರಿಂದ ಜಲಾಶಯದಲ್ಲಿ ಒಂದಷ್ಟು ನೀರು ಉಳಿದಿದೆ. ಇಲ್ಲದಿದ್ದರೆ ಅದೂ ಸಹ ತಮಿಳುನಾಡಿಗೆ ಹೋಗುತ್ತಿತ್ತು ಎಂದು ಹೇಳಿದರು.
[totalpoll id=”12842″]
Sign in to your account