ಮೈಸೂರು, ಫೆಬ್ರವರಿ 16, 2026: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವತಿಯಿಂದ 2024–25ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ವರದಿ ಕುರಿತಂತೆ ಸಾರ್ವಜನಿಕ ವಿಚಾರಣಾ ಸಭೆಯನ್ನು ನಗರದಲ್ಲಿ ಆಯೋಜಿಸಲಾಗಿತ್ತು.

ಸೆಸ್ಕ್ ಸಿದ್ಧಪಡಿಸಿರುವ ಈ ಸಾಲಿನ ವರದಿಯನ್ನು ಸಾರ್ವಜನಿಕರ ಗಮನಕ್ಕೆ ತಂದು, ಅವರಿಂದ ಪೂರಕ ಅಭಿಪ್ರಾಯ ಹಾಗೂ ಮಹತ್ವದ ಸಲಹೆಗಳನ್ನು ಪಡೆಯುವ ಉದ್ದೇಶದಿಂದ ಈ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆ.ಇ.ಆರ್.ಸಿ) ಅಧ್ಯಕ್ಷರಾದ ಪಿ. ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಈ ವಿಚಾರಣೆ ನಡೆಯಿತು. ಸಭೆಯಲ್ಲಿ ಕೆ.ಇ.ಆರ್.ಸಿ ಸದಸ್ಯರಾದ ಹೆಚ್. ಕೆ. ಜಗದೀಶ್ ಅವರು ಉಪಸ್ಥಿತರಿದ್ದು ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸೆಸ್ಕ್‌ನ ಹಿರಿಯ ಅಧಿಕಾರಿಗಳು ನಿಗಮದ ಪ್ರಗತಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸಮಾಜದ ವಿವಿಧ ವಲಯಗಳ ಮುಖಂಡರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ, ವಿದ್ಯುತ್ ಸರಬರಾಜು ವ್ಯವಸ್ಥೆ ಮತ್ತು ಸುಧಾರಣೆಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
