ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲು ಮೇ 15 ರಿಂದಲೇ ತರಗತಿಗೆ ಹಾಜರಾಗಲು ಹೈಸ್ಕೂಲ್ ಶಿಕ್ಷಕರಿಗೆ ಸೂಚಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರಕಾರ ಹಿಂಪಡೆದಿದೆ. ಆ ಮೂಲಕ ಮೇ 28 ರ ತನಕ ಬೇಸಿಗೆ ರಜೆ ಎಂದಿನಂತೆ ಮುಂದುವರೆಯಲಿದೆ.
ಬೇಸಿಗೆ ರಜೆ ಕಡಿತಗೊಳಿಸಿ ವಿಶೇಷ ತರಗತಿ ನಡೆಸುವ ಸಂಬಂದ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಹೈಸ್ಕೂಲ್ ಶಿಕ್ಷಕ ವೃಂದದಿಂದ ತೀವ್ರ ಅಸಮಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸರಕಾರಿ ಆದೇಶವನ್ನು ಮರು ಪರಿಶೀಲಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ಇದರನ್ವಯ ಮೇ. 28 ರ ತನಕ ಬೇಸಿಗೆ ರಜೆ ಮುಂದುವರೆಯಲಿದೆ.
