ಮಂಡ್ಯ : ಮಳವಳ್ಳಿಯ ಕಾಂಗ್ರೆಸ್ ಸಭೆಯಲ್ಲಿ ಶಾಸಕ ನರೇಂದ್ರಸ್ವಾಮಿ ಸುಮಲತಾಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ವೇದಿಕೆಯಲ್ಲಿಯೇ ಸುಮಲತಾಗೆ ತಾಕೀತು ಮಾಡಿದ ನರೇಂದ್ರಸ್ವಾಮಿ, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪರ ಕೆಲಸ ಮಾಡಲ್ಲ ಎಂದು ಓಪನ್ ಆಗೆ ಹೇಳಿದ್ದೆ. ನಮ್ಮ ಪಕ್ಷದ ನಾಯಕರಿಗೆ, ಇಂದಿನ ಸಿಎಂಗು ನಾನು ತಿಳಿಸಿದ್ದೆ. ಅಂದು ಸುಮಲತಾ ಪರ ನಾವೂ ಚುನಾವಣೆ ಮಾಡಿದ್ದೋ. ಇವತ್ತು ಸುಮಲತಾ ಅವರು ಜ್ಞಾಪಕ ಮಾಡಿಕೊಳ್ಳಲಿ. ಅಂದು ಸುಮಲತಾ ಮಳವಳ್ಳಿ ಹುಚ್ಚೇಗೌಡರ ಸೊಸೆ ಎಂದಿದ್ರು. ಹುಚ್ಚೇಗೌಡರ ಮಳವಳ್ಳಿ ಸ್ವಾಭಿಮಾನವನ್ನ ಕಳೆಯ ಕೂಡದು. ನಿಮಗೆ ಹೀಯಾಳಿಸಿದ, ಅವಮಾನಿಸದವರಿಗೆ ಉತ್ತರ ಕೊಟ್ಟ ನೆಲ ಮಳವಳ್ಳಿ. ನಿಮಗೆ ಎಚ್ಚರಿಕೆಯ ಬೇಡಿಕೆ ಇಡುತ್ತೇನೆ. ಈ ಮಳವಳ್ಳಿಗೆ ನೀವು ಅವಮಾನ ಮಾಡಕೂಡದು. ಆ ರೀತಿ ಇಂದಿನ ಸಭೆಯಲ್ಲಿ ನಿಮ್ಮ ನಡೆ ಇರಬೇಕು. ಅಂದು ಸ್ವಾಭಿಮಾನದ ಮಾತನಾಡುದ್ರಲ್ಲ, ಇಂದು ನಿಜಾವಾದ ಸ್ವಾಭಿಮಾನ ನೀವು ಉಳಿಸಿಕೊಳ್ಳಬೇಕು.ಮಂಡ್ಯದ ಗೆಲುವನ್ನ ನಾವು ಕೇಳ್ತಿದ್ದೇವೆ ಎಂದು ಪರೋಕ್ಷವಾಗಿ ತಟಸ್ಥವಾಗಿರಿ, ಇಲ್ಲ ಕೈ ಅಭ್ಯರ್ಥಿ ಪರ ನಿಲ್ಲುವಂತೆ ಸುಮಲತಾಗೆ ನರೇಂದ್ರಸ್ವಾಮಿ ತಾಕೀತು ಮಾಡಿದರು.
