ಬೇಲೂರು: ತಾಲೂಕಿನ ಕೋಗೋಡು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ ಯುವಕ ಯವತಿಯರು ಶೇ.೮೨ ಮತದಾನವಾಗಿದೆ.
ಲೋಕಸಭಾ ಚುನಾವಣೆ ಮತದಾನಕ್ಕೂ ಮುನ್ನ ಗ್ರಾಮಸ್ಥರಿಂದ ಕಡ್ಡಾಯವಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂದು ಜಾಗೃತಿ ಮೂಡಿಸಿದ್ದರು.
ಮತಗಟ್ಟೆ ಸಮೀಪ ವೃದ್ದರು ಹಾಗು ಅಂಗವಿಕಲರಿಗೆ ಕುಳಿತುಕೊಳ್ಳಲು ಶಾಮಿಯಾನ ವ್ಯವಸ್ಥೆ ಮಾಡಲಾಗಿದ್ದು ಏಜೆಂಟರು ಮತದಾರರು ಬಿಸಿಲಿನ ಬೇಗೆ ತಣಿಸಲು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಮುಂಜಾನೆ ೭ ರಿಂದ ಆರಂಭಗೊಂಡ ಮತದಾನ ಮದ್ಯಾಹ್ನ ೧೨ ರಿಂದ ಬಿರುಸುಗೊಂಡಿತು.
ಇದೇಮೊದಲ ಬಾರಿಗೆ ಮತಚಲಾಯಿಸಿದ ಯುವಕ ಯುವತಿಯರು ಸಂಭ್ರಮಿಸಿದರು.೯೦ ವರ್ಷ ತುಂಬಿದ ವೃದ್ದರು ಮತಗಟ್ಟೆ ಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುವ ಮೂಲಕ ತಮ್ಮ ಜವಬ್ದಾರಿ ನೆರವೇರಿಸಿದರಲ್ಲದೆ ಇಂದಿನ ಯುವಕ-ಯುವತಿಯರಿಗೆ ಮಾದರಿಯಾದರು.
