


( ಇದು ಅಂತಿಮ ವರದಿಯಲ್ಲ. ಅಂತಿಮ ವರದಿ ಮಾಹಿತಿ ಇನ್ನೂ 45 ನಿಮಿಷವಾಗಲಿದೆ)
ಕ್ಷೇತ್ರದಲ್ಲಿ ಭಾಗಶಃ ಶೇ.69.60 ಮತದಾನ/ ಇಂಡಿಗನತ್ತದಲ್ಲಿ ಮತದಾನ ಬಹಿಷ್ಕರಿಸಿ ದಾಂಧಲೆ
ಪ್ರತಿನಿಧಿ ವರದಿ ಚಾಮರಾಜನಗರ
ಲೋಕಸಭಾ ಚುನಾವಣೆಯ ಮತದಾನ ಜಿಲ್ಲಾದ್ಯಂತ ಬೆಳ್ಳಂಬೆಳಗ್ಗೆ ಉರಿಯುವ ಬಿಸಿಲಿನ ನಡುವೆಯೂ ಮತದಾರರರು ಸರದಿ ಸಾಲಿನಲ್ಲಿ ನಿಂತು ತಮ್ಮ ಮತಚಲಾವಣೆ ಮಾಡಿದರು. ಜಿಲ್ಲೆಯ ಒಂದೆರೆಡು ಕಡೆ ಗೊಂದಲ ಉಂಟಾದರೂ ಬಹುತೇಕ ಮತದಾನ ಪ್ರಕ್ರಿಯೆಯೂ ಶಾಂತಿಯುತವಾಗಿ ಬಿರುಸಾಗಿ ನಡೆಯಿತು.
ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಗೆ ಮತದಾರರು ತಂಡೋಪತಂಡವಾಗಿ ತಮ್ಮ ತಮ್ಮ ಮತಗಟ್ಟೆ ಕೇಂದ್ರಗಳತ್ತ ಆಗಮಿಸಿ ತಮ್ಮ ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತರು.
ಜಿಲ್ಲೆಯ ಮಲೆ ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿಯ ಕೆಲವು ಗ್ರಾಮದ ಜನರು ಮತದಾನದಿಂದ ದೂರ ಉಳಿದರು. ಆದರೆ ಇಂಡಿಗನತ್ತ ಮತ್ತು ಮಂದರೆ ಗ್ರಾಮಗಳಲ್ಲಿ ನಮಗೆ ಮೂಲಭೂತ ಸೌಕರ್ಯಗಳು ದೊರತಿಲ್ಲ ಎಂದು ಚುನಾವಣೆ ಬಹಿಷ್ಕಾರ ಮಾಡಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು, ಪೊಲೀಸರು ಮಹಿಳೆಯ ಮೇಲೆ ಲಾಠಿ ಚಾರ್ಜ್ ಮಾಡಿದರು ಎಂದು ಗ್ರಾಮಸ್ಥರು ಆಕ್ರೋಶಗೊಂಡು ಮತಗಟ್ಟೆ ಕೇಂದ್ರದೊಳಗೆ ನುಗ್ಗಿ ಮತಯಂತ್ರಗಳನ್ನು ಒಡೆದು ಹಾಕಿದ್ದಾರೆ. ಇನ್ಸ್ಪೆಕ್ಟರ್, ತಹಸಿಲ್ದಾರ್ ಹಾಗೂ ಇತರೆ ಸಿಬ್ಬಂದಿಗಳನ್ನು ಕೂಡಿಹಾಕಿ ಬೆಂಕಿ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಇದರಿಂದ ತಹಸಿಲ್ದಾರ್, ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನೂ ಚಾಮರಾಜನಗರ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಹುತೇಕ ಮತದಾನ ಪ್ರಕ್ರಿಯೆ ಬಿರುಸಿನಿಂದ ಶಾಂತಿಯುತವಾಗಿ ನಡೆಯಿತು. ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನ ಮತದಾನ ನಡೆಯಿತು. ಜಿಲ್ಲೆಯ ಬಹುತೇಕ ಮತಗಟ್ಟೆಗಳಲ್ಲಿ ಬೆಳಗ್ಗೆ 10 ಗಂಟೆಯೊಳಗೆ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.
ಬೆಳಗ್ಗೆ 7 ರಿಂದಲೂ ಮತದಾರರು ತಮ್ಮ ಗುರುತಿನ ಚೀಟಿಗಳನ್ನು ಹಿಡಿದು ಮತ ಚಲಾಯಿಸಲು ಬಾರಿ ಸಂಖ್ಯೆಯಲ್ಲಿ ಮತಗಟ್ಟೆಗಳಲ್ಲಿ ಕಂಡುಬಂದರು. ವಯೋವೃದ್ಧರು, ಅಂಗವಿಕಲರು, ಮಹಿಳೆಯರು, ಯುವಕರು ಉತ್ಸಾಹದಲ್ಲಿ ಮತಗಟ್ಟೆಗೆ ಆಗಮಿಸುತ್ತಿದ್ದ ದೃಶ್ಯ ಜಿಲ್ಲೆಯ ವಿವಿಧೆಡೆ ಕಂಡುಬಂತು. ಅಲ್ಲದೆ ಮೊದಲ ಬಾರಿಗೆ ತಮ್ಮ ಮತ ಚಲಾಯಿಸುತ್ತಿರುವ ಯುವಕ, ಯುವತಿಯರು ಸಂಭ್ರಮದಿಂದ ಮತಗಟ್ಟೆ ಕೇಂದ್ರಗಳತ್ತ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಉಳಿದಂತೆ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮತಚಲಾಯಿಲು ಮತಗಟ್ಟೆ ಕೇಂದ್ರಗಳಿಗೆ ಬರುತ್ತಿದ್ದ ಮತದಾರರನ್ನು ಮತಗಟ್ಟೆ ಕೇಂದ್ರದ 100 ಮೀ. ಅಂತರದಲ್ಲಿ ಓಲೈಸುವ ಕೆಲಸ ಮಾಡುತ್ತಿದ್ದ ದೃಶ್ಯ ಕಂಡುಬಂತು.
ಹಲವೆಡೆ ವಯೋವೃದ್ಧರು, ಅಂಗವಿಕಲರನ್ನು ಕರೆದೊಯ್ದು ಮತ ಚಲಾಯಿಸಿದ್ದು ಕಂಡುಬಂತು. ಬಿಳಿಗಿರಿರಂಗನಬೆಟ್ಟದ ವಿವಿಧ ಹಾಡಿಗಳು, ಕಾಡಂಚಿನ ಗ್ರಾಮಗಳಲ್ಲಿ ಮತಗಟ್ಟೆಗೆ ಮತದಾರರು ಬರಲು ಅನುಕೂಲವಾಗುವಂತೆ ಆಯೋಗದ ವತಿಯಿಂದಲೇ ವಾಹನ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆ ಕೇಂದ್ರಗಳಲ್ಲಿ ಕುಡಿಯುವ ನೀರು, ವೀಲ್ಚೇರ್ ಸೇರಿದಂತೆ ಇತರೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಬಂಡೀಪುರದ ಹಾಡಿಗಳಲ್ಲೂ ಗಿರಿಜನರು ಮತ ಚಲಾಯಿಸಿದರು. ಕೆ.ಗುಡಿ ಸರ್ಕಾರಿ ಬುಡಕಟ್ಟು ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆ ಕೇಂದ್ರದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 90ರಷ್ಟು ಮತದಾನ ಪೂರ್ಣಗೊಂಡಿತ್ತು.
ಎಚ್.ಡಿಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇ 69.20 ರಷ್ಟು, ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಶೇ 62.84 ರಷ್ಟು, ವರುಣ ವಿಧಾನಸಭಾ ಕ್ಷೇತ್ರದಲ್ಲಿ ಶೇ 71.01 ರಷ್ಟು ಹಾಗೂ ಟಿ.ನರಸಿಪುರ ವಿಧಾನಸಭಾ ಕ್ಷೇತ್ರದಲ್ಲಿ 69.06 ರಷ್ಟು ಮತದಾನವಾಗಿದೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ 68.04 ರಷ್ಟು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಶೇ 68.07 ರಷ್ಟು, ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ 71.97 ರಷ್ಟು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 76.76 ರಷ್ಟು ಮತದಾನವಾಗಿದೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ 112880 ಪುರುಷರು, 111793ಮಹಿಳೆಯರು, ಇತರರು 10ಮಂದಿ ಇದ್ದು ಒಟ್ಟಾರೆ 224683 ಮತದಾರರಿದ್ದಾರೆ, ಇವರಲ್ಲಿ75661 ಪುರುಷರು, 77214 ಮಹಿಳೆಯರು 2 ಇತರರು ಸೇರಿದಂತೆ 152877ಮತದಾರರು ಮತದಾನ ಮಾಡಿದ್ದಾರೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 108056 ಪುರುಷರು,111988ಮಹಿಳೆಯರು, ಇತರರು 21 ಮಂದಿ ಇದ್ದು ಒಟ್ಟಾರೆ 220065 ಮತದಾರರಿದ್ದಾರೆ, ಇವರಲ್ಲಿ 73564 ಪುರುಷರು, 76226 ಮಹಿಳೆಯರು 6ಮಂದಿ ಇತರರು ಸೇರಿದಂತೆ 149796ಮತದಾರರು ಮತದಾನ ಮಾಡಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 104903ಪುರುಷರು, 110517 ಮಹಿಳೆಯರು, ಇತರರು 15 ಮಂದಿ ಇದ್ದು ಒಟ್ಟಾರೆ 215435 ಮತದಾರರಿದ್ದಾರೆ, ಇವರಲ್ಲಿ 76293 ಪುರುಷರು, 78756 ಮಹಿಳೆಯರು 1 ಇತರರು ಸೇರಿದಂತೆ 171682 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 105787 ಪುರುಷರು, 110458 ಮಹಿಳೆಯರು, ಇತರರು 16 ಮಂದಿ ಇದ್ದು ಒಟ್ಟಾರೆ 216261 ಮತದಾರರಿದ್ದಾರೆ, ಇವರಲ್ಲಿ 81383 ಪುರುಷರು, 84609 ಮಹಿಳೆಯರು ಸೇರಿದಂತೆ 165994 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 114041 ಪುರುಷರು, 114560ಮಹಿಳೆಯರು, ಇತರರು 12ಮಂದಿ ಇದ್ದು ಒಟ್ಟಾರೆ 228613 ಮತದಾರರಿದ್ದಾರೆ, ಇವರಲ್ಲಿ77944 ಪುರುಷರು, 80240 ಮಹಿಳೆಯರು 6 ಇತರರು ಸೇರಿದಂತೆ 158190ಮತದಾರರು ಮತದಾನ ಮಾಡಿದ್ದಾರೆ.
ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ 110369 ಪುರುಷರು,112381ಮಹಿಳೆಯರು, ಇತರರು 7 ಮಂದಿ ಇದ್ದು ಒಟ್ಟಾರೆ 222757 ಮತದಾರರಿದ್ದಾರೆ, ಇವರಲ್ಲಿ 69991 ಪುರುಷರು, 69979 ಮಹಿಳೆಯರು 3ಮಂದಿ ಇತರರು ಸೇರಿದಂತೆ 139973ಮತದಾರರು ಮತದಾನ ಮಾಡಿದ್ದಾರೆ.
ವರುಣ ವಿಧಾನಸಭಾ ಕ್ಷೇತ್ರದಲ್ಲಿ 119545ಪುರುಷರು, 121395 ಮಹಿಳೆಯರು, ಇತರರು 13 ಮಂದಿ ಇದ್ದು ಒಟ್ಟಾರೆ 240949 ಮತದಾರರಿದ್ದಾರೆ, ಇವರಲ್ಲಿ 86002 ಪುರುಷರು, 85101 ಮಹಿಳೆಯರು 5 ಇತರರು ಸೇರಿದಂತೆ 171108 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 103121 ಪುರುಷರು, 106413 ಮಹಿಳೆಯರು, ಇತರರು 13 ಮಂದಿ ಇದ್ದು ಒಟ್ಟಾರೆ 209547 ಮತದಾರರಿದ್ದಾರೆ, ಇವರಲ್ಲಿ 71334 ಪುರುಷರು, 73374 ಮಹಿಳೆಯರು ಸೇರಿದಂತೆ 144710 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಬಾಕ್ಸ್:
ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 69.60 ರಷ್ಟು ಮತದಾನವಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 17,78,310 ಮತದಾರರಿದ್ದು, 8,78,702 ಪುರುಷರು, 8,99,501 ಮಹಿಳೆಯರು ಹಾಗೂ 107 ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಈ ಪೈಕಿ 351642 ಪುರುಷರು, 352179 ಮಹಿಳೆಯರು, 14 ಇತರೆ ಮಂದಿ ಸೇರಿದಂತೆ ಒಟ್ಟು 703835 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
