PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ವಿಶ್ವ ಏಡ್ಸ್ ದಿನ: ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಹೆಚ್​ಐವಿ ಹರಡುವಿಕೆಯ ಪ್ರಮಾಣ ಹೆಚ್ಚಳ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಜಿಲ್ಲೆ > ವಿಶ್ವ ಏಡ್ಸ್ ದಿನ: ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಹೆಚ್​ಐವಿ ಹರಡುವಿಕೆಯ ಪ್ರಮಾಣ ಹೆಚ್ಚಳ
ಜಿಲ್ಲೆ

ವಿಶ್ವ ಏಡ್ಸ್ ದಿನ: ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಹೆಚ್​ಐವಿ ಹರಡುವಿಕೆಯ ಪ್ರಮಾಣ ಹೆಚ್ಚಳ

Prathinidhi News
Last updated: December 1, 2023 10:14 am
Prathinidhi News
Published December 1, 2023
Share
SHARE

ಬೆಂಗಳೂರು ಡಿ.01: ರಾಷ್ಟ್ರೀಯ ಸರಾಸರಿಗಿಂತ ಕರ್ನಾಟಕದಲ್ಲಿ ಏಡ್ಸ್​ (HIV) ಸೋಂಕಿತರ ಸಂಖ್ಯೆ ಶೇ 0.29 ರಷ್ಟು ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿ ಶೇ 0.22 ರಷ್ಟಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ದ ಅಂಕಿಅಂಶಗಳ ಪ್ರಕಾರ ಏಡ್ಸ್​ ರೋಗದಿಂದ ಬಳಲುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಶೇ 1.61 ಮೂಲಕ ನಾಗಾಲ್ಯಾಂಡ್ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕವು  ಒಂಬತ್ತನೇ ಸ್ಥಾನದಲ್ಲಿದೆ. ನಾಗಾಲ್ಯಾಂಡ್ ನಂತರ ಮಿಜೋರಾಂನಲ್ಲಿ ಶೇ 1.13, ಮೇಘಾಲಯದಲ್ಲಿ ಶೇ 0.58, ದೆಹಲಿಯಲ್ಲಿ ಶೇ 0.41, ತ್ರಿಪುರ ಮತ್ತು ಚಂಡೀಗಢ ತಲಾ ಶೇ 0.38, ಆಂಧ್ರ ಪ್ರದೇಶದಲ್ಲಿ ಶೇ 0.37, ಮಣಿಪುರದಲ್ಲಿ ಶೇ 0.33, ಮತ್ತು ಕರ್ನಾಟಕದಲ್ಲಿ ಶೇ 0.29 ರಷ್ಟು ಜನರಿಗೆ ಹೆಚ್​ಐವಿ ಸೋಂಕು ತಗುಲಿದೆ. ಡಿಸೆಂಬರ್ 1 ಅನ್ನು ವಿಶ್ವ ಏಡ್ಸ್ ದಿನವಾಗಿ ಆಚರಿಸಲಾಗುತ್ತದೆ.

ದೇಶದಲ್ಲಿ ಹೆಚ್ಚಾಗಿ ಏಡ್ಸ್​ ರೋಗದಿಂದ ಬಳಲುತ್ತಿರುವವರು 15-49 ವರ್ಷದ ಒಳಗಿನವರು. 2000ನೇ ಇಸ್ವಿಯಲ್ಲಿ ಹೆಚ್​ಐವಿ ಸೋಂಕಿತರ ಸಂಖ್ಯೆ 0.55 ರಷ್ಟಿತ್ತು. 2010 ರಲ್ಲಿ ಸೋಂಕಿತರ ಸಂಖ್ಯೆ 0.32 ರಷ್ಟು ಇದ್ದರೇ 2021 ರಲ್ಲಿ 0.22 ರಷ್ಟು ಜನರು ಏಡ್ಸ್​ ರೋಗದಿಂದ ಬಳಲುತ್ತಿದ್ದರು. ಹೆಚ್ಚಾಗಿ ಈಶಾನ್ಯ ರಾಜ್ಯಗಳ ವಯಸ್ಕರು ಏಡ್ಸ್​​ ರೋಗದಿಂದ ಬಳಲುತ್ತಿದ್ದಾರೆ. ಮಿಜೋರಾಂನಲ್ಲಿ ಶೇ2.70, ನಾಗಾಲ್ಯಾಂಡ್‌ನಲ್ಲಿ ಶೇ1.36 ಮತ್ತು ಮಣಿಪುರದಲ್ಲಿ ಶೇ1.05 ರಷ್ಟು ಜನರು ಏಡ್ಸ್​​ ರೋಗದಿಂದ ಬಳಲುತ್ತಿದ್ದಾರೆ.

ನಂತರದ ಸ್ಥಾನದಲ್ಲಿ ದಕ್ಷಿಣ ಭಾರತ ರಾಜ್ಯಗಳಿವೆ. 2021ರ ಅಂಕಿಅಂಶಗಳ ಪ್ರಕಾರ, ಆಂಧ್ರಪ್ರದೇಶದಲ್ಲಿ ಶೇ 0.67ರಷ್ಟು, ತೆಲಂಗಾಣದಲ್ಲಿ ಶೇ 0.47 ರಷ್ಟು ಮತ್ತು ಕರ್ನಾಟಕದಲ್ಲಿ ಶೇ0.46 ರಷ್ಟು ಜನರು ಏಡ್ಸ್​ ರೋಗದಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ಹೆಚ್​ಐವಿ ಟೆಸ್ಟ್​ ಪಾಸಿಟಿವಿಟಿ ರೇಟ್​ (TPR) ಇಳಿಮುಖವಾಗುತ್ತಿದೆ. 2017ರಿಂದ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕರ್ನಾಟಕದಲ್ಲಿ ಹೆಚ್​ಐವಿ ರೋಗ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.

ಪ್ರಸವಪೂರ್ವ ಆರೈಕೆ (ANC) ಅಡಿಯಲ್ಲಿ 2017-2018 ರಲ್ಲಿ ಶೇ0.06 ರಷ್ಟು, 2023-2024 ರಲ್ಲಿ (ಅಕ್ಟೋಬರ್ ಅಂತ್ಯದವರೆಗೆ) ಶೇ 0.03 ಮಹಿಳೆಯರಲ್ಲಿ ಹೆಚ್​ಐವಿ ರೋಗ ಪತ್ತೆಯಾಗಿದೆ. ಇಂಟಿಗ್ರೇಟೆಡ್ ಕೌನ್ಸೆಲಿಂಗ್ ಮತ್ತು ಟೆಸ್ಟಿಂಗ್ ಸೆಂಟರ್‌ಗಳಲ್ಲಿ (ICTC) ಪ್ರಕಾರ 2017-2018 ರಲ್ಲಿ ಶೇ0.85 ರಷ್ಟು ಜನರು ಮತ್ತು 2023-2024 (ಅಕ್ಟೋಬರ್ ಅಂತ್ಯದವರೆಗೆ) ಶೇ 0.36 ರಷ್ಟು ಜನರಲ್ಲಿ ಏಡ್ಸ್​ ರೋಗ ಪತ್ತೆಯಾಗಿದೆ.

- ಜಾಹೀರಾತು -

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿಯ ಡೇಟಾ ಪ್ರಕಾರ (KSAPS) 2022-2023 ರಲ್ಲಿ, 33,23,365 (ಶೇ0.39) ರಷ್ಟು ಜನರು ರೋಗದಿಂದ ಬಳಲಿದ್ದರು. ಎಎನ್​ಸಿ ಪರೀಕ್ಷಾ ವರದಿ ಪ್ರಕಾರ 2023-24 (ಅಕ್ಟೋಬರ್ ಅಂತ್ಯದವರೆಗೆ) 14,26,667 (ಶೇ0.04) ರಷ್ಟು ಮಹಿಳೆಯರಲ್ಲಿ ಏಡ್ಸ್​ ರೋಗ ಪತ್ತೆಯಾಗಿದೆ.

ಕೆಎಸ್​ಎಪಿಎಸ್​ ಜಂಟಿ ನಿರ್ದೇಶಕ ಅನ್ಸಾರ್ ಅಹ್ಮದ್ ಪ್ರಸ್ತುತ 81 ಆಂಟಿ-ರೆಟ್ರೋವೈರಲ್ ಥೆರಪಿ (ART) ಚಿಕಿತ್ಸೆ ಕೇಂದ್ರಗಳಲ್ಲಿ, 71 ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ 10 ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಗಳ ಅಡಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಹೊಸದಾಗಿ ಮಂಜೂರಾದ ಕೇಂದ್ರಗಳಾಗಿವೆ. ಇನ್ನೂ ಕಾರ್ಯರೂಪಕ್ಕೆ ಬರಬೇಕಿದೆ. ಇದಲ್ಲದೆ, ನಾವು 303 ಕ್ರಿಯಾತ್ಮಕ ಲಿಂಕ್ ಎಆರ್​ಟಿ ಕೇಂದ್ರಗಳನ್ನು ಹೊಂದಿದ್ದೇವೆ ಎಂದು ಹೇಳಿದರು.

ಎಆರ್​ಟಿ ಕೇಂದ್ರಗಳಲ್ಲಿ ಅಕ್ಟೋಬರ್ 2023 ರವರೆಗೆ 3,86,056 ಹೆಚ್​ಐವಿ ಪ್ರಕರಣಗಳು ದಾಖಲಾಗಿವೆ. 1,85,536 ಪ್ರಕರಣಗಳು ಜೀವಂತವಾಗಿವೆ ಮತ್ತು ಎಆರ್​ಟಿ ಚಿಕಿತ್ಸೆ ನೀಡಲಾಗುತ್ತಿವೆ. ಕರ್ನಾಟಕದಲ್ಲಿ ಇದುವರೆಗೆ ರೋಗದಿಂದ ಒಂದು ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದಾಗ್ಯೂ, ನಮ್ಮ ಹರಡುವಿಕೆಯ ಪ್ರಮಾಣವು ಇಳಿಮುಖವಾಗುತ್ತಿದ್ದು, 2019 ರಲ್ಲಿ 16ನೇ ಸ್ಥಾನದಿಂದ 2021 ರಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ. 2030 ರ ವೇಳೆಗೆ ಶೂನ್ಯ ಸಾಧಿಸುವುದು ರಾಜ್ಯದ ಗುರಿಯಾಗಿದೆ.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಜಿಲ್ಲೆ

ಕನ್ನಡದ ಬಗ್ಗೆ ಅಭಿಮಾನ ಇರಲಿ ದುರಭಿಮಾನ ಬೇಡ: ಸಿಎಂ ಸಿದ್ದರಾಮಯ್ಯ

November 22, 2023
ಜಿಲ್ಲೆಮುಖಪುಟಮೈಸೂರು ನಗರರಾಜಕೀಯ

ಇದು ಅವರ ಕಲ್ಚರ್‌ ತೋರಿಸುತ್ತದೆ: ಜಮೀರ್‌ ಗೆ ಹೆಚ್‌ ಡಿ ಕೆ ಟಾಂಗ್‌

November 15, 2024
ಜಿಲ್ಲೆ

ಜನವರಿ 16ರ ಮಧ್ಯರಾತ್ರಿಯಿಂದ ಬೆಂಗಳೂರಿನಲ್ಲಿ ಲಾರಿ ಮುಷ್ಕರ

January 11, 2024
ಜಿಲ್ಲೆ

ಅರ್ಜುನನ ಸಾವಿನ ನೋವಿನೊಂದಿಗೆ ಸ್ಥಗಿತಗಿಂಡಿದ್ದ ಕಾಡಾನೆ ಕಾರ್ಯಾಚರಣೆ ನಾಳೆಯಿಂದ ಮತ್ತೆ ಆರಂಭ

January 10, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?