ಮೈಸೂರು: ನಿನ್ನೆ (ನ.10)ಜಿಲ್ಲೆಯ ಹುಣಸೂರು ತಾಲೂಕಿನ ಮಂಜುನಾಥ ಬಡಾವಣೆಯಲ್ಲಿ ಮಗು ಶಾಲಾ ವಾಹನದಿಂದ ಇಳಿದಿದೆ. ಅದೇ ವಾಹನದ ಮುಂಭಾಗದಿಂದ ಮನೆ ಕಡೆ ಹೋಗುವಾಗ ಏಕಾಏಕಿ ಚಾಲಕ ವಾಹನವನ್ನು ಚಲಾಯಿಸಿದ್ದಾನೆ. ಮನೆಗೆ ಹೋಗುವಾಗ ಚಾಲಕನ ನಿರ್ಲಕ್ಷ್ಯದಿಂದ ವಾಹನ ಮಗುವಿನ ಮೇಲೆ ಹರಿದಿದೆ. ಘಟನೆಯಲ್ಲಿ ಮಗುವಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿಸಿದೆ. ಮಗುವಿನ ಮೇಲೆ ಶಾಲಾ ವಾಹನ ಹರಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
