18 ನೇ ಸೆಕೆಂಡ್ಸ್ನಲ್ಲಿ ಅಜ್ಜಮಾಡ ಸೋಮಯ್ಯ ಗೋಲು ದಾಖಲು । ಕುಂಡ್ಯೋಳಂಡ ಹಾಕಿ ನಮ್ಮೆ
ಸಣ್ಣುವಂಡ ಕಿಶೋರ್ ನಾಚಪ್ಪ ನಾಪೋಕ್ಲು
ಕುಂಡ್ಯೋಳಂಡ ಒಕ್ಕ, ಕೊಡವ ಹಾಕಿ ಅಕಾಡೆಮಿ ಸಹಯೋಗದಲ್ಲಿ ಕೆಪಿಎಸ್ ಶಾಲೆಯ ಜನರಲ್ ಕೆ. ಎಸ್. ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಹಾಕಿ ನಮ್ಮೆಯಲ್ಲಿ ಭಾನುವಾರ 17 ತಂಡಗಳು ಗೆಲುವು ದಾಖಲಿಸಿದವು.
ಫಲಿತಾಂಶ: ಕೋಡಿಮಣಿಯಂಡಕ್ಕೆ ತೀತರಮಾಡ ವಿರುದ್ದ 1-0 ಗೋಲುಗಳ ಗೆಲುವು ದೊರೆಯಿತು. 31 ನೇ ನಿಮಿಷದಲ್ಲಿ ಕೋಡಿಮಣಿಯಂಡ ಉತ್ತಪ್ಪ ಬಾರಿಸಿದ ಏಕೈಕ ಗೋಲು ಫಲಿತಾಂಶಕ್ಕೆ ಕಾರಣವಾಯಿತು.
ಸಣ್ಣುವಂಡವು ಮೂಕಚಂಡ ವಿರುದ್ದ 7-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿತು. 17, 18, 22 ರಲ್ಲಿ ಅಂತಾರಾಷ್ಟ್ರೀಯ ಹಾಕಿ ಆಟಗಾರ ಸಣ್ಣುವಂಡ ಕೆ. ಉತ್ತಪ್ಪ ಹ್ಯಾಟ್ರಿಕ್ ಗೋಲು ಹೊಡೆದು ಹುರಿ ದುಂಬಿಸಿದರು. ಪ್ರತಿಯಾಗಿ 4, 9, 23 ರಲ್ಲಿ ಎಸ್. ಸಿ ಪೊನ್ನಣ್ಣ ಮೂರು ಗೋಲು, 26 ರಲ್ಲಿ ಯತಿಕ್ ಅಯ್ಯಪ್ಪ 1 ಗೋಲು ದಾಖಲಿಸಿ, ಗೆಲುವಿನ ಅಂತರ ಹೆಚ್ಚಿಸಿದರು. 13 ರಲ್ಲಿ ಮೂಕಚಂಡ ಮುತ್ತಪ್ಪ ತಲಾ ಒಂದೊಂದು ಗೋಲು ಬಾರಿಸಿದರು.
ಬಾದುವಂಡಕ್ಕೆ ಕಬ್ಬಚ್ಚೀರ ವಿರುದ್ದ 1-0 ಗೋಲುಗಳ ಜಯ ದೊರೆಯಿತು. 23 ರಲ್ಲಿ ಬಾದುಮಂಡ ಅಮನ್ ಅಯ್ಯಪ್ಪ 1 ಗೋಲು ಹೊಡೆದರು.
ಮುಕ್ಕಾಟೀರ (ಹರಿಹರ) ಕೋಲೀರ ವಿರುದ್ದ 3-0 ಗೋಲುಗಳಿಂದ ಜಯಿಸಿತು. 5, 8 ರಲ್ಲಿ ಮುಕ್ಕಾಟೀರ ಮೋನಿಶ್ ಮಂದಣ್ಣ ಜೋಡಿ ಗೋಲು, 22 ರಲ್ಲಿ ಭವನ್ ಗಣಪತಿ 1 ಗೋಲು ಹೊಡೆದರು.
ಮಂಡೇಟಿರಕ್ಕೆ ಕುಟ್ಟೇಟಿರ ವಿರುದ್ದ 4-0 ಗೋಲುಗಳ ಜಯ ದೊರೆಯಿತು. 8, 39 ರಲ್ಲಿ ಮಂಡೇಟೀರ ನೇಹಲ್ ಜೋಡಿ ಗೋಲು, 27 ರಲ್ಲಿ ಧನುಷ್ ಕಾರ್ಯಪ್ಪ, 34 ರಲ್ಲಿ ಕಾರ್ಯಪ್ಪ ತಲಾ ಒಂದೊಂದು ಗೋಲು ಬಾರಿಸಿದರು.
ಬೊವ್ವೇರಿಯಂಡವು ಕಾವಾಡಿಚಂಡ ವಿರುದ್ದ 2-0 ಗೋಲುಗಳ ಜಯ ಸಾಧನೆ ಮಾಡಿತು. 6 ನೇ ನಿಮಿಷದಲ್ಲಿ ಬೊವ್ವೇರಿಯಂಡ ಮುತ್ತಣ್ಣ, 22 ರಲ್ಲಿ ಗ್ಯಾನ್ ಉತ್ತಪ್ಪ ಗೋಲು ಹೊಡೆದು ಮಿಂಚಿದರು.
ಮಂಡೇಪAಡಕ್ಕೆ ನಾಳಿಯಂಡ ವಿರುದ್ದ 6-1 ಗೊಲು ಗೆಲುವು ದೊರೆಯಿತು. 6, 10, 24 ರಲ್ಲಿ ಮಂಡೇಪAಡ ಚಂದನ್ ಕಾರ್ಯಪ್ಪ ಮೂರು ಗೋಲು ಸಿಡಿಸಿದರು. 20 ರಲ್ಲಿ ಚೆಂಗಪ್ಪ, 25 ರಲ್ಲಿ ಸಿದ್ದು ಪೂವಯ್ಯ, 33 ರಲ್ಲಿ ನಾಳಿಯಂಡ ಕವನ್ ತಲಾ ಒಂದೊAದು ಗೋಲು ಬಾರಿಸಿದರು.
ಮೇವಡಕ್ಕೆ ಅಜ್ಜಿಕುಟ್ಟೀರ ವಿರುದ್ದ 3-0 ಗೋಲುಗಳ ಜಯ ದೊರೆಯಿತು. 11, 25 ರಲ್ಲಿ ಮೇವಡ ಬೆಳ್ಯಪ್ಪ, 12 ರಲ್ಲಿ ತಮ್ಮಯ್ಯ 1 ಗೋಲು ಹೊಡೆದು ಪಂದ್ಯ ಗೆಲ್ಲಿಸಿದರು.
ಚಿಮ್ಮಣಮಾಡವು ಗುಮ್ಮಟ್ಟೀರವನ್ನು 3-1 ಗೋಲುಗಳಿಂದ ಸೋಲಿಸಿತು. 11, 16 ನೇ ನಿಮಿಷಗಳಲ್ಲಿ ಚಿಮ್ಮಣಮಾಡ ಸಜನ್ ಗಣಪತಿ ಜೋಡಿ ಗೋಲು, 24 ರಲ್ಲಿ ಸಚಿನ್ ಅಯ್ಯಪ್ಪ, ಗುಮ್ಮಟ್ಟೀರ ದೊರೆ ಚಿಣ್ಣಪ್ಪ ತಲಾ ಒಂದೊಂದು ಗೋಲು ಹೊಡೆದರು.
ಅಪ್ಪಾಂಡೇರಂಡವು ಪುಗ್ಗೇರವನ್ನು 4-1 ಗೋಲುಗಳಿಂದ ಮಣಿಸಿತು. 9, 18, 25 ರಲ್ಲಿ ಅಪ್ಪಂಡೇರAಡ ವಿನೇಶ್ ಪೂವಯ್ಯ ಮೂರು ಗೋಲು ಸಿಡಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. 4 ರಲ್ಲಿ ಸುಮನ್ ಚೆಂಗಪ್ಪ, 12 ರಲ್ಲಿ ಪುಗ್ಗೇರ ವಿಶಾಲ್ ಒಂದೊಂದು ಗೋಲು ಹೊಡೆದರು.
ಚಂದುರಕ್ಕೆ ಕೋದಂಡ ವಿರುದ್ದ 1-0 ಗೋಲುಗಳ ಜಯ ದೊರೆಯಿತು. 29 ನೇ ನಿಮಿಷದಲ್ಲಿ ಚಂದುರ ಶ್ಯಾಮ್ ಬಾರಿಸಿದ ಏಕೈಕ ಗೋಲು ಗೆಲುವು ತಂದುಕೊಟ್ಟಿತು.
ಗಾಂಡಂಗಡ ತಂಡವು ಅಲೆಮಾಡವನ್ನು 1-0 ಗೋಲಿನಿಂದ ಮಣಿಸಿತು. 5 ನೇ ನಿಮಿಷದಲ್ಲಿ ಗಾಂಡAಗಡ ಬಿಪಿನ್ ಬೋಪಣ್ಣ 1 ಗೋಲು ಹೊಡೆದರು.
ಅಜ್ಜಮಾಡಕ್ಕೆ ಕೊಂಡೀರ ವಿರುದ್ದ ಟೈಬ್ರೇಕರ್‌ನಲ್ಲಿ 6-5 ಗೋಲುಗಳ ಗೆಲುವು ದೊರೆಯಿತು. ಪಂದ್ಯ ಆರಂಭದ 18 ನೇ ಸೆಕೆಂಡ್ಸ್ನಲ್ಲಿ ಅಜ್ಜಮಾಡ ಸೋಮಯ್ಯ ಗೋಲು ಹೊಡೆದು ಮಿಂಚು ಹರಿಸಿದರು. 40 ರಲ್ಲಿ ಅಜ್ಜಮಾಡ ಪಿ. ಚೆಂಗಪ್ಪ, 6, 23 ರಲ್ಲಿ ಕೊಂಡೀರ ಕೀರ್ತಿ ಮುತ್ತಪ್ಪ ಜೋಡಿ ಗೋಲು ಬಾರಿಸಿದರು. ಉಭಯ ತಂಡಗಳು ಪಂದ್ಯದ ನಿಗದಿತ ಸಮಯದಲ್ಲಿ 2-2 ಗೋಲುಗಳ ಸಮ ಸಾಧನೆ ಮಾಡಿತು.
ಕಾಳಿಮಾಡಕ್ಕೆ ಉದ್ದಪಂಡ ವಿರುದ್ದ 1-0 ಗೋಲುಗಳ ಜಯ ದೊರೆಯಿತು. 6 ನೇ ನಿಮಿಷದಲ್ಲಿ ಕಾಳಿಮಾಡ ಡ್ಯಾನಿ 1 ಗೋಲು ಬಾರಿಸಿದರು.
ಮುಂಡಚಾಡೀರಕ್ಕೆ ಬೇರೇರ ವಿರುದ್ದ 1-0 ಗೋಲುಗಳ ನೀರಸ ಜಯ ದೊರೆಯಿತು. 26 ರಲ್ಲಿ ಮುಂಡಚಾಡೀರ ರಜತ್ ಬಾರಿಸಿದ ಏಕೈಕ ಗೋಲು ಗೆಲುವು ತಂದುಕೊಟ್ಟಿತು.
ನಾಗಂಡಕ್ಕೆ ಕೊಣಿಯಂಡ ವಿರುದ್ದ 1-0 ಗೋಲುಗಳ ಗೆಲುವು ದೊರೆಯಿತು. 10 ನೇ ನಿಮಿಷದಲ್ಲಿ ನಾಗಂಡ ನಾಚಪ್ಪ ಬಾರಿಸಿದ ಏಕೈಕ ಗೋಲು ಕೊಣಿಯಂಡಕ್ಕೆ ಸೋಲಿನ ರುಚಿ ತೋರಿಸಿತು.
ಚೇರಂಡವು ಕೈಬಿಲೀರವನ್ನು 3-0 ಗೋಲುಗಳಿಂದ ಮಣಿಸಿತು. 18, 33 ರಲ್ಲಿ ಚೇರಂಡ ನಯನ್ ಮಾದಪ್ಪ ಜೋಡಿ ಗೋಲು, 17 ರಲ್ಲಿ ರಕ್ಷಿತ್ 1 ಗೋಲು ಹೊಡೆದರು.
ಪಂದ್ಯ ಶ್ರೇಷ್ಠರು: ತೀತರಮಾಡ ತನುಷ್ ಗಣಪತಿ, ಮೂಕಚಂಡ ಮುತ್ತಪ್ಪ, ಕಬ್ಬಚ್ಚೀರ ಪ್ರಜ್ವಲ್, ಕೋಲೀರ ಮನೋಜ್, ಕುಟ್ಟೇಟಿರ ಮಾದಪ್ಪ, ಕಾವಾಡಿಚಂಡ ಕೀರ್ತನ್, ನಾಳಿಯಂಡ ಕವನ್, ಅಜ್ಜಿಕುಟ್ಟೀರ ಪ್ರಕುಲ್, ಗುಮ್ಮಟ್ಟೀರ ಮುತ್ತಣ್ಣ, ಪುಗ್ಗೇರ ಅನೂಪ್ ಮಂದಣ್ಣ, ಕೋದಂಡ ನಿಖಿಲ್, ಆಲೆಮಾಡ ತಿಮ್ಮಯ್ಯ, ಕೊಂಡೀರ ಜನಿತ್ ಅಯ್ಯಪ್ಪ, ಉದ್ದಪಂಡ ದಕ್ಷ್ ದೇವಯ್ಯ, ಬೇರೆರ ಬೆಳ್ಯಪ್ಪ, ಕೊಣಿಯಂಡ ಅಮೂಲ್ಯ (ಮಹಿಳೆ), ಕೈಬಿಲೀರ ಕುಟ್ಟಪ್ಪ.
ಇಂದಿನ ಪಂದ್ಯಗಳು
ಮೈದಾನ 1
ಬೆ. 9 ; ಚೋಳಂಡ – ಬಿದ್ದಂಡ
10 ; ಚೋಕೀರ- ಚೆಯ್ಯಂಡ
11 ; ಕಾಂಡೇರ-ಮಾಣೀರ
ಮ. 1 ; ಮುಕ್ಕಾಟೀರ (ಬೋಂದ) – ಬಿದ್ದಾಟಂಡ
2 ; ಬಟ್ಟಿಯಂಡ-ಅಳಮೇಂಗಡ
3 ; ಕಾಂಗೀರ-ಮೇಕೇರಿರ
ಮೈದಾನ 2
ಬೆ. 9 ; ಐನಂಡ-ಚೇರಂಡ
10 ; ಕಂಬೇಯಂಡ-ಕೊಳುಮಾಡಂಡ
11 ; ಮಂದನೆರವಂಡ-ಕೋಲತಂಡ
ಮ.1 ; ಪೋರಂಗಡ-ಮುರುವಂಡ
2 ; ಚೌರೀರ (ಹೊದ್ದೂರು) – ಅಯ್ಯನೆರವಂಡ
3 ; ಮಲಚೀರ-ಐತಿಚಂಡ
ಮೈದಾನ 3
ಬೆ. 9 ; ಮಾತಂಡ-ಐಚೇಟೀರ
10 ; ಮೊಳ್ಳೇರ-ಚಂಗೇಟೀರ
11 ; ಮಚ್ಚಂಡ-ಮುದ್ದಂಡ
ಮ. 1 ; ಮುಕ್ಕಾಟೀರ (ಮೂವತೊಕ್ಲು) – ಚೇಂದೀರ
2 ; ಕೊಲ್ಲೀರ -ಬೊಳಕಾರಂಡ
3 ; ಪಾಲೇಂಗಡ-ಅಪ್ಪನೆರವಂಡ
ಫೋಟೋ 5 ಎಂಡಿಕೆ 05 ; ಚಿಮ್ಮಣಮಾಡ – ಗುಮ್ಮಟ್ಟೀರ ತಂಡಗಳ ಹೋರಾಟ
06 ; ಕೈಬಿಲೀರ-ಚೇರಂಡ ನಡುವಿನ ಪಂದ್ಯ


