ಮೈಸೂರು, ಫೆಬ್ರವರಿ 17, 2026 : ನಗರದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ದ್ವಿಚಕ್ರ ವಾಹನಗಳ ಕರ್ಕಶ ಸೈಲೆನ್ಸರ್ಗಳ ವಿರುದ್ಧ ಮೈಸೂರು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ದೋಷಪೂರಿತ ಹಾಗೂ ಅತಿ ಹೆಚ್ಚು ಶಬ್ದ ಮಾಡುವ ಸೈಲೆನ್ಸರ್ಗಳನ್ನು ಅಳವಡಿಸಿಕೊಂಡು ಸಂಚರಿಸುತ್ತಿದ್ದ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ ಪೊಲೀಸರು, ಇಂದು ಬರೋಬ್ಬರಿ 378 ಸೈಲೆನ್ಸರ್ಗಳನ್ನು ರೋಡ್ ರೋಲರ್ ಹತ್ತಿಸಿ ನಾಶಪಡಿಸಿದ್ದಾರೆ.

ರಸ್ತೆಗಳಲ್ಲಿ ಅತಿಯಾದ ಶಬ್ದ ಮಾಡುತ್ತಾ, ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಅವುಗಳಲ್ಲಿದ್ದ ಸೈಲೆನ್ಸರ್ಗಳನ್ನು ಬಿಚ್ಚಿಸಿ ರಾಶಿ ಹಾಕಿದ್ದರು. ಮೈಸೂರಿನ ಸಾರ್ವಜನಿಕರ ಸಮ್ಮುಖದಲ್ಲೇ ಇವುಗಳ ಮೇಲೆ ರೋಡ್ ರೋಲರ್ ಹರಿಸಲಾಗಿದ್ದು, ನೂರಾರು ಸೈಲೆನ್ಸರ್ಗಳು ಕ್ಷಣಾರ್ಧದಲ್ಲಿ ನಜ್ಜುಗುಜ್ಜಾದವು. ಕರ್ಕಶ ಶಬ್ದ ಮಾಡಿ ಪುಂಡಾಟಿಕೆ ನಡೆಸುವವರಿಗೆ ಈ ಮೂಲಕ ಮೈಸೂರು ಪೊಲೀಸರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
