ಮೈಸೂರು, ಫೆಬ್ರವರಿ 10, 2026 : ನಗರದ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ 71/2025, ಕಲಂ 331(4) ಹಾಗೂ 305 ಬಿ.ಎನ್.ಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಬೈರಾಕುರ ಹೋಬಳಿ, ಹೆಬ್ಬಾಣಿ ಗ್ರಾಮದ ನಿವಾಸಿ ನರಸಿಂಹಯ್ಯ ಅವರ ಪುತ್ರ ಅರುಣ್ ಕುಮಾರ್ @ ಅರುಣ್ (33 ವರ್ಷ) ಎಂದು ಗುರುತಿಸಲಾಗಿದೆ.ಬಂಧಿತನಿಂದ ಕೃತ್ಯಕ್ಕೆ ಸಂಬಂಧಿಸಿದ ಸುಮಾರು 14 ಲಕ್ಷ ರೂಪಾಯಿ ಮೌಲ್ಯದ ಮಹೇಂದ್ರ ಥಾರ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೈಸೂರು ಸಿಸಿಬಿಯ ಪೊಲೀಸ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಅನಿಲ್‌ಕುಮಾರ್.ಎನ್, ಎ.ಎಸ್.ಐ ಸುರೇಶ್.ಆರ್ ಹಾಗೂ ಸಿಬ್ಬಂದಿಗಳಾದ ಜಗದೀಶ್ (ಸಿಹೆಚ್‌ಸಿ 534), ಪ್ರಕಾಶ್.ಟಿ (ಸಿಹೆಚ್‌ಸಿ 132), ಜಯರಾಮ್ (ಸಿಹೆಚ್‌ಸಿ 287) ಮತ್ತು ರಾಘವೇಂದ್ರ (ಸಿಪಿಸಿ 1128) ಸೇರಿದಂತೆ ತಂಡದ ಇತರ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಪೊಲೀಸ್ ತಂಡದ ಈ ಚುರುಕಿನ ಕಾರ್ಯವೈಖರಿ ಮತ್ತು ಯಶಸ್ವಿ ಕಾರ್ಯಾಚರಣೆಯನ್ನು ಮೈಸೂರು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದು, ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
