ಶಿವಮೊಗ್ಗ: ನಗರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಆಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದರು. ‘ ಶಿವಮೊಗ್ಗ – ಭದ್ರಾವತಿ ಸಮಗ್ರ ಅಭಿವೃದ್ಧಿಗಾಗಿ 700-800 ಕೋಟಿ ವೆಚ್ಚದಲ್ಲಿ ಯೋಜನೆ ತರಲು ತೀರ್ಮಾನ ಮಾಡಲಾಗಿ, ಮುಂದಿನ ದಿನಗಳಲ್ಲಿ ಎಲ್ಲಾ ಕೆಲಸ ಅನುಷ್ಠಾನ ಮಾಡಲು ಸರಕಾರ ತೀರ್ಮಾನಿಸಿದೆ. ಇತರೆ ದೊಡ್ಡ ದೊಡ್ಡ ನಗರಗಳಿಗೆ ಹೋಲಿಸಿದರೆ ಶಿವಮೊಗ್ಗದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಹಳ ಕಡಿಮೆ ಲೇಔಟ್ ಆಗಿದೆ. ಸರಕಾರದಿಂದ ಸಾರ್ವಜನಿಕರಿಗೆ ಬಡವರಿಗೆ ನಿವೇಶನ ಕೊಡುವವರೆಗೆ ಖಾಸಗಿ ಲೇಔಟ್ ಗೆ ಅನುಮತಿ ನೀಡದಂತೆ ಸೂಚಿಸಲಾಗಿದೆ ಎಂದರು.