ತುಮಕೂರಿನ ಪರಮೇಶ್ವರ್ ಸಾಥ್ । ಬೆಂಗಳೂರು ಗ್ರಾಮಾಂತರದಲ್ಲಿ ಮುನಿರತ್ನ ಹಾಜರು
ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಪತ್ನಿ ಅನುಸೂಯ, ಬಿಜೆಪಿ ಶಾಸಕರಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಎಂ . ಕೃಷ್ಣಪ್ಪ ಹಾಗೂ ಮುನಿರತ್ನ ಅವರು ಮಂಜುನಾಥ್ ಅವರಿಗೆ ನಾಮಪತ್ರ ಸಲ್ಲಿಸಲು ಸಾಥ್ ನೀಡಿದರು.
ಶಕ್ತಿ ಪ್ರದರ್ಶನ : ನಾಮಪತ್ರ ಸಲ್ಲಿಸುವುದಕ್ಕೆ ಮುಂಚೆ ಮಂಜುನಾಥ್ ಅವರು, ನಗರದ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪತ್ನಿ ಮತ್ತು ಮುಖಂಡರೊಂದಿಗೆ ಪೂಜೆ ಸಲ್ಲಿಸಿದರು. ಬಳಿಕ, ಜಿಲ್ಲಾ ಪೊಲೀಸ್ ಕಚೇರಿ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದರು.
ಬಿಜೆಪಿ ಶಾಸಕರು, ಮೈತ್ರಿ ಪಕ್ಷದ ಮುಖಂ ಡರು ಹಾಗೂ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಡೊಳ್ಳು, ತಮಟೆ ಹಾಗೂ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದವು.
ರಾಮನಗರಕ್ಕೆ ಆಗಮಿಸುವುದಕ್ಕೂ ಮುನ್ನ ಬೆಂಗಳೂರು ನಿವಾಸದಲ್ಲಿ ಬೆಳಗ್ಗೆ ಹಿತೈಷಿಗಳು ಡಾ.ಸಿ.ಎನ್ . ಮಂಜುನಾಥ್ ಅವರಿಗೆ ಆರತಿ ಬೆಳಗಿ, ತಿಲಕವಿಟ್ಟು ಶುಭ ಕೋರಿದರು. ತರುವಾಯ ಮಂಜುನಾಥ್ ರವರು ಬೆಂಗಳೂರಿನಿಂದ ನೇರವಾಗಿ ರಾಮನಗರಕ್ಕೆ ಆಗಮಿಸಿದರು.
ರಾಮನಗರದ ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಪತ್ನಿ ಅನುಸೂಯ ಅವರೊಂದಿಗೆ ಮಂಜುನಾಥ್ ರವರು ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಮಾಜಿ ಸಚಿವ ಮುನಿರತ್ನ ಮತ್ತಿತರ ನಾಯಕರು ಸಾಥ್ ನೀಡಿದರು.
ಪಿಡಬ್ಲ್ಯೂಡಿ ವೃತ್ತದಿಂದ ಜಿಲ್ಲಾ ಕಚೇರಿಗಳ ಸಂಕೀರ್ಣದವರೆಗೆ ಹಮ್ಮಿಕೊಂಡಿದ್ದ ರ್ಯಾಲಿಯನ್ನು ಸಮಯ ಮೀರಿದ ಕಾರಣ ಮಂಜುನಾಥ್ ರವರು ರದ್ದು ಪಡಿಸಿ ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು.
ನಾಮಪತ್ರ ಸಲ್ಲಿಸಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರ ಬಂದ ಡಾ.ಸಿ.ಎನ್ .ಮಂಜುನಾಥ್ ಅವರು ಕಾರ್ಯಕರ್ತರತ್ತ ಕೈ ಬೀಸಿ ನಮಸ್ಕರಿಸಿದರು.
ಡಿ.ಕೆ. ಸುರೇಶ್-ಮುನಿರತ್ನ ಹಸ್ತ ಲಾಘವ : ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಗುರುವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಮಾ. 28 ರಂದು ಎರಡು ಸೆಟ್ ಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದ ಡಿಕೆ ಸುರೇಶ್ ಮತ್ತೊಂದು ಸೆಟ್ ನಾಮಪತ್ರವನ್ನು ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರ ನ್ ಅವರಿಗೆ ಸಲ್ಲಿಸಿದರು.
ಯಾವುದೇ ಅಭ್ಯರ್ಥಿ ಮೂರುಸೆಟ್ ಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಎನ್ ಡಿಐ ಮೈತ್ರಿ ಅಭ್ಯರ್ಥಿ ಡಾ .ಸಿ.ಎನ್. ಮಂಜುನಾಥ್ ನಾಮಪತ್ರ ಸಲ್ಲಿಕೆಗೂ ಮುನ್ನವೇ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ , ವಿಧಾನ ಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾ ಕಾಂಗ್ರೆ ಸ್ ಅಧ್ಯಕ್ಷ ಎಸ್. ಗಂಗಾಧರ್ ಸಾಥ್ ನೀಡಿದರು.
ನಾಮಪತ್ರ ಸಲ್ಲಿಸಿ ಹೊರ ಬಂದ ಡಿ.ಕೆ. ಸುರೇಶ್ ಗೆ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಎದುರಾದರು. ಈ ವೇಳೆ ಇಬ್ಬರೂ ನಗುನಗುತ್ತಲೇ ಹಸ್ತಲಾಘವ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು. ಇದರ ಜೊತೆಗೆ ಮಂಜುನಾಥ್ ಪಾಳಯದಲ್ಲಿ ಇದ್ದ ಸುಧಾ ಬರಗೂರು ಅವರಿಗೂ ಕೈ ಜೋ ಡಿಸಿ ನಮಸ್ಕಾರ ಮಾಡಿ ತೆರಳಿದರು.



