ಮೈಸೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕಣ್ಣೀರು ಹಾಕಿದ್ದ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡ ಕಣ್ಣೀರು ಆರ್ಟಿಫಿಯಲ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಹೆಚ್ ಡಿ ದೇವೇಗೌಡರ ಕಣ್ಣೀರು ಆರ್ಟಿಫಿಷಿಯಲ್. ಅದರಲ್ಲೂ ರಾಜಕಾರಣದ ವಿಚಾರದಲ್ಲಿ ಕಣ್ಣೀರು ಬರಬಾರದು. ಪ್ರತಿ ಬಾರಿ ಕೂಡ ಕಣ್ಣೀರು ಹಾಕುವುದು ಎಷ್ಟು ಸರಿ? ರಾಜಕಾರಣದ ವಿಚಾರದಲ್ಲಿ ಕಣ್ಣೀರು ಇರಬಾರದು. ಆದರೆ ಅವರ ಕುಟುಂಬ ಯಾವಾಗಲೂ ಕಣ್ಣೀರು ಸುರಿಸುತ್ತಾರೆ. ಅವರ ಕುಟುಂಬದವರೆಲ್ಲ ಕಣ್ಣೀರು ಹಾಕ್ತಾರೆ ಎಂದ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
