ಮೈಸೂರು: ಎಡಪಂಥೀಯ ಸಾಹಿತಿಗಳದ್ದು ಡಬಲ್ ಗೇಮ್ ಮನಸ್ಥಿತಿ. ಇದು ಹಲವಾರು ಬಾರಿ ಸಾಬೀತಾಗಿದೆ.ನ ತತ್ವ ಸಿದ್ದಾಂತಗಳ ವಿಚಾರದಲ್ಲೂ ಎಡಪಂಥೀಯ ಸಾಹಿತಿಗಳು ದ್ವಿಮುಖ ನಿಲುವು ಹೊಂದಿದ್ದಾರೆಂದು ಎಸ್ ಎಲ್ ಭೈರಪ್ಪ ಹರಿಹಾಯ್ದರು. ಲೆಫ್ಟಿಸ್ಟ್ ಸಾಹಿತಿಗಳಲ್ಲಿ ಡಬಲ್ ಗೇಮ್ ತುಂಬ ಇರುತ್ತೇ. ಪಶ್ಚಿಮಬಂಗಾಳ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರ ನ್ನು ಉದಾಹರಣೆ ಕೊಟ್ಟ ಅವರು, ಅವರ ಮಕ್ಕಳು ಕ್ಯಾಪಿಟಲಿಸ್ಟ್ ಆಗಿ ಏನಾದ್ರು ಮಾಡಬಹುದು. ಇವರು ಮಾತ್ರ ಲೆಫ್ಟಿಸ್ಟಿಸ್ ನಡೆಸುತ್ತಿರುತ್ತಾರೆ. ಬಂಗಾಳದಲ್ಲಿ ಇರುವಷ್ಟು ಬಡತನ ದೇಶದ ಬೇರಾವ ರಾಜ್ಯದಲ್ಲೂ ಇಲ್ಲ. ಲೆಫ್ಟಿಸಂ ಅನ್ನೋದು ಬರಿ ಮೋಸ ಮಾಡುವ ಕೆಲಸ. ನನ್ನನ್ನು ಇವರೆಲ್ಲಾ ಕ್ಯಾಪಿಟಲಿಸ್ಟ್ ಅಂತಾರೆ. ಅದಿಲ್ಲದಿದ್ದರೇ ದೇಶದ ಬೆಳವಣಿಗೆ ಆಗೋದೇ ಇಲ್ಲ. ಲೆಫ್ಟಿಸ್ಟ್‌ಗಳೆಲ್ಲ ಅಪ್ರಾಮಾಣಿಕರು ಎಂದು ಕಿಡಿಕಾರಿದರು. ಗುಜರಾತಿನವರು ಆಕ್ಟೀವ್ ಹಾಗೂ ಆನೆಸ್ಟ್ ಆಗಿ ಕೆಲಸ ಮಾಡುತ್ತಾರೆ. ನಮ್ಮಲ್ಲಿ ಅಂಗಡಿ ವ್ಯಾಪಾರಿಗಳು ಅಂದ್ರೇ ಪೂರ್ಣ ಪ್ರಾಮಾಣಿಕರು ಅಂತ ಹೇಳೋಕೆ ಆಗಲ್ಲ. ಆದರೆ ಗುಜರಾತ್‌ನಲ್ಲಿ 6 ವರ್ಷದ ಮಗು ಕೈಯಲ್ಲಿ ಹಣ ಕೊಟ್ಟು ಕಳುಹಿಸಿದ್ರೂ ವ್ಯಾಪಾರಸ್ಥರು ಪ್ರಾಮಾಣಿಕವಾಗಿ ಚಿಲ್ಲರೆ ಕೊಟ್ಟು ಕಳುಹಿಸುತ್ತಾರೆ. ಗುಜರಾತಿಗಳು ಸುಳ್ಳು ಹೇಳೋಕೆ ಹೋಗೋದಿಲ್ಲ. ಅದಿಲ್ಲ ಅಂದ್ರೇ ಯಾವ ದೇಶ ಉದ್ದಾರ ಆಗೋಕೆ ಸಾಧ್ಯ ಹೇಳಿ? ಮೋದಿ ಅವರಿಗೂ ಅದೇ ಇದೆ. ಅವರು ವ್ಯಾಪಾರಿಯಾದರೂ ಪ್ರಾಮಾಣಿಕರಾಗಿದ್ದಾರೆ. ವ್ಯಾಪಾರ ಕೇವಲ ಹಣಕ್ಕಾಗಿ ಅಲ್ಲ, ದೇಶಕ್ಕಾಗಿ ಮಾಡುತ್ತಾರೆ. ಅವರು ಮುಖ್ಯಮಂತ್ರಿ ಹುದ್ದೆ ಬಿಟ್ಟು ದೆಹಲಿಗೆ ಬರುವಾಗ ಅವರ ಖಾತೆಯಲ್ಲಿದ್ದ 23 ಲಕ್ಷ ಹಣವನ್ನು ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೊಟ್ಟು ಬಂದರು. ಅದೊಂದು ರೀತಿಯಲ್ಲಿ ಮಾದರಿ ಆಯ್ತು. ಕೇಂದ್ರ ಸರ್ಕಾರದಲ್ಲೂ ಮೋದಿ ಅದನ್ನು ಅಳವಡಿಸಿಕೊಂಡರು. ಇದನ್ನೆಲ್ಲ ಕ್ಯಾಪಿಟಲಿಸ್ಟ್ ಅನ್ನೋಕಾಗುತ್ತಾ. ಕಾರು ವ್ಯಾಪಾರದಿಂದ ಹಣ ಬಂತು ಅಂದುಕೊಳ್ಳೋದು ಆರ್ಥಿಕತೆ ಅಲ್ಲ. ಅದರಿಂದ ಎಷ್ಟು ಕುಟುಂಬಕ್ಕೆ ನೆರವಾಯಿತು ಎನ್ನುವುದು ನಿಜವಾದ ಆರ್ಥಿಕತೆ. ಮತ್ತೊಮ್ಮೆ ಮೋದಿ ಪ್ರಧಾನಿ ಆಗುತ್ತಾರೆ ನೋಡಿ. ಅದರಲ್ಲಿ ಯಾವುದೇ ಅನುಮಾನ ಇಲ್ಲ ನೋಡಿ ಎಂದು ಭವಿಷ್ಯ ನುಡಿದರು.
