ಕೋಲಾರ: ಬಸವ ಜಯಂತಿಯನ್ನು ವರ್ಷಕ್ಕೊಮ್ಮೆ ಆಚರಿಸಲು ಸೀಮಿತಗೊಳಿಸದೆ ಬಸವಣ್ಣನವರ ವಚನ, ತತ್ವಗಳ ಸಾರವನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ಪ್ರತಿ ದಿನವೂ ಬಸವ ಜಯಂತಿ ಆಚರಿಸುವಂತಾದರೆ ಮಾತ್ರ ಜೀವನ ಧನ್ಯ ಎಂದು ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ್ ಬಿ.ಜತ್ತಿ ಅಭಿಪ್ರಾಯಪಟ್ಟರು.
ನಗರದ ಶ್ರೀ ಬಸವೇಶ್ವರ ಭಕ್ತ ಮಂಡಳಿ ಮತ್ತು ಶರಣೆಯರ ಬಳಗವು ಅರಳೇ ಪೇಟೆಯ ಶ್ರೀ ಬಸವೇಶ್ವರ ದೇವಾಸ್ಥಾನದ ಅವರಣದಲ್ಲಿ ಪ್ರತಿವರ್ಷದಂತೆ ಈ ವರ್ಷವು ನಡೆದಿರುವ ಬಸವ ಜಯಂತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಶರಣರ ಕನಿಷ್ಠ ಒಂದನ್ನು ಅಳವಡಿಸಿ ಕೊಂಡರೆ ಸಾಕು ಜೀವನದಲ್ಲಿ ಪರಿವರ್ತನೆ ಕಾಣಬಹುದಾಗಿದೆ. ಅಂತರಂಗದಲ್ಲಿನ ಅನುಭಾವಗಳು ಆದ ಹಾಗೆಯೇ ಚಿಂತನೆಗಳು ಬದಲಾಗುತ್ತಾ ಜೀವನ ಚಕ್ರ ತಿರುಗುತ್ತಿರುತ್ತದೆ.
ವಚನಗಳ ಪ್ರತಿ ನುಡಿಯಲ್ಲೂ ಅಪಾರ ಶಕ್ತಿ ಅಡಗಿದೆ. ಬಸವನ ತತ್ವಗಳು ಜೀವನಕ್ಕೆ ಆಧಾರ ಎಂದಾಗ ಎತ್ತರವಾಗಿ ಬೆಳೆಯುತ್ತೇವೆ, ಪ್ರತಿಯೊಂದು ವಚನಗಳನ್ನು ಅರ್ಥೈಸಿಕೊಂಡು ಆತ್ಮವಲೋಕನ ಮಾಡಿ ಕೊಂಡಾಗ ಬದುಕಿನಲ್ಲಿ ಪರಿವರ್ತನೆ ಕಾಣುತ್ತದೆ. ನಾನು ಸಹ ಬಸವಣ್ಣನಾಗ ಬೇಕು ಎಂಬ ಭಾವನೆಗಳು ಅಂತರಂಗದಲ್ಲಿ ಮೂಡಿ ಬಂದಾಗ ಸಮಾಜದಲ್ಲಿ ಆದರ್ಶವಾಗಿ ಬಾಳಲು ಪ್ರೇರಣೆ ಸಿಗುತ್ತದೆ ಎಂದು ಪ್ರಕಟಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ನಾಗಲಾಪುರ ವೀರಸಂಸ್ಥಾನ ಮಠದ ಪೀಠಾಧಿಪತಿಗಳಾದ ಷ.ಬ್ರ.ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಭಗವಂತ ಅನೇಕ ಜನ್ಮ ನೀಡಿದ್ದು ಮಾನವ ಜನ್ಮದಲ್ಲಿ ಅತ್ಯಂತ ಶ್ರೇಷ್ಠವಾಗಿದೆ, ಜನನ ಮರಣದಲ್ಲಿ ಸಾಮಾನ್ಯವಾಗಿ ಬಸವಣ್ಣನವರು ಸತ್ತು ಬದುಕಿರುವ ಭಕ್ತಿ ಭಂಡಾರಿಯವರ ಬದುಕಿನ ಆದರ್ಶದ ತತ್ವಗಳು ಮೈನವಿರೇಳಿಸಿ ಕೊಂಡಾಡಿದ್ದಾರೆ. ಹೇಳಿದರು.
ಶರಣೆಯರ ಬಳಗದ ಅಧ್ಯಕ್ಷೆ ಉಷಾಗಂಗಾಧರ್ ಮಾತನಾಡಿದರು. ಶರಣೆಯರ ಬಳಗದ ವಿಮಲ ಬೈಲಪ್ಪ. ಇದೇ ಸಂದರ್ಭದಲ್ಲಿ ವಚನಗಳ ಸ್ವರ್ಧೆ ಹಾಗೂ ಕ್ರೀಡಾ ಚಟುವಟಿಕೆಗಳ ಸ್ವರ್ಧೆಯ ವಿಜೇತರಿಗೆ ಹಾಗೂ ಶರಣೆಯರ ಬಳಗದ ಅಧ್ಯಕ್ಷೆ ಉಷಾಗಂಗಾಧರ್ ಹಾಗೂ ಗಣ್ಯರಿಂದ ಬಹುಮಾನ ವಿತರಿಸಲಾಯಿತು. ನಂತರದಲ್ಲಿ ವಚನ ಗಾಯನ ಹಾಗೂ ಶಿವ ತಂಡ ನೃತ್ಯ ರೂಪಕ ಸಾಂಸ್ಕೃತಿಕ ಕಾರ್ಯಕ್ರಮಗಳಾದ ವೇದಿಕೆಯಲ್ಲಿ ಶ್ರೀ ಬಸವೇಶ್ವರ ಭಕ್ತ ಮಂಡಳಿಯ ಅಧ್ಯಕ್ಷ ಸಿ.ಗಂಗಾಧರ್ ಹಾಗೂ ಉಪಾಧ್ಯಕ್ಷ ಕೆ.ಬಿ.ಬೈಲಪ್ಪ.

