ತಾಲೂಕು ನೋಡಲ್ ಅಧಿಕಾರಿ ಶಿವಕುಮಾರ್ ಸಲಹೆ । ಅಧಿಕಾರಿಗಳಿಗೆ ತರಬೇತಿ
ಹುಣಸೂರು: ಏ.೨೧ರಂದು ಆಯೋಜನೆಗೊಂಡಿರುವ ನಮ್ಮ ನಡೆ ಮತಗಟ್ಟೆ ಕಡೆಗೆ ಅಭಿಯಾನವನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಮೂಲಕ ತಾಲೂಕಿನಲ್ಲಿ ಪ್ರತಿಶತ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಕಾರ್ಯ ನಡೆಸೋಣವೆಂದು ತಾಲೂಕು ನೋಡಲ್ ಅಧಿಕಾರಿ ಶಿವಕುಮಾರ್ ಕರೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಚುನಾವಣಾ ಆಯೋಗ ಮತ್ತು ಸ್ವೀಪ್ ಸಮಿತಿ ವತಿಯಿಂದ ತಾಲೂಕಿನ ೨೭೪ ಮತಗಟ್ಟೆಯ ಮತಗಟ್ಟೆ ಅಧಿಕಾರಿಗಳಿಗೆ(ಬಿಎಲ್‌ಒ) ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಏ.೨೧ರಂದು ಪ್ರತಿ ಮತಗಟ್ಟೆಯಲ್ಲೂ ನಮ್ಮ ನಡೆ ಮತಗಟ್ಟೆ ಕಡೆಗೆ ಅಭಿಯಾನ ನಡಸಬೇಕು. ಅಂದು ಬೆಳಗ್ಗೆ ಮತಗಟ್ಟೆಯಲ್ಲಿ ಚುನಾವಣಾ ಆಯೋಗ ರೂಪಿಸಿರುವ ಧ್ವಜದ ಆರೋಹಣ ಮಾಡಬೇಕು. ಧ್ವಜಾರೋಹಣದ ವೇಳೆ ಚುನಾವಣಾ ಆಯೋಗ ರೂಪಿಸಿರುವ ನಾ ಭಾರತ ಹಾಡನ್ನು ಹಾಡಬೇಕು. ಈ ವೇಳೆ ಮತದಾರರು ಹಾಜರಿರಬೇಕು. ಮತಗಟ್ಟೆಯ ಬಾಗಿಲು ತೆರೆದಿರಬೇಕು. ಅಂದು ದಿನವಿಡಿ ಬಿಎಲ್‌ಒಗಳು ಮತಗಟ್ಟೆಯಲ್ಲಿ ಕುಳಿತು ಮತದಾರರು ಹೊತ್ತು ತರುವ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಬೇಕು. ಪ್ರತಿ ಮತದಾರರಿಗೂ ತಮ್ಮ ಮತಗಟ್ಟೆ ಯಾವುದೆಂದು ಸಮರ್ಪವಾಗಿ ಅರುಹಬೇಕು. ಬಿಎಲ್‌ಒಗಳು ಪ್ರತಿ ಮನೆಗೂ ತೆರಳಿ ಮತದಾರರ ಪಟ್ಟಿ ಮತ್ತು ಬುಕ್‌ಲೆಟ್ ನೀಡುವ ಮೂಲಕ ಅವರಲ್ಲಿ ಮತದಾನದ ಅವಶ್ಯಕತೆ ಕುರಿತು ಮಾಹಿತಿ ನೀಡಿರಿ. ತಾಲೂಕಿನಲ್ಲಿ ೨೧೨ ಮತಗಟ್ಟೆಗಳಲ್ಲಿ ಒಂದೇ ಮತಗಟ್ಟೆ ಇದ್ದು, ೯ ಮತಗಟ್ಟೆಗಳಲ್ಲಿ ೨ಕ್ಕಿಂತ ಹೆಚ್ಚು ಮತಗಟ್ಟೆಗಳಿವೆ.ಹಾಗಾಗಿ ಮತದಾರರರಿಗೆ ಮತದಾನದ ದಿನ ಯಾವುದೆ ಕಾರಣಕ್ಕೂ ಗೊಂದಲವಾಗದಂತೆ ಏ.೨೧ರ ಅಭಿಯಾನದ ದಿನ ಕ್ರಮವಹಿಸಿರಿ. ಕಳೆದ ಚುನಾವಣೆಯಲ್ಲಿ ತಾಲೂಕಿನಲ್ಲಿ ಶೇ.೭೭.೨೪ರಷ್ಟು ಮತದಾನವಾಗಿದ್ದು, ಈ ಪೈಕಿ ಮಹಿಳಾ ಮತದಾರರು ಶೇ.೭೫.೯೯ ಮತ್ತು ಪುರುಷ ಮತದಾರರು ಶೇ.೭೭,೮೧ರಷ್ಟು ಮತಚಲಾಯಿಸಿದ್ದಾರೆ. ಈ ಬಾರಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸುವಂತೆ ಪ್ರೇರೇಪಿಸಿಬೇಕು ಎಂದರು.
ಮಾಸ್ಟರ್ ಟ್ರೈನರ್ ಸಂತೋಷ್‌ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಏ.೧೫ ಮತ್ತು ೧೬ರಂದು ಮನೆಯಲ್ಲಿ ಮತದಾನ ಕಾರ್ಯ ನಡೆಸಲಾಗುವುದು. ತಾಲೂಕಿನಲ್ಲಿ ೮೫ವರ್ಷ ಮೇಲ್ಪಟ್ಟ ೨೦೦೦ಕ್ಕೂ ಹೆಚ್ಚು ಮಂದಿಯಿದ್ದರೂ ೧೪೯ ಮಂದಿ ಮಾತ್ರ ದೈಹಿಕವಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡಲು ಶಕ್ತರಿಲ್ಲವೆಂಬುದನ್ನು ಬಿಎಲ್‌ಒ ಗಳು ಗುರುತಿಸಿಕೊಟ್ಟಿದ್ದಾರೆ. ಇವರು ಮತದಾನಕ್ಕಾಗಿ ೧೫ ಮತ್ತು ೧೬ರಂದು ಒಟ್ಟು ೧೦ ತಂಡಗಳು ಆಯಾ ಗ್ರಾಮಕ್ಕೆ ಭೇಟಿ ನೀಡಿ ಮತದಾರರ ಮನೆಯಲ್ಲಿಯೇ ವಯೋವೃದ್ಧರಿಂದ ಮತಚಲಾವಣೆಗ ಅವಕಾಶ ನೀಡಲಾಗುತ್ತಿದೆ. ಪ್ರತಿ ಮನೆಯಲ್ಲೂ ತಾತ್ಕಾಲಿಕವಾದ ಮತಗಟ್ಟೆಯನ್ನು ಸ್ಥಾಪಿಸಿ ಮತಚಲಾವಣೆಯ ವಿಡಿಯೋ ಮಾಡಿಕೊಳ್ಳಲಾಗುವುದು. ಹಾಗಾಗಿ ಬಿಎಲ್‌ಒಗಳು ಗುರುತಿಸಿದ ಮನೆಯ ಮತದಾರರಿಗೆ ತಮ್ಮ ಮನೆಯಲ್ಲೇ ಇರುವಂತೆ ಕ್ರಮವಹಿಸುಬೇಕು. ಮನೆಯೊಂದರ ಮತದಾರ ಎರಡು ದಿನವೂ ಮನೆಯಲ್ಲಿ ಅಲಭ್ಯವಾದರೆ ಅಂತಹ ಮನೆಯ ಪಂಚನಾಮೆಯನ್ನು ಮಾಡಿ ಚುನಾವಣಾ ಆಯೋಗಕ್ಕೆ ವರದಿ ನೀಡಲಾಗುವುದು. ಮತದಾನದ ದಿನ ಮತಗಟ್ಟೆಯಿಂದ ೧೦೦ಮೀಟರ್ ದೂರದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿ ಬಿಎಲ್‌ಒಗಳು ಮತದಾರರಿಗೆ ಅರಿವು ಮೂಡಿಸುವ ಮತದಾರರ ಪಟ್ಟಿಯ ಚೀಟಿ ನೀಡುವ ಕಾರ್ಯ ಮಾಡಬೇಕು ಎಂದರು.
ಸಭೆಯಲ್ಲಿ ಉಪತಹಸೀಲ್ದಾರ್ ನರಸಿಂಹಯ್ಯ, ಪ್ರಕಾಶ್ ಸೇರಿದಂತೆ ಬಿಎಲ್‌ಒಗಳು ಹಾಜರಿದ್ದರು. ಕಡ್ಡಾಯ ಮತದಾನದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.
೧೨ಊUಓ೨: ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಡ್ಡಾಯ ಮತದಾನದ ಕುರಿತು ಬಿಎಲ್‌ಒಗಳಿಗೆ ಮತ್ತು ಚುನಾವಣಾ ಅಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನೋಡಲ್ ಅಧಿಕಾರಿ ಶಿವಕುಮಾರ್, ಉಪತಹಸೀಲ್ದಾರ್ ನರಸಿಂಹಯ್ಯ, ಮಾಸ್ಟರ್ ಟ್ರೆöÊನರ್ ಸಂತೋಷ್‌ಕುಮಾರ್ ಇತರರಿದ್ದಾರೆ.
