ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅಭಿಪ್ರಾಯ
ಎಚ್.ಡಿ. ಕೋಟೆ : ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಒಂಬತ್ತು ದಿನಗಳಲ್ಲಿ ನುಡಿದಂತೆ ಗ್ಯಾರಂಟಿಗಳನ್ನು ಜಾರಿಗೆ ತರಲಾಯಿತು ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಭೋಸ್ ತಿಳಿಸಿದರು.
ಎಚ್.ಡಿ. ಕೊಟೆ ಪಟ್ಟಣದಲ್ಲಿರುವ ಕನಕ ಭವನದಲ್ಲಿ ಮಂಗಳವಾರ ನಡೆದ ಚಾಮರಾಜನಗರ ಎಸ್.ಸಿ. ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅದೇ ರೀತಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅನೇಕ ಜನಪರ ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ತಿಳಿಸಿದ್ದು, ಈ ಗ್ಯಾರಂಟಿಗಳು ಸಕಾರಗೊಳ್ಳಬೇಕಾದರೆ ನನ್ನನ್ನು ಗೆಲ್ಲಿಸಿ ಎಂದರು.
ಪಕ್ಷದಿಂದ ಎಂಟು ಜನ ಸಮರ್ಥ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಇದ್ದರು, ಈ ಪೈಕಿ ನನ್ನನ್ನು ಆಯ್ಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರು ಪಕ್ಷ ಸಂಘಟನೆಯಲ್ಲಿ ಅವರನ್ನು ಮೀರಿಸುವವರು ಯಾರು ಇರಲಿಲ್ಲ. ಅವರ ದಾರಿಯಲ್ಲಿ ನಾನು ನಡೆಯುತ್ತೇನೆ . ಕಳೆದ ಬಾರಿ ಧ್ರುವನಾರಾಯಣ್ ಲೋಕಸಭೆಯಲ್ಲಿ ಸೋಲನ್ನು ಅನುಭವಿಸಿದ್ದು ಈ ಬಾರಿ ಕಾಂಗ್ರೆಸ್ ಗೆಲುವು ಪಡೆಯಬೇಕು ಎಂದರು.
ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕೇಂದ್ರದಲ್ಲಿ ವಚನ ಭ್ರಷ್ಟ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಈ ಸರ್ಕಾರವನ್ನು ಕಿತ್ತೊಗೆಯುವ ಹೊಣೆ ನಮ್ಮ ಮೇಲಿದೆ ಎಂದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಇದುವರೆಗಿನ ಹತ್ತು ವರ್ಷದಲ್ಲಿ ಒಟ್ಟಾರೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ ಸರ್ಕಾರದ ವಿರುದ್ಧ ಮಾತನಾಡುವವರಿಗೆ ಐಟಿ ಮತ್ತು ಇಡಿಯನ್ನು ಚೂ ಬಿಡುತ್ತಿದ್ದಾರೆ ಎಂದು ಆರೋಪಿಸಿದರು. ಅನೇಕ ವಿದೇಶಿಗರು ಭಾರತದಲ್ಲಿ ಪ್ರಜಾಪ್ರಭುತ್ವ ಸರ್ಕಾರವಿಲ್ಲ, ಏಕವ್ಯಕ್ತಿ ಅಧಿಪತಿಯ ಸರ್ಕಾರ ಜಾರಿಯಲ್ಲಿದೆ ಎಂದು ವ್ಯಂಗ್ಯವಾಡುತ್ತಿದ್ದಾರೆ ಎಂದರು.
ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ಯುವಕರು ಮುನ್ನೆಲೆಗೆ ಬರಬೇಕು. ಮುಂದಿನ ದಿನಗಳಲ್ಲಿ ಈ ಯುವಕರೇ ರಾಜ್ಯ ಮತ್ತು ರಾಷ್ಟ್ರವನ್ನು ಆಳ್ವಿಕೆ ನಡೆಸುವವರಿದ್ದಾರೆ’ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ನಿಜವಾದ ಸಮಸ್ಯೆ ಎಲ್ಲಿದೆ ಎಂದು ಗಮನಿಸಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಹಿಂದುಳಿದ ಎಚ್.ಡಿ. ಕೋಟೆ ತಾಲ್ಲೂಕನ್ನು ಅಭಿವೃದ್ಧಿಪಡಿಸಲು ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಎಂದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತದ್ದೇ ಆದಲ್ಲಿ, ಮುಂದಿನ ದಿನಗಳಲ್ಲಿ ಭಾರತದಲ್ಲಿ ಚುನಾವಣೆಗಳೇ ನಡೆಯುವುದಿಲ್ಲ, ಕೋಮುವಾದಿತನ ತಾಂಡವವಾಡಲು ಆರಂಭವಾಗುತ್ತದೆ ಎಂದು ಆತಂಕಿಸಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನಾನು ಎರಡನೇ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಬೆಂಬಲ ನೀಡಿದ ರೀತಿಯಲ್ಲಿಯೇ ಈ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡಬೇಕು, ನನಗಿಂತಲೂ ಹೆಚ್ಚಿನ ಮತಗಳ ಮುನ್ನಡೆಯನ್ನು ನನ್ನ ಕ್ಷೇತ್ರದಿಂದ ನೀಡಬೇಕು ಎಂದು ಕಾರ್ಯಕರ್ತರನ್ನು ಮನವಿಮಾಡಿದರು.
ಅಂಬೇಡ್ಕರ್ ನಂತರದ ಸ್ಥಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲ್ಲುತ್ತಾರೆ, ಅಂಬೇಡ್ಕರ್ ರವರ ರೀತಿಯಲ್ಲಿಯೇ ಯೋಚಿಸುವ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಸಮಾನತೆಗೆ ಹಲವು ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ್ದಾರೆ ಎಂದರು.
ಈ ಬಾರಿ ನಮ್ಮ ಬೂತ್ ನಮ್ಮ ಹೊಣೆ ಎಂಬ ಘೋಷ ವಾಕ್ಯ ಬೋಸ್‌ರವರನ್ನು ಗೆಲ್ಲಿಸಲಿದ್ದೇವೆ. ಯಾವ ಬೂತ್ ನಲ್ಲಿ ಹೆಚ್ಚು ಮತ ನೀಡುತ್ತಾರೋ ಆ ಬೂತ್ ಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.
ಇದೇ ಮಾಜಿ ಸಚಿವ ಎಂ.ಶಿವಣ್ಣ ಮತ್ತು ಬೆಂಬಲಿಗರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಶಾಸಕರಾದ ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಭಾರತೀ ಶಂಕರ್, ನಂಜುಂಡಸ್ವಾಮಿ, ಮಾಜಿ ಸಂಸದ ಶಿವಣ್ಣ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಸಂದೇಶ್ ನಾಗರಾಜು, ಬ್ಲಾಕ್ ಅಧ್ಯಕ್ಷರಾದ ಏಜಾಜ್ ಪಾಷ, ಮನುಗನಹಳ್ಳಿ ಮಾದಪ್ಪ, ಸಿದ್ದರಾಮು, ಎಚ್.ಸಿ. ಬಸವರಾಜು, ನಂದಿನಿ ಚಂದ್ರಶೇಖರ್, ಅಶೋಕ್, ಚಿಕ್ಕವೀರನಾಯಕ, ಎಚ್.ಸಿ. ನರಸಿಂಹಮೂರ್ತಿ, ಜಿಯಾರ ಸೋಮೇಶ್, ಶಂಕರ್ ವನಸಿರಿ, ಕೃಷ್ಣೇಗೌಡ, ವರುಣಾ ಮಹೇಶ್, ಸ್ಟುಡಿಯೋ ಪ್ರಕಾಶ್, ರಂಗಸ್ವಾಮಿ, ಮಧುಕುಮಾರ್, ಈರೇಗೌಡ, ಕ್ಯಾತನಹಳ್ಳಿ ನಾಗರಾಜು, ಶ್ರೀನಿವಾಸ್, ಶಿವರಾಜು ಇದ್ದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತದ್ದೇ ಆದಲ್ಲಿ, ಮುಂದಿನ ದಿನಗಳಲ್ಲಿ ಭಾರತದಲ್ಲಿ ಚುನಾವಣೆಗಳೇ ನಡೆಯುವುದಿಲ್ಲ, ಕೋಮುವಾದಿತನ ತಾಂಡವವಾಡಲು ಆರಂಭವಾಗುತ್ತದೆ.
ಡಾ.ಎಚ್.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಸಚಿವ
ಭಾರತದ ಸಂವಿಧಾನವನ್ನು ಬದಲಿಸಲಿಕ್ಕಾಗಿ ಹುನ್ನಾರ ನಡೆಸುತ್ತಿದ್ದು, ಇದಕ್ಕಾಗಿ ಬಿಜೆಪಿ ನಾನೂರು ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಆದ್ದರಿಂದ ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ .
– ಯತೀಂದ್ರ ಸಿದ್ದರಾಮಯ್ಯ ಮಾಜಿ ಶಾಸಕ
ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಬಾಲರಾಜ್ ಗೆಲುವಿಗೆ ಶ್ರಮಿಸಿ
ಹೆಚ್.ಡಿ.ಕೋಟೆ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಮತ್ತು ಜಾ.ದಳ ಮೈತ್ರಿ ಅಭ್ಯರ್ಥಿ ಎಸ್ .ಬಾಲರಾಜ್ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಮುಖಂಡರು ಮುಂದಾ ಗಬೇಕೆಂದು ತಾಲೂಕು ಜಾ.ದಳ ಅಧ್ಯಕ್ಷ ರಾಜೇಂದ್ರ ಹೇಳಿದರು.
ಪಟ್ಟಣದಲ್ಲಿರುವ ಜಾ.ದಳ ತಾಲ್ಲೂಕು ಕಚೇರಿಯಲ್ಲಿ ನಡೆದ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿದರು. ಎರಡೂ ಪಕ್ಷಗಳ ಮೈತ್ರಿ ಅಭ್ಯರ್ಥಿಯಾದ ಬಾಲರಾಜ್ ಅವರನ್ನು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದರು.
ಕಾರ್ಯಕರ್ತರು, ಮುಖಂಡರು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಮತದಾರರನ್ನು ಮನವೊಲಿಸಿ, ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ದೇಶದಲ್ಲಿ ಸುಭದ್ರ ಸರ್ಕಾರ ರಚನೆಗೆ ಇದು ಸಹಕಾರಿಯಾಗಲಿದೆ ಎಂದರು.
ಅನೇಕ ಹಿರಿಯ ಮುಖಂಡರು ಮಾತನಾಡಿದರು. ಸರಗೂರು ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ನರಸಿಂಹಗೌಡ, ಪ್ರಧಾನ ಕಾರ್ಯ ದರ್ಶಿ ಎಲ್‌ಐಸಿ ಮೇಟಿಕುಪ್ಪೆ ರಾಜು, ಕೃಷ್ಣಾಪುರ ಶಿವಕುಮಾರ, ರಂಗೇಗೌಡ, ಲಿಂಗೇಗೌಡ, ಚಾ ನಂಜುಂಡ ಮೂರ್ತಿ, ಎಂ.ಡಿ.ಮಂಚಯ್ಯ, ಹೆಗ್ಗನೂರು ಸುಧೀರ್, ಮಟಕೆರೆ ರಾಜೇಶ್, ಕಾಳಿ ಹುಂಡಿ ಸಿದ್ದೇಗೌಡ, ಯೋಗ ನರಸಿಂಹಗೌಡ, ಶಿವಪ್ಪಾಜಿ, ಪಾಜಿ ಗೌಡ್ರು, ರವಿ, ನಾಗಣ್ಣ, ಬೈರೇಗೌಡ, ಮಹೇಶ್, ದೇವಲಾಪುರ ಸಿದ್ದಪ್ಪಾಜಿ, ರಾಮೇಗೌಡ, ಹೊ.ಕೆ.ಮಹೇಂದ್ರ, ದೇವರಾಜ, ನಾಗರಾಜು, ಎಚ್.ಡಿ. ಕುಮಾರಸ್ವಾಮಿ ಬಳಗದ ಅಧ್ಯಕ್ಷರಾದ ರವಿ ಚಕ್ಕೋಡನಹಳ್ಳಿ, ಜಗದೀಶ್, ಕೆಂಪರಾಜೆಗೌಡ, ಯತೀಶ್, ಶಾಮಣ್ಣ, ಇತರರು ಹಾಜರಿದ್ದರು.
