ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅಭಿಪ್ರಾಯ
ಗೋಣಿಕೊಪ್ಪ: ಮಹಿಳೆಯರು ಭಾಷಾ ಪೋಷಣೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದರು.
ಕಾವೇರಿ ಪೊಮ್ಮಕ್ಕಡ ಕೂಟದಿಂದ ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಮೀನ್ಯಾರ್ ನಮ್ಮೆ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಭಾಷೆ ಕಲಿಸುವ ಮೊದಲ ಗುರುವಾಗಿ ಜವಾಬ್ದಾರಿ ನಿಭಾಯಿಸುವುದು ಭಾಷೆಗೆ ನೀಡುವ ದೊಡ್ಡ ಕೊಡುಗೆ ಎಂದರು.
ಭಾಷಾ ಪ್ರೇಮ, ಅಡುಗೆ, ಸಂಸ್ಕೃತಿ ಪಾಲನೆ, ಹಬ್ಬಗಳ ಆಚರಣೆಗೆ ಮಹಿಳೆಯರ ಪಾತ್ರ ಹೆಚ್ಚಿದ್ದು, ಇದರ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆಯಬೇಕು. ಹಿಂದಿನಿಂದಲೂ ಮಹಿಳೆಯರಿಗೆ ಪೂಜನೀಯ ಸ್ಥಾನವಿದ್ದು, ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕವಾಗಿ ತೊಡಗಿಕೊಳ್ಳಲು ಅವಕಾಶ ಹೆಚ್ಚಾಗುತ್ತಿದೆ ಎಂದರು.
ಕಾರ್ಯಕ್ರಮದ ತೀನಿ ಮೇಳ, ಮಾರಾಟ, ಅಟ್ ಪಾಟ್, ವಾಲಗತ್ತಾಟ್, ರ್ಯಾಂಪ್ ವಾಕ್ ನಲ್ಲಿ ಮಹಿಳೆಯರು ಪಾಲ್ಗೊಂಡರು.
ಮಳಿಗೆಗಳಲ್ಲಿ ಪುಸ್ತಕ, ಬಟ್ಟೆ, ದಿನಬಳಕೆಯ ವಸ್ತುಗಳ ಮಾರಾಟ ನಡೆದವು. ಮಳಿಗೆಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಉದ್ಘಾಟಿಸಿ ಶುಭ ಕೋರಿದರು.
ಶಾಸಕ ಎ. ಎಸ್.ಪೊನ್ನಣ್ಣ ಪತ್ನಿ ಕಾಂಚನ್ ಪೊನ್ನಣ್ಣ, ಪೊಮ್ಮಕ್ಕಡ ಕೂಟ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ, ಕೂಟದ ಉಪಾಧ್ಯಕ್ಷೆ ಮುಕ್ಕಾಟೀರ ಬೀನಾ, ಮಾನಸ ತಿಮ್ಮಯ್ಯ ಇದ್ದರು.
ಫೋಟೋ 31 ಜಿಕೆಪಿ 01 ; ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಕಾವೇರಿ ಪೊಮ್ಮಕ್ಕಡ ಕೂಟದಿಂದ ಆಯೋಜಿಸಿದ್ದ ಮೀನ್ಯಾರ್ ನಮ್ಮೆಯನ್ನು ಕಾಂಚನ್ ಪೊನ್ನಣ್ಣ ಉದ್ಘಾಟಿಸಿದರು.
