PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಲ್ಲಿ ಫಿನಾಲೆ ಪ್ರವೇಶಿಸಿದ ಕರ್ನಾಟಕ ಬುಲ್ಡೋಜರ್ಸ್
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಕ್ರೀಡೆ > ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಲ್ಲಿ ಫಿನಾಲೆ ಪ್ರವೇಶಿಸಿದ ಕರ್ನಾಟಕ ಬುಲ್ಡೋಜರ್ಸ್
ಕ್ರೀಡೆಸಿನಿಮಾ

ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಲ್ಲಿ ಫಿನಾಲೆ ಪ್ರವೇಶಿಸಿದ ಕರ್ನಾಟಕ ಬುಲ್ಡೋಜರ್ಸ್

Prathinidhi News
Last updated: March 16, 2024 10:13 am
Prathinidhi News
Published March 16, 2024
Share
SHARE

ಸಿಸಿಎಲ್​  2024ರ ಕ್ವಾಲಿಫೈಯರ್ 1 ಮ್ಯಾಚ್​ನಲ್ಲಿ ‘ಕರ್ನಾಟಕ ಬುಲ್ಡೋಜರ್ಸ್’ ತಂಡ ಫಿನಾಲೆ ತಲುಪಿದೆ. ಬೆಂಗಾಲ್ ಟೈಗರ್ಸ್ ತಂಡವನ್ನು 8 ವಿಕೆಟ್​ಗಳಲ್ಲಿ ಮಣಿಸಿ ಫಿನಾಲೆಗೆ ಟಿಕೆಟ್ ಪಡೆದಿದೆ. ಮಾರ್ಚ್ 25ರಂದು ಫಿನಾಲೆ ನಡೆಯಲಿದೆ.

ತಿರುವನಂತಪುರದ ಗ್ರೀನ್‌ಫೀಲ್ಡ್​ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ಮಧ್ಯೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ನಮ್ಮ ಕರ್ನಾಟಕದ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಸಿಸಿಎಲ್​ನ ಫಾರ್ಮ್ಯಾಟ್ ಬೇರೆ ರೀತಿಯಲ್ಲಿ ಇದೆ. 10 ಓವರ್​ಗಳ ನಾಲ್ಕು ಇನ್ನಿಂಗ್ಸ್ ಇರುತ್ತದೆ. ಈ ಪೈಕಿ ಎರಡೂ ತಂಡಗಳು ಮೊದಲು 10 ಓವರ್ ಆಡಬೇಕು. ಎರಡನೇ ಇನ್ನಿಂಗ್ಸ್​​ನಲ್ಲಿ ಮತ್ತೆ ತಲಾ 10 ಓವರ್ ಆಡಬೇಕು.

ಮೊದಲು ಬ್ಯಾಟ್ ಮಾಡಿದ ಬೆಂಗಾಲ್ ಟೈಗರ್ಸ್ 86ರನ್​ಗೆ 3 ವಿಕೆಟ್ ಕಳೆದುಕೊಂಡಿತು. ಈ ಸಣ್ಣ ಮೊತ್ತವನ್ನು ಬೆನ್ನು ಹತ್ತಿದ ಸುದೀಪ್ ಪಡೆ 114ರನ್​ಗೆ 4 ವಿಕೆಟ್ ಕಳೆದುಕೊಂಡಿತು. ಈ ಮೂಲಕ 28ರನ್​ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್​ನಲ್ಲಿ ಬೆಂಗಾಲ್ ಟೈಗರ್ಸ್ ಒಳ್ಳೆಯ ಪ್ರದರ್ಶನ ನೀಡಿತು.

ಎರಡನೇ ಇನ್ನಿಂಗ್ಸ್ ಆಡಿದ ಬೆಂಗಾಲ್ ಟೈಗರ್ಸ್ 127ರನ್​ಗೆ 6 ವಿಕೆಟ್ ಕಳೆದುಕೊಂಡಿತು. ಈ ಮೂಲಕ 100 ರನ್​ಗಳ ಟಾರ್ಗೆಟ್​ನ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆನ್ನು ಹತ್ತಿತು. ಉತ್ತಮ ಆರಂಭ ಕಂಡ ತಂಡ ಇನ್ನೂ ಎರಡು ಓವರ್ ಇರುವಾಗಲೇ ಎರಡು ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿತು. ಈ ಮೂಲಕ ಫಿನಾಲೆ ಕನಸನ್ನು ನನಸಾಗಿಸಿಕೊಂಡಿತು

- ಜಾಹೀರಾತು -

ಈ ಮೊದಲು 2013 ಹಾಗೂ 2014ರಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಟೀಂ ಸಿಸಿಎಲ್ ಟ್ರೋಫಿ ಗೆದ್ದಿತ್ತು. ಈಗ ಮತ್ತೊಮ್ಮೆ ಗೆಲ್ಲುವ ಕನಸು ಕಾಣುತ್ತಿದೆ. ಫಿನಾಲೆಯಲ್ಲಿ ಯಾವ ತಂಡ ಆಡಲಿದೆ ಎಂಬುದು ಇಂದು ಗೊತ್ತಾಗಲಿದೆ.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮುಖಪುಟಮೈಸೂರು ನಗರಸಿನಿಮಾ

2018 ಮತ್ತು 19ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಮಾಡಿದ ಸಿಎಂ ಸಿದ್ದರಾಮಯ್ಯ

November 4, 2025
ಬೆಂಗಳೂರುಮುಖಪುಟಸಿನಿಮಾ

ರಾಮಾಯಣ ಸಿನಿಮಾದ ಫಸ್ಟ್ ಆಕ್ಷನ್ ಫೋಟೋ ರಿಲೀಸ್ : ರಾವಣನಾಗಿ ಪ್ರೇಕ್ಷಕರ ಮುಂದೆ ಬರಲು ರಾಕಿಂಗ್ ಸ್ಟಾರ್ ರೆಡಿ

May 29, 2025
ಬೆಂಗಳೂರುಮುಖಪುಟಸಿನಿಮಾ

ಸ್ಯಾಂಡಲ್ವುಡ್ ‘ದಾಸ’ನ ಸೆಲೆಬ್ರಿಟಿಗಳ ಮೇಲೆ ‘ಪದ್ಮಾವತಿ’ ಗರಂ..! ಡಿ ಬಾಸ್‌ ಫ್ಯಾನ್ಸ್ ಮೇಲೆ ಕಂಪ್ಲೇಂಟ್ ಕೊಡೋಕೆ ಸ್ಯಾಂಡಲ್ವುಡ್ ಪದ್ಮಾವತಿ ನಿರ್ಧಾರ.!

July 28, 2025
ಮುಖಪುಟಮೈಸೂರು ನಗರಸಿನಿಮಾ

ಕೆವಿಕೆ ಫೌಂಡೇಶನ್ ವತಿಯಿಂದ “ಬಿ ಸರೋಜಾದೇವಿ” ಅವರಿಗೆ ಸಂತಾಪ ಸೂಚನೆ

July 15, 2025
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?