ಮಂಡ್ಯ : ಮಂಡ್ಯದಿಂದ ಸ್ಪರ್ಧಿಸಲು ಎನ್ ಡಿಎ ಟಿಕೆಟ್ ಸಿಗದಿದ್ದರೆ ನನ್ನ ಮುಂದೆ ಬೇರೆ ಆಯ್ಕೆಗಳಿವೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯದೊಂದಿಗೆ ತನಗೆ ಅವಿನಾಭಾವ ಸಂಬಂಧ ಬೆಳೆದುಬಿಟ್ಟಿದೆ, ಇಲ್ಲಿನ ಜನರ ಋಣ ತನ್ನ ಮೇಲಿದೆ, ಮಂಡ್ಯದಲ್ಲಿರುವಾಗ ಅಂಬರೀಶ್ ತನ್ನ ಜೊತೆ ಇದ್ದಾರೆ, ತನ್ನೊಂದಿಗೆ ಓಡಾಡುತ್ತಿದ್ದಾರೆ ಎಂದು ಭಾಸವಾಗುತ್ತದೆ, ಅಂಬರೀಶ್ ಅವರಂತೆಯೇ ತಾನು ಕೂಡ ಮಂಡ್ಯ ರಾಜಕಾರಣದಿಂದ ಅಚೆ ಹೋಗಲಾರೆ ಎಂದು ಹೇಳಿದರು. ಅಲ್ಲದೆ ಮೊನ್ನೆ ಅವರ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ಈ ಹಿಂದೆಯೂ ಅವರನ್ನು ಭೇಟಿಯಾಗಿದ್ದೇನೆ ಎಂದರು.

