ಮಂಡ್ಯ: ರಾಜ್ಯಸಭಾ ಎಲೆಕ್ಷನ್ ವಿಚಾರದಲ್ಲಿ ಕೈ ಶಾಸಕರಿಗೆ ಜೆಡಿಎಸ್ ನಾಯಕರಿಂದ ಬೆದರಿಕೆ ಆರೋಪ ಹಿನ್ನೆಲೆ ಕೈ ಶಾಸಕ ರವಿಕುಮಾರ್ ಗಣಿಗ ವಿರುದ್ದ ಮಾಜಿ ಸಚಿವ ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರೆ. ಕೋಟಿಗಟ್ಟಲೇ ಮಾನಹಾನಿಯ ಕೇಸ್ ದಾಖಲಿಸುವುದಾಗಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಹೇಳಿಕೆ ನೀಡಿದ್ದಾರೆ. ಆತ ಇದ್ದಾರಲ್ಲ ಮಂಡ್ಯ ಶಾಸಕ ಆತನಿಗೆ ಶಾಸಕ ಸ್ಥಾನ ಸಿಕ್ಕಿರೋದು ಪೂರ್ವ ಜನ್ಮದ ಪುಣ್ಯ. ಅದನ್ನ ಹೆಂಗೆ ಉಳಿಸಿಕೊಂಡು ಕೇಮೇ ಮಾಡಬೇಕು ಅನ್ನೋದನ್ನ ಕಲೀಲೀ. ಈ ತರಹದ ಲಘುವಾದ ಮಾತುಗಳು ಆರೋಪಗಳನ್ನು ಮಾಡೋದನ್ನ ಬಿಡಲಿ. ಇಂತಹ ವೈಜ್ಞಾನಿಕ ಜಗತ್ತಿನಲ್ಲಿ ಎಲ್ಲದಕ್ಕೂ ಸಾಕ್ಷಿ ಇರಬೇಕಲ್ಲ. ಈ ಆರೋಪಕ್ಕೆ ಆತ ಎಷ್ಟು ಕೋಟಿಗೆ ಮಾನನಷ್ಟ ಎದುರಿಸಬೇಕಾಗುತ್ತದೆ ಅನ್ನೋದನ್ನ ತೋರೀಸ್ತಿನಿ. ಇನ್ನೆರಡು ದಿನದಲ್ಲಿ ಆತನ ವಿರುದ್ದ ಮಾನನಷ್ಟ ಮೊಕದ್ದಮೆಯನ್ನ ದಾಖಲಿಸ್ತೀನಿ ಎಂದು ಶಾಸಕ ರವಿಕುಮಾರ್ ವಿರುದ್ದ ಏಕ ವಚನದಲ್ಲಿ ವಾಗ್ದಾಳಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ .
