ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅಭಿಪ್ರಾಯ
ಪ್ರತಿನಿಧಿ ವರದಿ ವಿರಾಜಪೇಟೆ
ಮನುಷ್ಯನ ಆರೋಗ್ಯ ಉತ್ತಮವಾಗಿದ್ದರೆ ಎಲ್ಲ ರೀತಿಯಲ್ಲೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆರೋಗ್ಯ ಸುದಾರಿಸಿಕೊಳ್ಳಲು ಉತ್ತಮ ಆಸ್ಪತ್ರೆಗಳ ಸೇವೆ ಮುಖ್ಯ ಎಂದು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹೇಳಿದರು.
ಪಟ್ಟಣದ ರಸ್ತೆ ಸಾರಿಗೆ ಬಸ್ಸ್ ನಿಲ್ದಾಣದ ಬಳಿ ನೂತನವಾಗಿ ಆರಂಭಗೊಂಡ ಅಮಲಾ ಸ್ಪೇಷಾಲಿಟಿ ಕ್ಲಿನಿಕ್‌ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಯಾವುದೇ ಅವಘಡ ಸಂಭವಿಸಿದರೂ ಪ್ರಾಥಮಿಕ ಹಾಗೂ ಮುಂದುವರಿದ ಚಿಕಿತ್ಸೆಗೆ ಅಲ್ಟ್ರಾಸೌಂಡ್ ಸ್ಕಾನಿಂಗ್‌ನಂತಹ ವ್ಯವಸ್ಥೆ ಹೊಂದಿರುವುದರಿಂದ ರೋಗಿಗಳು ದೂರದ ಮೈಸೂರು, ಬೆಂಗಳೂರಿನಂತಹ ನಗರಗಳಿಗೆ ತೆರಳುವ ವ್ಯವಸ್ಥೆ ತಪ್ಪುತ್ತದೆ. ಎಲ್ಲಾ ರೀತಿಯ ವ್ಯವಸ್ಥೆ ಇರುವ ಈ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಲಭಿಸಲಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾಕುಶಾಲಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿದ್ದು, ನಾವು ಜಾಗೃತಗೊಳ್ಳಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ನಾವು ಆರೋಗ್ಯದ ಮೇಲೆ ನಿಗಾ ಇಟ್ಟರೆ ಹೆಚ್ಚಿನ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಜನರ ಆರೋಗ್ಯದ ದೃಷ್ಠಿಯಿಂದ ಸಂಸ್ಥೆ ಉತ್ತಮವಾದ ಸೇವೆ ನೀಡುವಂತಾಗಲಿ ಎಂದು ಹೇಳಿದರು.
ಸಂತ ಅನ್ನಮ್ಮ ಚರ್ಚ್ ಧರ್ಮಗುರು ಫಾದರ್ ಮದಲೈಮುತ್ತು ಮಾತನಾಡಿ, ಕೊಡಗು ಜಿಲ್ಲೆ ಆಸ್ಪತ್ರೆ ವ್ಯವಸ್ಥೆಯನ್ನು ಹೊರತು ಪಡಿಸಿ ರಕ್ಷಣಾಕ್ಷೇತ್ರ, ಕ್ರೀಡೆ ಸ್ಭೆರಿದಂತೆ ಎಲ್ಲಾ ಕೇತ್ರಗಳಲ್ಲಿ ಮುಂದಿದೆ. ಆರೋಗ್ಯ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸಲಿ ಎಂದು ಹೇಳೀದರು.
ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಮ್ಯಾಥ್ಯೂ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಪುರಸಭೆ ಸದಸ್ಯರಾದ ಸಿ.ಕೆ ಪೃಥ್ವಿನಾಥ್, ಎಸ್.ಎಚ್ ಮತೀನ್, ಕಾಂಗ್ರೆಸ್ ಮುಖಂಡ ಅಜ್ಜಿಕುಟ್ಟಿರ ಕಾರ್ಯಪ್ಪ ಉಪಸ್ಥಿತರಿದ್ದರು.
ಪೋಟೊ ೦೧ ವಿಟಿಪಿ ೧ ಮತ್ತು ೨ ಕ್ಲಿನಿಕ್ ಉದ್ಘಾಟನೆ.
*****************************

