ನಾಡದೇವತೆ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ಒಂದು ಶಾಶ್ವತ ದೀಪಾಲಂಕಾರ ಮಾಡುವಂತೆ ಸಂಗೀತ ನಿರ್ದೇಶಕ ಹಂಸಲೇಖ ಸಲಹೆ ನೀಡಿದರು.
ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟಿಸಿದ ಮಾತನಾಡಿದ ವೇಳೆ ಮಾತನಾಡಿದ ಅವರು, ಮೈಸೂರಿಗೆ ಕಳಶಪ್ರಾಯವಾದ ಚಾಮುಂಡಿಬೆಟ್ಟದಲ್ಲಿ ಒಂದು ಶಾಶ್ವತ ದೀಪಾಲಂಕಾರ ಮಾಡಿದರೆ ಅದು ವರ್ಷವಿಡೀ ಎಲ್ಲರನ್ನು ಸೆಳೆಯುತ್ತದೆ ಎಂದು ಹೇಳಿದರು.
ಬೆಟ್ಟದಲ್ಲಿ ಈ ದೀಪ ಶಾಶ್ವತವಾಗಿ ಬೆಳಗಿದರೆ ಎಲ್ಲರನ್ನೂ ವರ್ಷವಿಡೀ ಸೆಳೆಯುತ್ತದೆ. ಮೈಸೂರಿನಲ್ಲಿ ವಿಮಾನ ನಿಲ್ದಾಣವೂ ಇರುವುದರಿಂದ ಈ ದೀಪ ಎಲ್ಲರ ಕಣ್ಮನ ಸೆಳೆಯಲಿದೆ ಎಂದು ಸಲಹೆ ನೀಡಿದರು.