ಮೈಸೂರು, ಜುಲೈ 23, 2025 : ಬೀದಿ ಬದಿ ವ್ಯಾಪಾರಿಗಳಿಗೂ ಟ್ಯಾಕ್ಸ್ ಹಾಕುತ್ತಿರುವುದನ್ನು ಖಂಡಿಸಿ ಮೈಸೂರಿನಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳಿಂದ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ಸೇನಾಪಡೆ ಮತ್ತು ಮೈಸೂರು ಕನ್ನಡ ವೇದಿಕೆ ಸಂಘಟನೆಗಳಿಂದ ಹಳೆಯ ಜಿಲ್ಲಾಧಿಕಾರಿ ಬಳಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಹಣ ತುಂಬಿಸಲು ಬೀದಿ ಬದಿ ವ್ಯಾಪಾರಿಗಳಿಗೂ ಟ್ಯಾಕ್ಸ್ ಹಾಕುತ್ತಿದೆ.ಕೂಡಲೇ ರಾಜ್ಯದಲ್ಲಿ ಜಿ ಎಸ್ ಟಿ ಬ್ಯಾನ್ ಮಾಡಬೇಕು. ಯುಪಿಐ ಪೇಮೆಂಟ್ ನಿಂದ ಜನರಿಗೆ ಒಳ್ಳೆಯದಾಗಿದೆ. ಕೂಡಲೇ ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
