ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರ(ಎನ್‌ಎಸಿ) ಆಯೋಜಿಸುತ್ತಿರುವ 2ನೇ ಆವೃತ್ತಿಯ ರಾಷ್ಟ್ರೀಯ ಈಜು ಸ್ಪರ್ಧೆಯ ಮೊದಲ ದಿನವಾದ ಶನಿವಾರ ಕರ್ನಾಟಕದ ಶ್ರೀಹರಿ ನಟರಾಜ್ ಹಾಗೂ ರಿಧಿಮಾ ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ ಸ್ಕಿನ್ಸ್ ವಿಭಾಗದ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹರಿ 25.89 ಸೆಕೆಂಡ್‌ಗಳಲ್ಲಿ ಕ್ರಮಿಸಿ ಅಗ್ರಸ್ಥಾನಿಯಾದರು. ಮಹಿಳೆಯರ ವಿಭಾಗದಲ್ಲಿ ರಿಧಿಮಾ 29.35 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು. ಮಹಿಳೆಯರ 50 ಮೀ. ಬಟರ್‌ಫ್ಲೈ ಸ್ಕಿನ್ಸ್‌ನಲ್ಲಿ ನೀನಾ ವೆಂಕಟೇಶ್, ಪುರುಷರ ವಿಭಾಗದಲ್ಲಿ ಸಾಜನ್ ಬಂಗಾರದ ಸಾಧನೆ ಮಾಡಿದರು. ಭಾನುವಾರವೂ ಹಲವು ವಿಭಾಗಗಳ ಸ್ಪರ್ಧೆಗಳು ನಡೆಯಲಿವೆ.
