ಪ್ರತಿನಿಧಿ ವರದಿ ಕೆ.ಆರ್.ಪುರ
ಪ್ಲಾಸ್ಟಿಕ್ ಮುಕ್ತಿಗಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳಿಂದ ಅರಣ್ಯ ಸ್ವಚ್ಛತಾ ಕಾರ್ಯಕ್ಕೆ ನಡೆಯಿತು.
ನಗರದ ಬನ್ನೇರುಘಟ್ಟ ಸಮೀಪದ ಚಂಪಾಕದಾಮ ದೇವಸ್ಥಾನದಿಂದ ಸುರ್ವಣಮುಖಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ಸಂಟ್ ಫ್ರಾನ್ಸಿಸ್ ಪದವಿ ಪೂರ್ವ ಕಾಲೇಜಿನ ಸಹಯೋಯದಲ್ಲಿ ೧೨೦ ವಿದ್ಯಾರ್ಥಿಗಳು ಭಾಗಿಯಾಗಿ ಸ್ವಚ್ಛತಾ ಕಾರ್ಯವನ್ನು ಮಾಡಿದರು.
ಬನ್ನೇರುಘಟ್ಟ ವ್ಯಾಪ್ತಿಯ ಸುರ್ವಣಮುಖಿ ಬೆಟ್ಟದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡುವ ಅಭಿಯಾನದಲ್ಲಿ ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳು ಭಾಗಿಯಾಗಿ ಸತತ ೩ ಗಂಟೆಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡದ್ದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಇಲ್ಲಿನ ಇತಿಹಾಸ, ಮರಗಳಗಿಡ, ಪಕ್ಷಿಗಳ ಪರಿಚಯ ಮಾಡಿಕೊಡಲಾಯಿತು.
ಕಾಲೇಜು ಎನ್.ಎಸ್.ಎಸ್ ಘಟಕದ ಶಿಕ್ಷಕಿ ಪೂರ್ಣಿಮಾ ಜೋಗಿ, ಗ್ರೀನ್ ಆರ್ಮಿ ಫೋರ್ಸ್ ಅಧ್ಯಕ್ಷ ಡಿ.ಎಸ್. ಕಿರಣ್, ಸುವರ್ಣ ಕನ್ನಡ ಸಾಮ್ರಾಜ್ಯ ಹರೀಶ್ ಎಸ್, ಸಿಂಹಾದ್ರಿ, ಪರಿಸರ ಮಂಜು, ಪ್ರಕೃತಿ ಪ್ರಸನ್ನ, ಶಿವಪ್ಪ, ಸೌಮ್ಯ ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು.


