ಚಾಮರಾಜನಗರ, ಮಾರ್ಚ್ 30: ಜಿಲ್ಲೆಯ ಹನೂರು ತಾಲೂಕಿನ ಬೈಲೂರು ವಲಯ ಅರಣ್ಯದಲ್ಲಿ ಬೆಂಕಿ ಹೊತ್ತಿ ಉರಿದಿದೆ. ಪರಿಣಾಮ ಸುಮಾರು 25 ಎಕರೆ ಪ್ರದೇಶದಲ್ಲಿನ ಅರಣ್ಯ ಸಂಪತ್ತು ಅಗ್ನಿಗಾಹುತಿ ಆಗಿದೆ. 60ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಗಿದೆ. ತಿಂಗಳ ಹಿಂದೆ ಪುಣಜೂರು ವಲಯ ಅರಣ್ಯದಲ್ಲಿ ಬೆಂಕಿ ಬಿದ್ದಿತ್ತು. 50 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿತ್ತು. ಕಳೆದ 2 ತಿಂಗಳಲ್ಲಿ ಬಿಆರ್ಟಿ ವ್ಯಾಪ್ತಿಯಲ್ಲಿ 3ನೇ ಬಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಹೀಗೆ ಪದೇಪದೆ ಬೆಂಕಿ ಬೀಳುತ್ತಿರುವುದರಿಂದ ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ.
