ಕುವೈತ್ ವಿರುದ್ಧ 1-0 ಗೋಲಿನ ಜಯದೊಂದಿಗೆ 2026ರ ಫಿಫಾ ಫುಟ್ಬಾಲ್ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಶುಭಾರಂಭ ಮಾಡಿರುವ ಭಾರತ, ಮಂಗಳವಾರ ‘ಎ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ ಕತಾರ್ ವಿರುದ್ಧ ಸೆಣಸಾಡಲಿದೆ. ಫಿಫಾ ರ್ಯಾಂಕಿಂಗ್‌ನಲ್ಲಿ 61ನೇ ಸ್ಥಾನದಲ್ಲಿರುವ ಕತಾರ್ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 8-1ರಿಂದ ಮಣಿಸಿದೆ.
ಹೀಗಾಗಿ 102ನೇ ಸ್ಥಾನದಲ್ಲಿರುವ ಭಾರತಕ್ಕೆ ಕತಾರ್‌ನಿಂದ ಕಠಿಣ ಸವಾಲು ಎದುರಾಗುವುದು ಖಚಿತ. ಭಾರತ ಈ ಮೊದಲು 2019ರಲ್ಲಿ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಕತಾರ್ ವಿರುದ್ಧ 1-1 ಡ್ರಾ ಸಾಧಿಸಿತ್ತು. ಇದೇ ಹುಮ್ಮಸ್ಸಿನಲ್ಲಿ ಮಂಗಳವಾರದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಕತಾರ್‌ಗೆ ಆಘಾತ ನೀಡುವ ನಿರೀಕ್ಷೆಯಲ್ಲಿದೆ.
ಪಂದ್ಯ: ಸಂಜೆ 7 ಗಂಟೆಗೆ,
ನೇರ ಪ್ರಸಾರ: ಜಿಯೋ ಸಿನಿಮಾ
