ಚನ್ನಪಟ್ಟಣ: ತಾಲೂಕಿನ ನ್ಯಾಯಾಲಯದ ನ್ಯಾಯಾಧೀಶರಾದ ಶುಭ ಮತ್ತು ಮಹೇಂದ್ರ ಅವರು ಚನ್ನಪಟ್ಟಣ ನ್ಯಾಯಾಲಯದಲ್ಲಿ ಮೂರು ವರ್ಷಗಳ ಕಾಲ ತಮ್ಮ ಕರ್ತವ್ಯದ ಅವಧಿ ಮುಗಿಸಿ ಬೇರೆ ಕಡೆ ವರ್ಗಾವಣೆ ಕೊಂಡ ಹಿನ್ನೆಲೆ, ಚನ್ನಪಟ್ಟಣ ವಕೀಲ ಸಂಘದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ವಕೀಲರ ಸಂಘದ ಅಧ್ಯಕ್ಷ ಪಿ.ವಿ.ಗಿರೀಶ್, ಪ್ರಧಾನ ಕಾರ್ಯದರ್ಶಿ ದೇವರಾಜು, ಸಂಘದ ಸದಸ್ಯರು ಹಾಗೂ ವಕೀಲರಾದ ಲಕ್ಷ್ಮಣ್ ಲಿಂಗಪ್ಪ ನಾರಾಯಣಸ್ವಾಮಿ, ಕೆ.ಆರ್.ರವಿ ಧನಂಜಯ ವೆಂಕಟೇಶ್ ಉಪಸ್ಥಿತರಿದ್ದರು.
