PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಪ್ರೊ ಕಬಡ್ಡಿ: ತವರಲ್ಲೂ ಬೆಂಗಳೂರು ಬುಲ್ಸ್‌ಗಿಲ್ಲ ಗೆಲುವಿನ ಸಿಹಿ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಸಮಗ್ರ > ಪ್ರೊ ಕಬಡ್ಡಿ: ತವರಲ್ಲೂ ಬೆಂಗಳೂರು ಬುಲ್ಸ್‌ಗಿಲ್ಲ ಗೆಲುವಿನ ಸಿಹಿ
ಸಮಗ್ರ

ಪ್ರೊ ಕಬಡ್ಡಿ: ತವರಲ್ಲೂ ಬೆಂಗಳೂರು ಬುಲ್ಸ್‌ಗಿಲ್ಲ ಗೆಲುವಿನ ಸಿಹಿ

Prathinidhi News
Last updated: December 9, 2023 9:45 am
Prathinidhi News
Published December 9, 2023
Share
SHARE

ಬೆಂಗಳೂರು(ಡಿ.09): ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ಗೆ ಈ ಬಾರಿ ತವರಲ್ಲೂ ಅದೃಷ್ಟ ಕೈಕೊಟ್ಟಿದೆ. 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬುಲ್ಸ್‌ ಶುಕ್ರವಾರ ದಬಾಂಗ್ ಡೆಲ್ಲಿ ವಿರುದ್ಧ 31-38 ಅಂಕಗಳಿಂದ ಪರಾಭವಗೊಂಡಿತು. ಇದು ಟೂರ್ನಿಯಲ್ಲಿ ಬುಲ್ಸ್‌ ಸೇನೆಗೆ ಎದುರಾದ ಹ್ಯಾಟ್ರಿಕ್‌ ಸೋಲು. ಅತ್ತ ಡೆಲ್ಲಿ ಟೂರ್ನಿಯ ಮೊದಲ ಜಯ ದಾಖಲಿಸಿತು.

ತಾರಾ ಆಟಗಾರರು ಮತ್ತೆ ಕೈಕೊಟ್ಟಿದ್ದರಿಂದ ಬುಲ್ಸ್‌ ತನ್ನ ತವರು ಕಂಠೀರವ ಕ್ರೀಡಾಂಗಣದಲ್ಲೂ ಗೆಲುವಿನಿಂದ ವಂಚಿತವಾಯಿತು. ಆರಂಭದಲ್ಲೇ ಪ್ರಾಬಲ್ಯ ಮೆರೆದ ಡೆಲ್ಲಿ, ಯಾವ ಕ್ಷಣದಲ್ಲೂ ಬುಲ್ಸ್‌ಗೆ ಮುನ್ನಡೆ ಸಾಧಿಸಲು ಅವಕಾಶ ನೀಡಲಿಲ್ಲ. ಮೊದಲಾರ್ಧದಲ್ಲಿ ಬುಲ್ಸ್‌ 11-17 ಅಂಕಗಳಿಂದ ಹಿನ್ನಡೆಗೊಳಗಾಯಿತು.

ಆದರೆ ದ್ವಿತೀಯಾರ್ಧದ ಆರಂಭದಲ್ಲೇ ತಿರುಗಿಬಿದ್ದ ಬುಲ್ಸ್‌ ಆಟಗಾರರು, ಮೊದಲ 4 ನಿಮಿಷಗಳಲ್ಲಿ ಅಂಕವನ್ನು 20-20ರಲ್ಲಿ ಸಮಬಲಗೊಳಿಸಿದರು. ಆದರೆ ಬುಲ್ಸ್‌ ಆಲೌಟಾ ಆಗುವುದರೊಂದಿಗೆ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಡೆಲ್ಲಿ, ಆ ಬಳಿಕ ಹಿಂದಿರುಗಿ ನೋಡಲಿಲ್ಲ. ಭರತ್‌ ಮಿಂಚಿನ ವೇಗದಲ್ಲಿ ಅಂಕಗಳನ್ನು ಗಳಿಸಿದರೂ ಇತರರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಅವರು 12 ಅಂಕ ಗಳಿಸಿದರು. ಡೆಲ್ಲಿಯ ನವೀನ್‌ 12, ಆಶು ಮಲಿಕ್‌ 8 ರೈಡ್‌ ಅಂಕ ಸಂಪಾದಿಸಿ ತಂಡವನ್ನು ಗೆಲ್ಲಿಸಿದರು.

ಮತ್ತೆ ಕೈಕೊಟ್ಟ ಸ್ಟಾರ್ಸ್‌

- ಜಾಹೀರಾತು -

ಬುಲ್ಸ್‌ಗೆ ಈ ಪಂದ್ಯದಲ್ಲೂ ತಾರಾ ಆಟಗಾರರು ಕೈಕೊಟ್ಟರು. ವಿಕಾಸ್‌ 7 ರೈಡ್‌ಗಳಲ್ಲಿ ಕೇವಲ ಒಂದೂ ಅಂಕ ಗಳಿಸಲಿಲ್ಲ. ನೀರಜ್‌ 4 ರೈಡ್‌ಗಳಲ್ಲಿ 1 ಅಂಕ ಪಡೆದರು. ಡಿಫೆಂಡರ್‌ಗಳೂ ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಸೌರಭ್‌ 2, ಅನುಭವಿ ಸುರ್ಜೀತ್‌ ಕೇವಲ 1 ಅಂಕ ಗಳಿಸಿದ್ದು ತಂಡಕ್ಕೆ ಮುಳುವಾಯಿತು.

ಪುಣೆಗೆ ಸತತ ಎರಡನೇ ಜಯ

ಶುಕ್ರವಾರ ನಡೆದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ದ ಪುಣೇರಿ ಪಲ್ಟನ್ 43-32 ಅಂಕಗಳಿಂದ ಜಯಭೇರಿ ಬಾರಿಸಿತು. ಪುಣೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದರೆ, ಮುಂಬೈ 3 ಪಂದ್ಯಗಳಲ್ಲಿ ಎರಡನೇ ಸೋಲನುಭವಿಸಿತು. ಮೊದಲಾರ್ಧದಲ್ಲೇ 21-13 ರಿಂದ ಮುನ್ನಡೆ ಸಾಧಿಸಿದ್ದ ಪುಣೆ ಕೊನೆಯವರೆಗೂ ಪಂದ್ಯದ ಮೇಲಿನ ಹಿಡಿತ ಸಡಿಲಗೊಳಿಸದೆ ಜಯ ತನ್ನದಾಗಿಸಿಕೊಂಡಿತು. ಯುವ ಆಟಗಾರ ಮೋಹಿತ್ 3 ಟ್ಯಾಕಲ್ ಸೇರಿ ಒಟ್ಟು 12 ಅಂಕ ಸಂಪಾದಿಸಿ  ಪುಣೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮುಂಬಾದ ಪ್ರಣಯ್ 5 ರೈಡ್ ಅಂಕ ಸಂಪಾದಿಸಿದರು.

ಇಂದು ಬುಲ್ಸ್‌ -ಹರ್ಯಾಣ ಕದನ

ಬೆಂಗಳೂರು ಬುಲ್ಸ್ ತಂಡ ಟೂರ್ನಿಯ 4ನೇ ಪಂದ್ಯದಲ್ಲಿ ಶನಿವಾರ ಹರ್ಯಾಣ ಸ್ಟೀಲರ್ಸ್‌ ವಿರುದ್ದ ಸೆಣಸಾಡಲಿದ್ದು, ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ. ಹರ್ಯಾಣ ಆರಂಭಿಕ ಪಂದ್ಯದಲ್ಲಿ ಸೋಲನನ್ನುಭವಿಸಿದ್ದು, ಮೊದಲ ಜಯದ ಕಾತರದಲ್ಲಿದೆ.

ಇಂದಿನ ಪಂದ್ಯಗಳು

ಬೆಂಗಳೂರು-ಹರ್ಯಾಣ, ರಾತ್ರಿ 8ಕ್ಕೆ

ಯೋಧಾಸ್‌-ಟೈಟಾನ್ಸ್‌, ರಾತ್ರಿ 9ಕ್ಕೆ

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಸಮಗ್ರ

ಎರಡು ತಿಂಗಳೊಳಗಾಗಿ ಕಾಮಗಾರಿ ಪೂರ್ಣ

May 10, 2024
ಸಮಗ್ರ

ಇಂದು ಮೋದಿ ಅಯೋಧ್ಯೆಯಲ್ಲಿ 15,000 ಕೋಟಿ ರೂ. ಯೋಜನೆಗೆ ಚಾಲನೆ

December 30, 2023
ಸಮಗ್ರ

ಪ್ರತಿಯೊಬ್ಬರು ಮೈತ್ರಿ ಧರ್ಮ ಪಾಲಿಸಿ

March 29, 2024
ಸಮಗ್ರ

ಪತ್ರಕರ್ತರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು

July 10, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?