ಪ್ರತಿನಿಧಿ ವರದಿ ನಾಗಮಂಗಲ
ಹುಬ್ಬಳ್ಳಿಯ ನೇಹಾ ಹಿರೇಮಠ್ ಕೊಲೆಗೈದ ಫಯಾಜ್ ಗೆ ಗಲ್ಲುಶಿಕ್ಷೆ ವಿಧಿಸುವ ಮೂಲಕ ಲವ್ ಜಿಹಾದ್ ಗೆ ಅಂತ್ಯ ಹಾಡಬೇಕು ಎಂದು ಮಂಡ್ಯ ಜಿಲ್ಲಾ ವಿಶ್ವ ಹಿಂದು ಪರಿಷತ್ ದುರ್ಗಾವಾಹಿನಿ ಮಾತೃಶಕ್ತಿ ಸಂಘಟನೆಯ ಉಷಾ ಜಗದೀಶ್ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಹಾಗೂ ರಾಮನವಮಿ ದಿನ ಹಿಂದು ಯುವಕರ ಮೇಲಿನ ಹಲ್ಲೆಯನ್ನು ಖಂಡಿಸಿ, ಪಟ್ಟಣದ ಬಜರಂಗದಳ ವಿಶ್ವ ಹಿಂದು ಪರಿಷತ್ ಜಂಟಿಯಾಗಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಲವ್ ಜಿಹಾದ್ ಗೆ ಪ್ರಚೋದಿಸುವ ಮತ್ತು ಹಿಂದು ಹೆಣ್ಣುಮಕ್ಕಳನ್ನು ಅವರ ಕಾಮದಾಹದ ಸಾಧನಗಳಂತೆ ಬಳಸಿಕೊಳ್ಳುವ ಮತಾಂಧ ಮುಸ್ಲಿಂ ಮನಸುಗಳಿಗೆ ಭಯ ಹುಟ್ಟುವಂತ ಕಾನೂನು ಬರಬೇಕು. ಮುಸ್ಲಿಂ ಸಮುದಾಯದ ಕೆಲವು ವಿಕೃತ ಮನಸುಗಳು ಲವ್ ಜಿಹಾದನ್ನು ಪ್ರೇರೇಪಿಸಿ ಪೋಷಿಸುತ್ತಿದೆ. ನಮ್ಮ ಹೆಣ್ಣು ಮಕ್ಕಳ ಭದ್ರತೆ ಹಾಗೂ ರಕ್ಷಣೆ ಆಗಬೇಕೆಂದರೆ ಕೊಲೆಗಡುಕ ಮತಾಂಧರಿಗೆ ಗಲ್ಲುಶಿಕ್ಷೆ ಆಗಬೇಕು. ತೀವ್ರ ಸ್ವರೂಪದ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಹೆಣ್ಣು ಮಕ್ಕಳು ಕೂಡ ಕ್ಷುಲ್ಲಕ ಆಮಿಷಕ್ಕೆ, ಉಡುಗೊರೆಗಳಿಗೆ ಅವರ ನಯವಾದ ಮಾತಿನ ಮೋಡಿಗೆ ಸಿಲುಕಬಾರದು. ಅವರ ನಡವಳಿಕೆ ನಯವಂಚಕತನ ಗುರುತಿಸಿ ಅವರನ್ನು ಸಾರಾ ಸಗಟಾಗಿ ತಿರಸ್ಕರಿಸಬೇಕು. ಅವರ ಪ್ರೀತಿ ಕೊಲೆ ಮಾಡಿ ಮೂಟೆ ಕಟ್ಟುವಂತದ್ದು, ಕತ್ತರಿಸಿ ರೆಫ್ರಿಜರೇಟರ್ ನಲ್ಲಿ ತುಂಬುವಂತದ್ದು, ಚೂರಿಯಿಂದ ಚುಚ್ಚಿ ಸಾಯಿಸುವಂತದ್ದು ಅಂತಹ ಪ್ರೀತಿ ಬೇಕಿಲ್ಲ. ಸನಾತನ ಧರ್ಮದ ಹಿಂದು ನಾರಿ ಶಕ್ತಿ ಒಂದಾಗಬೇಕು. ತಾಯಂದಿರು ತಮ್ಮ ಹೆಣ್ಣುಮಕ್ಕಳ ಮೇಲಿನ ಜವಾಬ್ದಾರಿ ಹೆಚ್ಚಿಸಿಕೊಳ್ಳಬೇಕು ಎಂದರು.
ಟಿಬಿ ಬಡಾವಣೆಯ ಬಿಜಿಎಸ್ ವೃತ್ತದಿಂದ ಪಟ್ಟಣದ ಟಿ.ಮರಿಯಪ್ಪ ವೃತ್ತದವರೆಗೂ ಪ್ರತಿಭಟನಾಕಾರರು ಜಾಥಾ ನಡೆಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಸುರೇಶ್ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯ ನಂತರ ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಪುಣ್ಯಕೋಟಿ ರಾಘವೇಂದ್ರ ಅವರು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ನಯೀಮುನ್ನಿಸಾ ಅವರಿಗೆ ಹಸ್ತಾಂತರಿಸಿದರು.
ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಬಸವರಾಜು, ಬಜರಂಗದಳ ವಿಭಾಗ ಸಂಯೋಜಕ್ ಚಿಕ್ಕಬಳ್ಳಿ ಬಾಲು, ಬೆಂಗಳೂರು ಮಾತೃಶಕ್ತಿಯ ಉಷಾ ಜಗದೀಶ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಸಂಯೋಜಕ ಶಶಿಕಿರಣ್, ತಾಲೂಕು ಸಂಯೋಜಕ್ ಕಾರ್ತಿಕ್, ಪುರಸಭಾ ಸದಸ್ಯ ವಿಜಯ್ ಕುಮಾರ್ (ಪುಂಗ) ಸೇರಿದಂತೆ ಹಲವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
