PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಉನ್ನತ ಶಿಕ್ಷಣದಿಂದ ಸಬಲತೆ ಸಾಧ್ಯ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಮಂಡ್ಯ > ಉನ್ನತ ಶಿಕ್ಷಣದಿಂದ ಸಬಲತೆ ಸಾಧ್ಯ
ಮಂಡ್ಯ

ಉನ್ನತ ಶಿಕ್ಷಣದಿಂದ ಸಬಲತೆ ಸಾಧ್ಯ

ಪ್ರತಿನಿಧಿ
Last updated: March 26, 2024 6:19 pm
ಪ್ರತಿನಿಧಿ
Published March 25, 2024
Share
SHARE

ಎಚ್‌ಕೆವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ.ಲತಾ ಅಭಿಪ್ರಾಯ

ಕೆ.ಎಂ.ದೊಡ್ಡಿ: ಮಹಿಳೆಯರು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಿದಾಗ ಮಾತ್ರ ಸಬಲತೆ ಸಾಧಿಸಲು, ಸ್ವಾವಲಂಭಿ ಜೀವನ ನಡೆಸಲು ಸಾಧ್ಯ ಎಂದು ಮದ್ದೂರಿನ ಎಚ್‌ಕೆವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ.ಲತಾ ತಿಳಿಸಿದರು.
ಇಲ್ಲಿನ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಜಿ.ಮಾದೇಗೌಡ ಇನ್ಸಿಟಿಟ್ಯೂಟ್ ಆಫ್ ಫಾರ್ಮಾಸ್ಯಟಿಕಲ್ ಸೈನ್ಸ್ಸ್ ವತಿಯಿಂದ ಮಹಿಳಾ ಸಬಲೀಕರಣ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಗಾರದಲ್ಲಿ ಅಭಿನಂಧನೆ ಸ್ವೀಕರಿಸಿ ಮಾತನಾಡಿದರು.
ಪ್ರತಿಯೊಬ್ಬ ಮಹಿಳೆಯಲ್ಲೂ ಒಬ್ಬ ಸಾಧಕಿ ಇರುತ್ತಾಳೆ. ಹೆಣ್ಣು ಜನಿಸಿದರೆ ಮನೆಗೆ ಲಕ್ಷ್ಮೀ ಬಂದಂತೆ. ದುಡಿಯುವ ವಿಚಾರ ಬಂದಾಗ ಮಹಿಳೆಯರೇ ಎತ್ತಿದ ಕೈ ಕೇವಲ ಓದಿದರೆ ಸಾಲದು. ಓದಿನ ಹಿಂದಿನ ಮಹತ್ವ ಅರಿತು ಪ್ರಥಮವಾಗಿ ಉನ್ನತ ಹುದ್ದೆ ಅಲಂಕರಿಸಿ ಸಮಾಜಕ್ಕೆ ಒಳಿತು ಮಾಡಿದಾಗ ಮಾತ್ರ ಸಬಲರಾದಂತೆ ಎಂದು ಕಿವಿ ಮಾತು ಹೇಳಿದರು.
ಮಹಿಳೆಯರು ಯಾವಾಗಲೂ ಸಬಲರೆ. ಮಹಿಳೆಗೆ ಹಿಂದಿನಿಂದಲೂ ಅಡುಗೆ ಮನೆಯನ್ನು ಕೊಟ್ಟಿದ್ದೆ ಮಹಿಳೆ ಸಬಲೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಸ್ವಾವಲಂಭಿಗಳಾಗಿ ಮಾಡಲು ಯಾರಿಗೂ ಕಾಣದಂತೆ ಶ್ರಮ ವಹಿಸಿದ್ದಾರೆ. ಶ್ರಮ ಸಾರ್ಥಕತೆ ಪಡೆಯಬೇಕಾದರೆ ಮಹಿಳೆಯರು ಉನ್ನತ ಶಿಕ್ಷಣ ಪಡೆದು ಸ್ವಾವಾವಲಂಭಿಗಳಾದಾಗ ಮಾತ್ರ ಸಾಧ್ಯ. ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀ ಹೆಲ್ತ್ ಸೈನ್ಸ್ಸ್ ನಿರ್ದೇಶಕ ಡಾ. ತಮಿಜ್‌ಮಣಿ ಮಾತನಾಡಿ, ಹೆಣ್ಣು ಎಲ್ಲ ಕ್ಷೇತ್ರದಲ್ಲೂ ತನ್ನ ಚಾಪನ್ನು ಮೂಡಿಸಿದ್ದಾರೆ ನಾನು ವ್ಯಾಸಂಗ ಮಾಡುತಿದ್ದ ವೇಳೆ ಒಂದು ತರಗತಿಗೆ ಒಬ್ಬರೋ ಇಬ್ಬರೋ ವಿದ್ಯಾರ್ಥಿನಿಯರು ಇರುತಿದ್ದರು ಆದರೆ ಪ್ರಸ್ತುತ ವಿದ್ಯಾರ್ಥಿಗಿಂತ ವಿದ್ಯಾರ್ಥಿನಿಯರೇ ಹೆಚ್ಚದ್ದಾರೆ ಉತ್ತಮ ಶಿಕ್ಷಣ ಪಡೆಯುತಿದ್ದಾರೆ ಎಂದು ಮೆಲಕು ಹಾಕಿದರು.
ಭಾರತೀ ಔಷಧ ವಿಜ್ಞಾನ ಕಾಳೆಜಿನ ಪ್ರಾಂಶುಪಾಲ ಡಾ.ಟಿ. ಬಾಲಸುಬ್ರಮಣ್ಯಂ, ಜಿ.ಮಾದೇಗೌಡ ಇನ್ಸ್ಟ್ಯೂಟ್ ಆಫ್ ಫಾರ್ಮಾಸ್ಯಟಿಕಲ್ ಸೈನ್ಸ್ಸ್ ಪ್ರಾಂಶುಪಾಲ ಡಾ.ಜಗದೀಶ್ ಸೇರಿದಂತೆ ಮತ್ತಿತರಿದ್ದರು.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಮಂಡ್ಯ

ವೆಂಕಟರಮಣೆಗೌಡ ಪರ ದರ್ಶನ್ ಪ್ರಚಾರ

April 23, 2024
ಮಂಡ್ಯ

ಸಭೆ ಬಹಿಷ್ಕರಿಸಿದ ಮುಖಂಡರು

July 18, 2024
ಮಂಡ್ಯ

ಗುರುಪೂರ್ಣಿಮೆ ಸಂಭ್ರಮ ಇಂದು

July 20, 2024
ಮಂಡ್ಯ

ರೋಗಗಳ ನಿಯಂತ್ರಣಕ್ಕೆ ಯುವ ಸಮೂಹ ಸಹಕರಿಸಿ

April 30, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?