ಮೈಸೂರು , ಜೂನ್ 9, 2025 : ಮೈಸೂರು ಜಿಲ್ಲೆ ಹುಣಸೂರು ತಾಲ್ಲಕಿನ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಆನೆಗಳ ನಡುವೆ ಕಾದಾಟ ನಡೆದಿದ್ದು, ಮಕನಾ ಆನೆಗೆ ಗಾಯವಾಗಿರುವ ಘಟನೆ ಜರುಗಿದೆ.

ನಾಗರಹೊಳೆ ವನ್ಯಜೀವಿ ವಲಯ ವ್ಯಾಪ್ತಿಯ ಹೊಸಕೆರೆ ಅರಣ್ಯ ವ್ಯಾಪ್ತಿಯಲ್ಲಿ ಗಂಡಾನೆ ಹಾಗೂ ಮಕನಾ ಆನೆ ನಡುವೆ ಕಾದಾಟ ನಡೆದಿದೆ. ಈ ವೇಳೆ ಮತ್ತಿಗೋಡು ಸಾಕಾನೆ ಶಿಬಿರದ ಸಾಕಾನೆಗಳಾದ ಭೀಮ ಹಾಗೂ ಮಹೇಂದ್ರ, ಮಕನಾ ಆನೆಯನ್ನು ಸೆರೆ ಹಿಡಿಯುವಲ್ಲಿ ನೆರೆವಾಗಿದ್ದು, ಮಕನಾ ಆನೆಗೆ ಕಾದಾಟದಲ್ಲಿ ಗಾಯಗಳಾಗಿವೆ. ಆನೆ ಸೆರೆಹಿಡಿದ ನಂತರ ಮಕನಾ ಆನೆಗೆ ಚಿಕಿತ್ಸೆ ನೀಡಿದ್ದು, ಚಿಕಿತ್ಸೆಯ ನಂತರ ಮಕನಾ ಆನೆಯನ್ನು ಕಾಡಿಗೆ ಬಿಡಲಾಗಿದೆ.
ನಾಗರಹೊಳೆ ಪಶುವೈದ್ಯಾಧಿಕಾರಿ ಡಾ. ರಮೇಶ್, ಡಾ. ಚೆಟ್ಟಿಯಪ್ಪ ಅವರಿಂದ ಗಾಯಗೊಂಡಿದ್ದ ಆನೆಗೆ ಚಿಕಿತ್ಸೆ ನೀಡಲಾಗಿದೆ. ದುಬಾರೆ ಡಿಆರ್‌ಎಫ್‌ಒ ರಂಜನ್ ಮಕನಾ ಆನೆ ಸೆರೆಹಿಡಿಯಲು ಈ ವೇಳೆ ನೆರವಾಗಿದ್ದಾರೆ. ಕಾರ್ಯಾಚರಣೆಯಲ್ಲಿ ನಾಗರಹೊಳೆ ಎಸಿಎಫ್ ಅನನ್ಯ ಕುಮಾರ್, ಆರ್‌ಎಫ್‌ಒ ಮಂಜುನಾಥ್, ಡಿಆರ್‌ಎಫ್‌ಒಗಳಾದ ನವೀನ್ ರೌತ್, ಮಧುಸೂದನ್ ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದಾರೆ.
