ಭಕ್ತಾಧಿಗಳಿಗೆ ಪಾನಕ, ಮಜ್ಜಿಗೆ, ಕೊಸಂಬರಿ ವಿತರಣೆ
ದೇವನಹಳ್ಳಿ ವಿವಿಧೆಡೆ ರಾಮ ನವಮಿ ಆಚರಣೆ

ದೇವನಹಳ್ಳಿ: ರಾಮಜಯಂತಿ ಪ್ರಯುಕ್ತ ತಾಲ್ಲೂಕಿನಾದ್ಯಂತ ಶ್ರೀ ಆಂಜನೇಯಸ್ವಾಮಿ ಹಾಗೂ ಶ್ರೀ ರಾಮ ದೇಗುಲಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಹೋಮ ಹವನಾದಿಗಳು ಹಮ್ಮಿಕೊಳ್ಳಲಾಗಿತ್ತು, ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ, ಅನ್ನದಾನ ನಡೆಯಿತು. ದಿನಪೂರ್ತಿ ದೇಗುಲಗಳಿಗೆ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಪಟ್ಟಣದ ಚಿಕ್ಕಕೆರೆ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಹಾಲು, ಮೊಸಲು, ಒಣ ಹಣ್ಣು ಸೇರಿದಂತೆ ತುಪ್ಪದಿಂದ ದೇವರಿಗೆ ವಿಶೇಷ ಅಭಿಷೇಕ ಮಾಡಿ, ವಜ್ರಾಂಗಿ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು.
ಕೊಯಿರಾದ ಶ್ರೀ ಆಂಜನೇಯಸ್ವಾಮಿಗೆ ಫಲಪಂಚಾಮೃತ ಅಭಿಷೇಕ ಮಾಡಿ, ವಿವಿಧ ಹೂವುಗಳ ಸಮೇತವಾಗಿ ವಸ್ತ್ರಾಲಂಕಾರ ಮಾಡಿ, ಶ್ರೀ ರಾಮ ಸಮೇತ ಓಂಕಾರವಿರುವ 108 ಬೆಳ್ಳಿ ನಾಣ್ಯಗಳ ಹಾರವನ್ನು ದೇವರಿಗೆ ಅರ್ಪಿಸಲಾಗಿತ್ತು. ಉದ್ದಿನ ವಡೆಯ ಮೂಲಕ ಹನುಮಂತನಿಗೆ ಸೇವೆ ಸಲ್ಲಿಸಿ ಭಕ್ತರು, ಗ್ರಾಮದ ಕೋತಿಗಳಿಗೆ ಬಾಳೆ ಹಣ್ಣು ವಿತರಿಸಿದರು.
ಪಟ್ಟಣದ ಪಾರಿವಾಟ ಗುಟ್ಟ, ತಾಲ್ಲೂಕು ಕಚೇರಿ , ಆವತಿ ತಿಮ್ಮರಾಯಸ್ವಾಮಿ , ಬಂಡೆಕೆರೆ, ಮಾರ್ಕೆಟ್ ಆಂಜನೇಯ, ಕೋಟೆ ರಾಘವೇಂದ್ರ ಸ್ವಾಮಿ ಮಠದಲ್ಲಿನ ಶ್ರೀ ವೀರಾಂಜನೇಯ, ಸರೋವರ ಬೀದಿ ಆಂಜನೇಯಸ್ವಾಮಿ, ಲಕ್ಷ್ಮಿಪುರ, ವಿಶ್ವನಾಥಪುರ, ಬನ್ನಿಮಂಗಲ, ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಹಾಗೂ ನಗರದ ಚೌಕ ಆಂಜನೇಯ ಸ್ವಾಮಿಗೆ ಮಾಡಿರುವ ಅಲಂಕಾರವನ್ನು ಭಕ್ತಾಧಿಗಳು ಕಣ್ತುಂಬಿಕೊಂಡರು.
ತಾಲ್ಲೂಕಿನ ಕಾರಹಳ್ಳಿ ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮ ಜಯಂತಿ ಅಂಗವಾಗಿ ದೇವತಾ ಪ್ರಾರ್ಥನೆ ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹ ವಾಚನ, ಗಣಪತಿ ಹೋಮ, ಪವಮಾನ ಹೋಮ, ಶ್ರೀರಾಮತಾರಕ ಹೋಮ, ಆಂಜಿನೇಯ ಸ್ವಾಮಿಯವರಿಗೆ ಪಂಚಾಮೃತ ಹಾಗೂ ವಿಶೇಷ ಅಲಂಕಾರ ಹೀಗೆ ಹಲವಾರು ಪೂಜಾಕಾರ್ಯ ನಡೆಯಿತು.
ಎಲ್ಲಾ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜೆ, ಪಾನಕ, ಮಜ್ಜಿಗೆ, ಕೊಸಂಬರಿ ವಿತರಣೆ ಪ್ರಸಾದ ವಿನಿಯೋಗ ನಡೆಯಿತು ಭಕ್ತರು ಶ್ರೀರಾಮ ನಾಮ ಸ್ಮರಣೆಯಲ್ಲಿ ಮಿಂದೆದ್ದರು.
ಪೋಟೋ17 ಡಿಎಚ್ಎಲ್ ಪಿ1
ದೇವನಹಳ್ಳಿ ಪಟ್ಟಣದ ಚಿಕ್ಕಕೆರೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ಶ್ರೀರಾಮನವಮಿ ಹಬ್ಬದ ಅಂಗವಾಗಿ ಆಂಜನೇಯ ಸ್ವಾಮಿಗೆ ಬೆಳ್ಳಿ ಕವಚ ಅಲಂಕಾರ ಮಾಡಿರುವುದು.
ಪೋಟೋ 17ಡಿಎಚ್ಎಲ್ ಪಿ2
ದೇವನಹಳ್ಳಿ ಪಟ್ಟಣದ ರಾಣಿ ಸರ್ಕಲ್ ಜಂಕ್ಷನ್ ನ ಸಮೀಪದಲ್ಲಿರುವ ಬಾಯಣ್ ಗುಂಡ್ಲು ಚಿಕ್ಕ ಆಂಜನೇಯ ಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶ್ರೀ ರಾಮನವಮಿ ಅಂಗವಾಗಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಗಳು.
ಪೋಟೋ 17ಡಿಎಚ್ಎಲ್ ಪಿ6
ದೇವನಹಳ್ಳಿ ತಾಲೂಕಿನ ಚಪ್ಪರದ ಕಲ್ಲು ಸರ್ಕಲ್ ನಲ್ಲಿ ಶ್ರೀ ರಾಮನವಮಿ ಅಂಗವಾಗಿ ಸಾರ್ವಜನಿಕರಿಗೆ ಪಾನಕ ಮಜ್ಜಿಗೆ ಕೋಸಂಬರಿ ವಿತರಿಸಿದರು.
ಪೋಟೋ 17ಡಿಎಚ್ಎಲ್ ಪಿ7
ದೇವನಹಳ್ಳಿ ತಾಲೂಕಿನ ಲಕ್ಷ್ಮಿಪುರ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಹೂವಿನ ಅಲಂಕಾರ ಮಾಡಿರುವುದು.
ಪೋಟೋ 17ಡಿಎಚ್ಎಲ್ ಪಿ8
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮನವಮಿ ಅಂಗವಾಗಿ ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿರುವುದು.
ಪೋಟೋ 17ಡಿಎಚ್ಎಲ್ ಪಿ9
ದೇವನಹಳ್ಳಿ ತಾಲೂಕಿನ ರಾಮನಾಥಪುರದಲ್ಲಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಸೀತಾರಾಮ ಲಕ್ಷ್ಮಣ ಸಮೇತ ಆಂಜನೇಯ ಸ್ವಾಮಿಗೆ ಹೂವಿನ ಅಲಂಕಾರ ಗಮನ ಸೆಳೆಯಿತು.
ಪೋಟೋ 17ಡಿಎಚ್ಎಲ್ ಪಿ10
ದೇವನಹಳ್ಳಿ ಪಟ್ಟಣದ ಗಾಂಧಿ ಚೌಕದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಹೂವಿನ ಅಲಂಕಾರ ಮಾಡಿರುವುದು.
ಪೋಟೋ 17ಡಿಎಚ್ಎಲ್ ಪಿ12
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಹೂವಿನ ಅಲಂಕಾರ ಮಾಡಿರುವುದು.
