
ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿಕೆ
ಪ್ರತಿನಿಧಿ ವರದಿ ತುಮಕೂರು
ತುಮಕೂರನ್ನು ವಾರಣಾಸಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಬಂದಿದೇನೆ. ದೇಶದ ಅಭಿವೃದ್ಧಿಗೆ ಮೋದಿ, ತುಮಕೂರಿನ ಅಭಿವೃದ್ಧಿಗೆ ನನ್ನ್ು ಆಯ್ಕೆ ಮಾಡಿ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮನವಿ ಮಾಡಿದರು.
ನನ್ನನ್ನು ಸಂಸತಿಗೆ ಆಯ್ಕೆ ಮಾಡಿದರೆ ನೀರಾವರಿ, ರಸ್ತೆ, ಶಿಕ್ಷಣ, ಆಸ್ಪತ್ರೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ತುಮಕೂರಿಗೆ ಕೊಡುತ್ತೇನೆ ಎಂದು ವಿ ಸೋಮಣ್ಣ ಹೇಳಿದರು.
ತುಮಕೂರಿನ ಮನೆಯಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ತುಮಕೂರಿನಲ್ಲೇ ಮನೆ ಮಾಡಿದೇನೆ. ನಾನು ಹೊರಗಿನವನ್ನು ಅಲ್ಲ. ಈ ಮನೆಯಲ್ಲೇ ವಾಸ ಇರುತ್ತೇನೆ. ಜನ ಬಂದು ಯಾವಗ ಬೇಕಾದರು ಭೇಟಿಯಾಗಬಹುದು ನಾನು ಹೊರಗಿನವನ್ನು ಎಂದು ಬಿಂಬಿಸಬೇಡಿ ಎಂದರು.
ಜಿಲ್ಲೆಯ ಯುವಕರಿಗೆ ಹತ್ತು ಸಾವಿರ ಉದ್ಯೋಗ ಸೃಜಿಸುತ್ತೇನೆ, ವಿಮಾನ ನಿಲ್ದಾಣ, ಗುಡಿ ಕೈಗಾರಿಕೆ, ಗ್ರಾಮಸಡಕ್ಕ್ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಲಿಂಕ್ ರಸ್ತೆ ಮಾಡಿಸುತ್ತೇನೆ, ಭದ್ರ ಮೇಲ್ದಂಡೆ ಯೋಜನೆ ಗೆ ಹಣ ಬಿಡುಗಡೆ ಮಾಡಿಸುತ್ತೇನೆ ಎಂಬ ಭರವಸೆಯನ್ನು ಜಿಲ್ಲೆಯ ಜನತೆಗೆ ನೀಡಿದರು.
ಬರಪರಿಹಾರ ಸಂಬಂಧ ರಾಜ್ಯದ ಬಿಜೆಪಿ ಸಂಸದರ ವರ್ತನೆ ಬಗ್ಗೆ ಪ್ರಶ್ನಿಸಿದಾಗ ಹಳೇ ಎಂಪಿಗಳು ಏನು ಮಾಡವರೆ ನನಗೆ ಗೊತ್ತಿಲ್ಲ.
ಬರಪರಿಹಾರ ವಿಚಾರವಾಗಿ ರಾಜ್ಯ ಸರ್ಕಾರವೆ ಕೇಂದ್ರದ ಜತೆ ಸೌಹಾರ್ದ ತೆಯಿಂದ ವರ್ತಿಸಬೇಕಿತ್ತು, ಪ್ರತಿಭಟನೆ ಮಾಡಬಾರದೀತ್ತು ಎಂದಷ್ಟೇ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜ್ಯೋತಿ ಗಣೇಶ್, ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ,ಜಿಲ್ಲಾ ಉಪಾಧ್ಯಕ್ಷ ಟಿ ಆರ್.ಸದಾಶಿವ, ಜಗದೀಶ್ ,ಕೆ.ಟಿ. ಹಳ್ಳಿ ಶಿವಕುಮಾರ್, ಜೆಡಿಎಸ್ ಟಿ.ಆರ್.ನಾಗರಾಜು, ವಿಜಯ ಗೌಡ, ಲೀಲಾವತಿ ಮತ್ತಿತರರು ಇದ್ದರು.
