ಮಾಲೂರು : 2024 ನೇ ಸಾಲಿನ ಲೋಕಸಭಾ ಚುನಾವಣೆಗೆ ಸ್ಥಳೀಯ ವೀಡಿಯೋಗ್ರಾಫರ್‌ಗಳಿಗೆ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ನೀಡದೆ ಛಾಯಾಗ್ರಾಹಕರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿರುವುದನ್ನು ಖಂಡಿಸಿ ತಹಸೀಲ್ದಾರ್ ಕೆ.ರಮೇಶ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪ್ರಗತಿ ರವಿ ಮಾತನಾಡಿ, ಮಾಲೂರು ತಾಲೂಕಿನಲ್ಲಿ ಸುಮಾರು 150 ನುರಿತ ವೀಡಿಯೋಗ್ರಾಫರ್ ಕುಟುಂಬಗಳು ಇದೇ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಈ ಪ್ರಸ್ತುತ ದಿನಗಳಲ್ಲಿ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಾಲಸೋಲ ಮಾಡಿ ಅಂಗಡಿಗಳನ್ನು ಮಾಡಿ ಜೀವನ ನಡೆಸುತ್ತಿರುವ ಛಾಯಾಗ್ರಾಹಕರ ಕಷ್ಟ ಹೇಳ ತೀರದು.
ಇಂತಹ ಸಂದರ್ಭದಲ್ಲಿ 2024ನೇ ಲೋಕಸಭಾ ಚುನಾವಣೆಗೆ ಸ್ಥಳೀಯ ವೀಡಿಯೋಗ್ರಾಫರ್ ಗಳಿಗೆ ಕೆಲಸ ಕೊಡದೇ ಬೇರೆ ಜಿಲ್ಲೆಯವರಿಗೆ ಕೆಲಸವನ್ನು ಕೊಟ್ಟಿದ್ದಾರೆ. ಚುನಾವಣ ಕರ್ತವ್ಯಕ್ಕೆ ಸ್ಥಳೀಯ ಛಾಯಾಗ್ರಾಹಕರಿಗೆ ಚುನಾವಣೆ ಪ್ರಕ್ರಿಯೇ ಪ್ರಾರಂಭದಿಂದ ಮುಗಿಯುವವರೆಗೂ ಉದ್ಯೋಗ ನೀಡುತಿದ್ದರೂ ಆದರೆ ಈ ಬಾರಿ ವೃತ್ತಿಬಾಂಧವರಲ್ಲದ ಬೇರೆ ಜಿಲ್ಲೆಯವರೆಗೆ ನೀಡಿರುತ್ತಾರೆ. ಆದ್ದರಿಂದ ಸಂಘದ ವತಿಯಿಂದ ಇದನ್ನು ವಿರೋಧಿಸುತ್ತೆವೆ. ದಯವಿಟ್ಟು ಇದಕ್ಕೆ ಅವಕಾಶವನ್ನು ಮಾಡಿಕೊಡದೆ ಅವರಿಗೆ ಕೊಟ್ಟಿರುವ ಟೆಂಡರ್ ಅನ್ನು ರದ್ದುಗೊಳಿಸಿ ಸ್ಥಳೀಯ ವೃತ್ತಿಪರ ಛಾಯಗ್ರಾಹಕರಿಗೆ ಅವಕಾಶವನ್ನು ಮಾಡಿಕೊಡಬೇಕು ಇಲ್ಲವಾದಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ಪೋಟೋ ಹಾಗೂ ವಿಡಿಯೋ ಚಿತ್ರೀಕರಣಕ್ಕೆ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಎ.ಶಿವಮೂರ್ತಿ, ಖಜಾಂಚಿ ಎಂ.ಜೆ.ನಟರಾಜ್, ಜಿಲ್ಲಾ ಪ್ರತಿನಿಧಿ ಗ್ರೇಷ್ ಅಲ್ಮೇಡ, ಸಂಚಾಲಕರಾದ ವೆಂಕಟೇಶ್ ( ಜಗ್ಗೇಶ್), ನಾಗೇಂದ್ರಪಗಪ, ನಾಗರಾಜ್, ಕರುಣ್, ಮಂಜುನಾಥ್, ಹಲವಾರು ಛಾಯಾಗ್ರಾಹಕರು ಹಾಜರಿದ್ದರು.
