ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ನಂತರ, ಕ್ರಿಕೆಟ್ ಅಭಿಮಾನಿಗಳು ಈಗ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಕದನವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಉಭಯ ತಂಡಗಳ ಕ್ರಿಕೆಟ್ ಕದನ ಇನ್ನು ನಾಲ್ಕು ದಿನಗಳಲ್ಲಿ ಅಂದರೆ ಡಿಸೆಂಬರ್ 10 ರಂದು ನಡೆಯಲ್ಲಿದೆ. ವಾಸ್ತವವಾಗಿ 19 ವರ್ಷದೊಳಗಿನವರ ಏಷ್ಯಾಕಪ್ ಡಿಸೆಂಬರ್ 8 ರಿಂದ ಪ್ರಾರಂಭವಾಗಲಿದ್ದು, ಅಂತಿಮ ಪಂದ್ಯ ಡಿಸೆಂಬರ್ 17 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ಈ ಟೂರ್ನಿಯ ಮೊದಲ ಪಂದ್ಯ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿದ್ದು, ಐಸಿಸಿ ಅಕಾಡೆಮಿ ಓವಲ್-1 ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಆ ಬಳಿಕ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಡಿಸೆಂಬರ್ 10 ರಂದು, ಐಸಿಸಿ ಅಕಾಡೆಮಿ ಓವಲ್-1ರಲ್ಲಿ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.
8 ತಂಡಗಳು ಭಾಗವಹಿಸಲಿವೆ
2023ರ ಅಂಡರ್-19 ಏಷ್ಯಾಕಪ್‌ನಲ್ಲಿ ಎಂಟು ತಂಡಗಳು ಭಾಗವಹಿಸಲಿವೆ. ಇವುಗಳಲ್ಲಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಶ್ರೀಲಂಕಾ, ಜಪಾನ್, ಯುಎಇ ಮತ್ತು ಬಾಂಗ್ಲಾದೇಶದ ತಂಡಗಳು ಸೇರಿವೆ. ಈ 8 ತಂಡಗಳನ್ನು ತಲಾ ನಾಲ್ಕು ಗುಂಪುಗಳಾಗಿ ವಿಂಗಡಿಸಿಲಾಗಿದೆ. ಭಾರತವು ಅಂಡರ್-19 ಏಷ್ಯಾಕಪ್ ಪ್ರಶಸ್ತಿಯನ್ನು ಅತಿ ಹೆಚ್ಚು ಬಾರಿ ಗೆದ್ದಿದ್ದು, ಈ ಟ್ರೋಫಿಯನ್ನು 8 ಬಾರಿ ವಶಪಡಿಸಿಕೊಂಡಿದೆ. ಕಳೆದ ಬಾರಿ 2021ರಲ್ಲಿ ಶ್ರೀಲಂಕಾವನ್ನು ಸೋಲಿಸಿ ಟೀಂ ಇಂಡಿಯಾ ಟ್ರೋಫಿ ಗೆದ್ದಿತ್ತು.
ಪಂದ್ಯದ ಬಗ್ಗೆ ವಿವರ
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಯಾವಾಗ ನಡೆಯಲ್ಲಿದೆ?
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಡಿಸೆಂಬರ್ 10 ರಂದು ಐಸಿಸಿ ಅಕಾಡೆಮಿಯ ಗ್ರೌಂಡ್ ನಂ.2ರಲ್ಲಿ ನಡೆಯಲ್ಲಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. U-19 ಏಷ್ಯಾಕಪ್‌ನ ಎಲ್ಲಾ ಪಂದ್ಯಗಳು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತವೆ.
ಅಂಡರ್ 19 ಏಷ್ಯಾಕಪ್ ಪಂದ್ಯಾವಳಿ ಪಂದ್ಯಗಳನ್ನು ನಾವು ಎಲ್ಲಿ ವೀಕ್ಷಿಸಬಹುದು?
ಅಂಡರ್ 19 ಏಷ್ಯಾಕಪ್ ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು ನೇರ ಪ್ರಸಾರ ಮಾಡಲಾಗುವುದಿಲ್ಲ. ಆದರೆ ಈ ಪಂದ್ಯಗಳನ್ನು ಎಸಿಸಿಯ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ.
19 ವರ್ಷದೊಳಗಿನವರ ಏಷ್ಯಾಕಪ್‌ಗೆ ಭಾರತ ತಂಡ: ಉದಯ್ ಸಹರನ್ (ನಾಯಕ), ಸೌಮ್ಯ ಕುಮಾರ್ ಪಾಂಡೆ (ಉಪನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಅರವೇಲಿ ಅವನೀಶ್ ರಾವ್ (ವಿಕೆಟ್ ಕೀಪರ್), ಮುರುಗನ್ ಅಭಿಷೇಕ್, ಇನೇಶ್ ಮಹಾಜನ್ (ವಿಕೆಟ್ ಕೀಪರ್) ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ ಮತ್ತು ನಮನ್ ತಿವಾರಿ.
ಪಾಕಿಸ್ತಾನ ತಂಡ: ಸಾದ್ ಬೇಗ್ (ನಾಯಕ ಮತ್ತು ವಿಕೆಟ್ ಕೀಪರ್), ಅರಾಫತ್ ಮಿನ್ಹಾಸ್ (ಉಪನಾಯಕ), ಅಹ್ಮದ್ ಹುಸೇನ್, ಅಲಿ ಅಸ್ಫಂಡ್, ಅಮೀರ್ ಹಸನ್, ಅಜನ್ ಅವೈಸ್, ಖುಬೈಬ್ ಖಲೀಲ್, ನಜಾಬ್ ಖಾನ್, ನವೀದ್ ಅಹ್ಮದ್ ಖಾನ್, ಮೊಹಮ್ಮದ್ ರಿಯಾಜುಲ್ಲಾ, ಮೊಹಮ್ಮದ್ ತೈಬ್ ಆರಿಫ್, ಮೊಹಮ್ಮದ್ ಝೀಶನ್ , ಶಮೀಲ್ ಹುಸೇನ್ ಮತ್ತು ಉಬೈದ್ ಶಾ.
