ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ನಾಗರಹೊಳೆ ಉದ್ಯಾನದ ಕಾಡಂಚಿನ ಗ್ರಾಮದಲ್ಲಿ ರಾಗಿ, ಮುಸುಕಿನ ಜೋಳ, ಮರಗೆಣಸು ಬೆಳೆ ಹಾನಿಯಾಗಿದ್ದು,ಬಿಲ್ಲೇನ ಹೊಸಹಳ್ಳಿ ಗ್ರಾಮದ ರೈತ ಚಿನ್ನದೊರೆ ವೆಂಕಟೇಶ್ ಅವರಿಗೆ ಸೇರಿದ ಜಮೀನು ಇದಾಗಿದೆ ಎನ್ನಲಾಗಿದೆ. ಕಾಡಾನೆಗಳು ಬೆಳೆ ತಿಂದು ಹಾಗೂ ಬೆಳೆಗಳನ್ನುತುಳಿದು ನಾಶ ಮಾಡಿವೆ. ಇದರ ಜತೆಗೆ ವಾಸದ ಮನೆ ಮೇಲೂ ದಾಳಿ ಮಾಡಿ, ಮನೆ ಅಂಗಳದಲ್ಲಿ ಡ್ರಮ್ ನಲ್ಲಿ ತುಂಬಿಸಿಟ್ಟಿದ್ದ ನೀರು ಕುಡಿದು ಹೋಗಿವೆ. ಈ ಕಾಡಾನೆಗಳು ಕಾಡಂಚಿನ ಕೂಟದ ಕಡ, ತಟ್ಟೆ ಹಳ್ಳ ಪಾರೆ ಭಾಗದಿಂದ ಬಂದಿವೆ. ರೈಲ್ವೆ ಬ್ಯಾರಿಕೇಡ್ ಬೇಲಿ ದಾಟಿ ಬಂದಿರುವ ಗಜಪಡೆಯಿಂದ ಕಾಡಂಚಿನ ಗ್ರಾಮದ ಜನರು ಆತಂಕದಲ್ಲಿದ್ದಾರೆ.
