ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಯಾವುದೇ ಕಾರಣಕ್ಕೂ ಬೇರ್ಪಡಿಸದೆ ಈ ಹಿಂದೆ ಇದ್ದ ಹಾಗೆಯೇ ಮುಂದುವರೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಯರಗೋಳ್ ಅಣೆಕಟ್ಟು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಎರಡೂ ಜಿಲ್ಲೆಗಳ ಹಾಲು ಒಕ್ಕೂಟವನ್ನು ಬೇರ್ಪಡಿಸಲು ಮುಂದಾಗಿತ್ತು. ಆದರೆ ನಮ್ಮ ಸರ್ಕಾರ ಅದನ್ನು ಹಿಂಪಡೆದು ಎರಡೂ ಜಿಲ್ಲೆಗಳಿಗೆ ಒಂದೇ ಹಾಲು ಒಕ್ಕೂಟ ಕಾರ್ಯನಿರ್ವಹಿಸಲು ಬದ್ಧವಾಗಿದೆ. ಇದರ ಜೊತೆಗೆ ಐಸ್ ಕ್ರೀಂ ಘಟಕ ಆರಂಭಿಸಲು ಅನುಮತಿ ಜೊತೆಗೆ 200 ಕೋಟಿ ವೆಚ್ಚದಲ್ಲಿ ಹಾಲಿನ ಪುಡಿ ತಯಾರಿಕೆ ಘಟಕವನ್ನು ಸಹ ಆರಂಭಿಸಲು ಮಂಜೂರಾತಿ ನೀಡಲಾಗಿದೆ ಎಂದರು.
ಕೋಚಿಮುಲ್ಗೆ ಸೋಲಾರ್ ವಿದ್ಯುತ್: ಕೋಲಾರ ಡೇರಿಯ 50ಎಕರೆ ಜಾಗದಲ್ಲಿ ಸೋಲಾರ್ ವಿದ್ಯುತ್ ಘಟಕ ಆರಂಭವಾಗಲಿದೆ, ಪ್ರತಿ ತಿಂಗಳು ೨ಕೋಟಿ ವಿದ್ಯುತ್ ಬಿಲ್ ಕಟ್ಟುತ್ತಿದ್ದರು, ಇದನ್ನು ತಪ್ಪಿಸಲು ಸೋಲಾರ್ ವಿದ್ಯುತ್ ಘಟಕ ಆರಂಭಿಸಲು ಅನುಮತಿ ನೀಡಲಾಗಿದೆ. ಮಾಲೂರು ಶಾಸಕ ಕೆ.ವೈ.ನಂಜೇಗೌಡ ನೇತೃತ್ವದಲ್ಲೆ ಹಾಲೂ ಒಕ್ಕೂಟ ಮುಂದುವರೆಯಲಿದೆ ಎಂದರು.