ಪ್ರತಿನಿಧಿ ವರದಿ ಕೊಳ್ಳೇಗಾಲ
ಚಾ.ನಗರ ಲೋಕಸಭಾ ಬಿಜೆಪಿ ಮೈತ್ರಿ ಕೂಟದ ಅಭ್ಯರ್ಥಿ ಎಸ್.ಬಾಲರಾಜ್ ವಿರುದ್ಧ ವಿನಾಕಾರಣ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮತ್ತು ತೇಜೋವಧೆ ಮಾಡಿದವರ ವಿರುದ್ಧದ ದೂರನ್ನು ಪಟ್ಟಣ ಠಾಣಾ ಪೊಲೀಸರು ಚಾ.ನಗರ ಜಿಲ್ಲಾಧಿಕಾರಿಯೂ ಆದ ಚುನಾವಣಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರಿಗೆ ಹಸ್ತಾಂತರಿಸಿದ್ದಾರೆ.
ಪಟ್ಟಣದ ಭೀಮನಗರ ನಿವಾಸಿ, ನಗರಸಭಾ ಸದಸ್ಯ ಎಸ್.ಮೂರ್ತಿ ಅವರ ಪುತ್ರ ದುಶ್ಯಂತ್ ಬುದ್ಧ ಅವರು ಶನಿವಾರ ಸಂಜೆ ಪಟ್ಟಣ ಪೊಲೀಸ್ ಠಾಣೆಗೆ ಈ ಸಂಬಂಧ ಲಿಖಿತ ದೂರು ನೀಡಿದ್ದರು.
ಅಭ್ಯರ್ಥಿ ಎಸ್.ಬಾಲರಾಜ್ ಹಾಗೂ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ನಡುವೆ ಉತ್ತಮ ಭಾಂದವ್ಯವಿದೆ. ಆದರೆ, ಇದನ್ನು ಸಹಿಸದ ಕಿಡಿಗೇಡಿಗಳಾದ ನವಾಜ್ ಮತ್ತು ರವಿ ಎಂಬುವರು ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅಭಿಮಾನಿ ಬಳಗದ ವಾಟ್ಸಾಪ್ ಗ್ರೂಪ್ ನಲ್ಲಿ(ಸಾಮಾಜಿಕ ಜಾಲತಾಣದಲ್ಲಿ) ಎಸ್.ಬಾಲರಾಜ್ ಅವರ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಹಾಗಾಗಿ, ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳಿ ಎಂದು ದೂರಿನಲ್ಲಿ ಆಗ್ರಹಿಸಿದ್ದರು.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯ ಎಸೈ ಬಿ.ಕೆ.ಮಹೇಶ್ ಕುಮಾರ್ ದೂರು ಸ್ವಿಕರಿಸಿದ್ದರು. ನಂತರದಲ್ಲಿ ಅವರು ಪ್ರಸ್ತುತ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಸದರಿ ದೂರು ಅರ್ಜಿಯ ವಿಚಾರವು ಚುನಾವಣೆಗೆ ಸಂಬಂಧಿಸಿದೆ. ಆದ್ದರಿಂದ ಈ ದೂರನ್ನು ಚಾ.ನಗರ ಲೋಕಸಭಾ ಚುನಾವಣಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾದ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಶಿವಮೂರ್ತಿ ಅವರಿಗೆ ದೂರು ಅರ್ಜಿಯನ್ನು ಹಸ್ತಾಂತರಿಸಲಾಗಿದೆ ಎಂದು ದೂರುದಾರರಿಗೆ ಪಿಎಸೈ ನೀಡಿರುವ ಹಿಂಬರಹದಲ್ಲಿ ತಿಳಿಸಿದ್ದಾರೆ.
7ಕೆಜಿಎಲ್-3
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಪಿಎಸೈ ಬಿ.ಕೆ.ಮಹೇಶ್ ಕುಮಾರ್ ಶನಿವಾರ ದೂರುದಾರ ದುಷ್ಯಂತ್ ಬುದ್ಧ ಅವರಿಗೆ ನೀಡಿರುವ ಹಿಂಬರಹದ ಪ್ರತಿ ಇದೆ.
ಬಾಲರಾಜ್ ವಿರುದ್ಧ ಅಪಪ್ರಚಾರದ ದೂರು ಅರ್ಜಿ ಡಿಸಿಗೆ ಹಸ್ತಾಂತರ
Leave a Comment
