ಕರ್ನಾಟಕವೂ ಸೇರಿ 6 ರಾಜ್ಯಗಳಲ್ಲಿ ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹೆಚ್9ಎನ್2 ಸೋಂಕು ಸಂಬಂಧ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ. ರಾಜಸ್ಥಾನ, ಕರ್ನಾಟಕ, ಗುಜರಾತ್, ಉತ್ತರಾಖಂಡ, ಹರ್ಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಎಚ್ಚರಿಕೆ ಘೋಷಿಸಲಾಗಿದ್ದು, ಆಸ್ಪತ್ರೆಗಳು ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜಾಗಿರುವಂತೆ ಸೂಚಿಸಲಾಗಿದೆ.
ಉಸಿರಾಟ ಸಂಬಂಧಿ ಖಾಯಿಲೆ ಇದಾಗಿರುವುದರಿಂದ ಸೀನುವಾಗ ಮತ್ತು ಕೆಮ್ಮುವಾಗ ಜನರು ಆದಷ್ಟು ಬಾಯಿ ಅಡ್ಡವಿಟ್ಟುಕೊಳ್ಳಬೇಕು, ದಟ್ಟಣೆಯಿರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು, ಕರದಿಂದ ಮುಖವನ್ನು ಮುಟ್ಟಿಕೊಳ್ಳಬಾರದು ಹಾಗೂ ಆಗಾಗ್ಗೆ ಹಸ್ತ ತೊಳೆಯುತ್ತಿರಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲದಿರುವುದರಿಂದ ಜನತೆ ಆತಂಕ ಪಡಬೇಕಿಲ್ಲ ಎಂದೂ ಸಹ ತಿಳಿಸಲಾಗಿದೆ.
