PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಶ್ರೀ ಶಂಕರಚಾರ್ಯರ ಮತ್ತು ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಣೆ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಸಮಗ್ರ > ಶ್ರೀ ಶಂಕರಚಾರ್ಯರ ಮತ್ತು ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಣೆ
ಸಮಗ್ರ

ಶ್ರೀ ಶಂಕರಚಾರ್ಯರ ಮತ್ತು ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಣೆ

ಪ್ರತಿನಿಧಿ
Last updated: May 15, 2024 7:56 pm
ಪ್ರತಿನಿಧಿ
Published May 15, 2024
Share
SHARE

ಚಿಕ್ಕಬಳ್ಳಾಪುರ :  ಹಿಂದು ಧರ್ಮದ ಪುನರುಜ್ಜೀವನ ಮಾಡುವಲ್ಲಿ ಶಂಕರಚಾರ್ಯರ ಪಾತ್ರ ಅಪಾರವಾದುದು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಶ್ರೀ ಶಂಕರಚಾರ್ಯರ ಮತ್ತು ಭಗೀರಥ ಮಹರ್ಷಿಯವರ ಜಯಂತಿ ಕಾರ್ಯಕ್ರಮಕ್ಕೆ ಅವರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಶಂಕರಾಚಾರ್ಯರು ಭಕ್ತಿ ಮತ್ತು ಜಾನ್ಞ ಮಾರ್ಗಕ್ಕೆ ಹೆಚ್ಚು ಒತ್ತು ನೀಡಿದ್ದರು. ಸೌಂದರ್ಯ ಮತ್ತು ಯವ್ವನದ ಬಗ್ಗೆ ಹೆಚ್ಚು ಹೆಮ್ಮೆ ಪಡಬಾರದು ಎಂಬುದನ್ನು ಬೋಧಿಸಿದರು. ಜ್ಞಾನಕ್ಕಿಂತ ಮಿಗಿಲಾದದ್ದು ಜಗತ್ತಿನಲ್ಲಿ ಬೇರೊಂದಿಲ್ಲ. ಹಣಕ್ಕೆ ಹೆಚ್ಚು ಮಹತ್ವ ನೀಡಬಾರದು. ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿದ ಮೇಲೆ ಮಿಗಿಲಾದ ಸಂಪತ್ತನ್ನು ಅಗತ್ಯ ಇರುವವರಿಗೆ, ಅಶಕ್ತರಿಗೆ ದಾನ ಮಾಡಿ ನೆಮ್ಮದಿ ಜೀವನ ಕಟ್ಟಿಕೊಳ್ಳಿ ಎಂದು ಭೋದಿಸಿದ ಅವರು ಭಾರತದಾದ್ಯಂತ ಸಂಚರಿಸಿ ಹಿಂದೂ ಧರ್ಮವನ್ನು ಪ್ರಚಾರ ಮಾಡಿದರು. ದೇಶದ ನಾಲ್ಕು ಭಾಗಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಅತ್ಯಂತ ಕಡಿಮೆ ಜೀವಿತಾವಧಿಯಲ್ಲಿ ಹೆಚ್ಚು ಸಾಧನೆಗೈದರು. ಅವರು ಪ್ರಸ್ತುತ ದೇಹವನ್ನು ಮಾತ್ರ ತ್ಯಜಿಸಿದ್ದಾರೆ. ಆದರೆ ಅವರ ಸಾಧನೆಗಳು, ವಿಚಾರ ದಾರೆಗಳು, ಆದರ್ಶಗಳು ಭೂಮಿ ಇರುವವರೆಗೂ ಜನಮಾನಸದಲ್ಲಿ ಜೀವಂತವಾಗಿರುತ್ತವೆ. ಹಿಂದೂ ಧರ್ಮವು ಅವನತಿ ಹೊಂದುವ ಹಾದಿಯಲ್ಲಿದ್ದ ಸಂದರ್ಭದಲ್ಲಿ ಧರ್ಮ ಪುನರುಜ್ಜೀವನದಲ್ಲಿ ಪ್ರಮುಖಪಾತ್ರ ವಹಿಸಿ ಭಾರತೀಯ ಸಮಾಜ ಸುಧಾರಕರಾಗಿದ್ದಾರೆ. ಇಂತಹ ಮಹನೀಯರು ರಚನೆ ಮಾಡಿರುವ ಎಲ್ಲ ಕೃತಿಗಳು, ಸಾಹಿತ್ಯಗಳು ಕನ್ನಡ ಭಾಷೆಗೂ ಭಾಷಾಂತರಗೊಂಡರೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
ಶಂಕರಚಾರ್ಯರು ಹಾಗೂ ಭಗೀರಥ ಮಹರ್ಷಿಗಳು ಸೇರಿದಂತೆ ಇನ್ನಿತರ ಮಹಾನ್ ಸಾಧಕರ ಆದರ್ಶಗಳನ್ನ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಹಳ ಭಕ್ತಿ ಪೂರ್ವಕವಾಗಿ ಹಾಗೂ ಅರ್ಥಪೂರ್ಣವಾಗಿ ಇರ್ವರ ಜಯಂತಿಗಳನ್ನು ಕನ್ನಡ ಸಂಸ್ಕ್ರತಿ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಡಳಿತ ಆಯೋಜಿಸಿದೆ. ಇದಕ್ಕೆ ಸಹಕಾರ ನೀಡಿದ ಸಮುದಾಯದ ಪ್ರತಿಯೊಬ್ಬರಿಗೂ ಅಭಿನಂಧನೆಗಳನ್ನು ತಿಳಿಸಿದರು.
ಈ ವೇಳೆ ಉಷಾ ವೇಣುಗೋಪಾಲ ಮಾತನಾಡಿ, ಆದಿ ಶಂಕರ ಎಂದರೆ ಶುಭದ ಸಂಕೇತವಾಗಿದೆ. ಶ್ರೀ ಶಂಕರಾಚಾರ್ಯರು 8ನೇ ವಯಸ್ಸಿಗೆ 4 ವೇದಗಳನ್ನು ಕಲಿತು 12ನೇ ವಯಸ್ಸಿಗೆ ಎಲ್ಲ ವಿದ್ಯೆ, ಶಾಸ್ತ್ರ ಪರಂಗತರಾದರು. 16ನೇ ವಯಸ್ಸಿನಲ್ಲಿ 58 ಗ್ರಂಥಗಳು, 72 ಸ್ತೋತ್ರಗಳು ಮತ್ತು ಭಾಷ್ಯಗಳನ್ನು ರಚಿಸಿದರು ಎಂದು ತಿಳಿಸಿದರು.
ಸಮುದಾಯದ ಮುಖಂಡ ವೆಂಕಟೇಶ್ ಅವರು ಮಹರ್ಷಿ ಭಗೀರಥರ ಜೀವನ ಸಾಧನೆ ಕುರಿತು ತಿಳಿಸಿಕೊಟ್ಟರು.
ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಎನ್. ಮನಿಷ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ರೈ, ಸಮುದಾಯದ ಮುಖಂಡರಾದ ಮೊಕ್ಷ ಗುಡಂ ವೇಣು ಗೋಪಾಲ, ಜಯ ಪ್ರಕಾಶ, ದೇವಾಶಾಸ್ತ್ರಿ, ಅನುಪಮ ನಾಗಭೂಷಣ್, ಶ್ರೀನಾಥ್, ನಳಿನ, ವೇಂಕಟೇಶ್, ಕೃಷ್ಣಪ್ಪ, ಗಂಗಾಧರ ಉಪಸ್ಥಿತರಿದ್ದರು.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಸಮಗ್ರ

ರಾಷ್ಟ್ರೀಯ ರೈತರ ದಿನದಂದುಕರ್ನಾಟಕದ ಅನ್ನದಾತರಿಗೆ ಸಿಹಿ ಸುದ್ದಿ ನೀಡಿದ ಸಿದ್ದರಾಮಯ್ಯ

December 24, 2023
ಸಮಗ್ರ

ಪೋಟೋ

May 31, 2024
ಸಮಗ್ರ

ಮಾ.26ರಂದು ಡಾ.ಎಂ.ಮೋಹನ ಆಳ್ವ

March 26, 2024
ಸಮಗ್ರ

ಮೂಳೂರು-ಅಡ್ಡೂರು ಜೋಡುಕರೆ ಕಂಬಳ

April 13, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?