ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ತಿಮ್ಮರಾಜಿಪುರ ಗ್ರಾಮದ ಕೋಟೆಕೆರೆಯಲ್ಲಿ ನಿಯಮ ಉಲ್ಲಂಘಿಸಿ ನಿಗದಿಗಿಂತ ಪ್ರಮಾಣಕ್ಕಿಂತ ಹೆಚ್ಚಿನ ಮಣ್ಣು ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮೈಸೂರು ವಿಭಾಗ ಕಾರ್ಯಪಾಲಕ ಇಂಜಿನಿಯರ್ ರಿಂದ ಕಳೆದ ತಿಂಗಳು 660 ಘನ ಮೀಟರ್ ಮಣ್ಣನ್ನು ಕೋಟೆಕರೆಯಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿಯ ಗುತ್ತಿಗೆದಾರನು ಷರತ್ತು ಉಲ್ಲಂಘಿಸಿ ನಿಗದಿಗಿಂತ ಮಟ್ಟಕ್ಕಿಂತ ಹೆಚ್ಚು ಮಣ್ಣು ತೆಗೆಯುತ್ತಿರುವ ಬಗ್ಗೆ ತಿಮ್ಮರಾಜಿಪುರ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಣ್ಣು ತೆಗೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸುತ್ತೋಲೆಗಳನ್ನು ಅನುಸರಿಸಿಲ್ಲ . ಕೆರೆಯಲ್ಲಿ 6 ಅಡಿಯಷ್ಟು ಆಳಕ್ಕೆ ಮಣ್ಣು ತೆಗೆಯುವುದರ ಜತೆಗೆ ಅಲ್ಲಲ್ಲಿ ಬೆಳೆದಿರುವ ಜಾಲಿ ಮರಗಳನ್ನು ನಾಶ ಮಾಡಲಾಗಿದೆ. ಕೆರೆ ಹೂಳು ತೆಗೆಯುವುದರಿಂದ ಮುಂದಿನ ದಿನದಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಿಬಹುದಾಗಿದೆ . ಈ ಭಾಗದಲ್ಲಿ ಅಂತರ್ಜಲ ಮಟ್ಟವು ವೃದ್ಧಿಯಾಗುವುದೆಂಬ ದೃಷ್ಠಿಯಿಂದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗೆ ರಾಜಧನ ರೂಪದಲ್ಲಿ ಆದಾಯ ಸಂಗ್ರಹಿಸುವ ಹಿನ್ನೆಲೆಯಲ್ಲಿ ಹೆದ್ದಾರಿ ಅಭಿವೃದ್ಧಿಗೆ ಮಣ್ಣು ತೆಗೆಯಲು ಅವಕಾಶ ನೀಡಿದೆ ಎನ್ನಲಾಗಿದೆ.
ಆದರೆ ಇಲ್ಲಿ ಇಲಾಖೆಯ ಅನುಮತಿ ಷರತ್ತುಗಳನ್ನು ಉಲ್ಲಂಘಿಸಿ, ನಾಲ್ಕು ಕಡೆಗಳಲ್ಲಿ ಇಟಾಚಿ ಮತ್ತು ಟಿಪ್ಪರ್ ಬಳಸಿ ಎಗ್ಗಿದಲ್ಲದೆ ಮಣ್ಣನ್ನು ಲೂಟಿ ಮಾಡಲಾಗುತ್ತಿದ್ದು, ಈ ಬಗ್ಗೆ ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ತುರ್ತಾಗಿ ಸ್ಥಳ ಪರಿಶೀಲಿಸಿ ಲಕ್ಷಾಂತರ ರೂ. ಮೌಲ್ಯದ ಮಣ್ಣು ಲೂಟಿಯನ್ನು ತಡಯಬೇಕೆಂದು ತಿಮ್ಮರಾಜಿಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
13ಕೆಜಿಎಲ್-2
ಫೋಟೋ ಶೀರ್ಷಿಕೆ
ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿಪುರ ಗ್ರಾಮದ ಕೋಟೆಕೆರೆಯಲ್ಲಿ 209 ಹೆದ್ದಾರಿ ಅಭಿವೃದ್ಧಿಗೆ ಮಣ್ಣು ಲೂಟಿ ಮಾಡುತ್ತಿರುವುದು.

