.
ಪ್ರತಿನಿಧಿ ವರದಿ ಬನ್ನೂರು
ಪಟ್ಟಣದ ಶ್ರೀ ಕೋದಂಡರಾಮದೇವರ ಬ್ರಹ್ಮ ಮಹಾರಥೋತ್ಸವ ಬುಧವಾರ ಅದ್ದೂರಿಯಾಗಿ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಬೆಳಗ್ಗೆ ಪ್ರಾತಃ ಕಾಲದಲ್ಲಿ ದೇವರಿಗೆ ಹೋಮ ಹವನವನ್ನು ನೆರವೇರಿಸಿ, ಪಾದುಕೆಯನ್ನು ರಥೋತ್ಸವ ಸಾಗುವ ಬೀದಿಯಲ್ಲಿ ಶಾಸ್ತ್ರೋಕ್ತವಾಗಿ ಮೆರವಣಿಗೆ ಮಾಡಿ, ನಂತರ ಮಂಗಳವಾದ್ಯದೊಂದಿಗೆ ಶುಭಲಗ್ನದಲ್ಲಿ ತಳಿರು ತೋರಣದಿಂದ ಹೂವಿನ ಬಾವುಟಗಳಿಂದ ಸಿಂಗಾರಗೊಂಡಿದ್ದ ರಥದ ಮೇಲೆ ಸ್ಥಾಪಿಸಲಾಯಿತು.
ನಂತರ ರಥಕ್ಕೆ ಚಾಲನೆ ನೀಡಲಾಯಿತು. ನೂರಾರು ಜನರು ಸೇರಿ ರಥದ ಹಗ್ಗವನ್ನು ಎರಡು ಕಡೆಯಿಂದ ಹಿಡಿದು ಘೋಷಣೆಗಳನ್ನು ಕೂಗುತ್ತಾ ರಥವನ್ನು ಎಳೆದರು.
ದೇವಾಲಯದ ಸ್ವಸ್ಥಾನದಿಂದ ಹೊರಟ ರಥ, ರಥದ ಬೀದಿಯ ಮೂಲಕ ಸಾಗಿ, ಹಳೇ ಪುರಸಭಾ ರಸ್ತೆಯಲ್ಲಿ ಬಂದು ದೊಡ್ಡ ಅಂಗಡಿ ಬೀದಿಯ ಮುಖಾಂತರ ದೇವಾಲಯವನ್ನು ಸೇರಿತು. ದಾರಿಯುದ್ದಕ್ಕೂ ಭಕ್ತರು ಹಣ್ಣು ಜವನ ಎಸೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.
ನಂತರ ದೇವಾಲಯದಲ್ಲಿ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ನಡೆಯಿತು. ಅರ್ಚಕರಾದ ಕೃಷ್ಣಸ್ವಾಮಿ, ಶ್ರೀನಿವಾಸ್, ಶ್ರೀನಾಥ್, ಶ್ರೀಕಾಂತ, ಮುರಳಿ, ಸುಧನ್ವ ಭಾರದ್ವಾಜ್, ನಾಡಗೌಡ ಬಿ.ಸಿ.ಪಾರ್ಥಸಾರಥಿ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಬನ್ನೂರಿನಲ್ಲಿ ಶ್ರೀ ಕೋದಂಡರಾಮದೇವರ ಬ್ರಹ್ಮ ರಥವನ್ನು ಭಕ್ತರು ಎಳೆದರು.

ಪ್ರತಿನಿಧಿ ಬನ್ನೂರು
ನಾವೆಲ್ಲರೂ ಈ ಬಾರಿ ಎನ್‌ಡಿಎ ಅಭ್ಯರ್ಥಿ ಎಸ್.ಬಾಲರಾಜ್ ಗೆ ಮತ ನೀಡುವ ಮೂಲಕ ದೇಶದ ಅಭಿವೃದ್ದಿಗೆ ಹಗಲಿರುಳು ಶ್ರಮಿಸುತ್ತಿರುವ ಮೋದಿಜೀ ಅವರ ಕೈ ಬಲಪಡಿಸೋಣ ಎಂದು ಕರ್ನಾಟಕ ರಾಜ್ಯ ಜೆಡಿಎಸ್ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ ತಿಳಿಸಿದರು.
ಪಟ್ಟಣ ಸಮೀಪದ ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಎನ್‌ಡಿಎ ಅಭ್ಯರ್ಥಿ ಎಸ್.ಬಾಲರಾಜ್ ಪರವಾಗಿ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.
ಮೋದಿ ಅವರ ಹತ್ತು ವರ್ಷದ ಅಭಿವೃದ್ದಿ ಪರ ಕಾರ್ಯ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಸರಳತೆಯನ್ನು ತಿಳಿಸಿದರು.
ರಾಜ್ಯದಲ್ಲಿ ಎಲ್ಲರೂ ಅತ್ಯಧಿಕ ಮತ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ತಂದು ಅದರಿಂದ ಆಗುತ್ತಿರುವ ಅಚಾತುರ್ಯಗಳು ಜನರ ಕಣ್ಣ ಮುಂದೆ ಇದ್ದು, ಮುಂದಿನ ದಿನಗಳಲ್ಲಿ ನಾವೆಲ್ಲರೂ ಎಂದಿಗೂ ಇಂತಹ ತಪ್ಪನ್ನು ಮಾಡದೆ, ಉತ್ತಮ ರೀತಿಯಲ್ಲಿ ರಾಷ್ಟ್ರವನ್ನು ಕಟ್ಟಿ ಬೆಳೆಸುತ್ತಿರುವ ಮೋದಿ ಅವರ ಆದರ್ಶಕ್ಕೆ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಲಹೆಯಂತೆ ಒಗ್ಗಟ್ಟಿನಿಂದ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಮತದಾರರಿಗೆ ತಿಳಿಸಿದರು.
ಡಾ. ಮಲ್ಲಿಕಾರ್ಜುನ, ಹೇಮಂತ್ ಕುಮಾರ್, ಸಂತೋಷ್ ಕುಮಾರ್, ದರ್ಶನ್, ಸಾಗರ್, ವೈ.ಎಲ್.ಪುಟ್ಟಪ್ಪ, ಮಹದೇವು, ನಾಗೇಂದ್ರ(ಹೋಮ್), ಶಿವಶಕ್ತಿ, ಚಂದ್ರಶೇಖರ್, ಶಿವಕುಮಾರ್, ಯೋಗೇಶ್, ಕಿಟ್ಟಿ, ಮರಿಸಿದ್ದು, ಮಹೇಶ್ ಕುಮಾರ್, ವೈ.ಕೆ.ನವೀನ್, ನಾಗೇಶ್, ಪುಟ್ಟರಾಜು, ಗದ್ದೇಗೌಡ, ಸುಬ್ಬೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
- ಬನ್ನೂರಿನ ಸಮೀಪದ ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯ ಜೆಡಿಎಸ್ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ ಮತಯಾಚನೆ ಮಾಡಿದರು.
