PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಖಾಸಗಿ ಫೋಟೋ ವಿಡಿಯೋ ತೋರಿಸಿ ಮಹಿಳೆಗೆ ಬ್ಲಾಕ್ ಮೇಲ್ 
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಸಮಗ್ರ > ಖಾಸಗಿ ಫೋಟೋ ವಿಡಿಯೋ ತೋರಿಸಿ ಮಹಿಳೆಗೆ ಬ್ಲಾಕ್ ಮೇಲ್ 
ಸಮಗ್ರ

ಖಾಸಗಿ ಫೋಟೋ ವಿಡಿಯೋ ತೋರಿಸಿ ಮಹಿಳೆಗೆ ಬ್ಲಾಕ್ ಮೇಲ್ 

ಪ್ರತಿನಿಧಿ
Last updated: May 16, 2024 6:12 pm
ಪ್ರತಿನಿಧಿ
Published May 16, 2024
Share
SHARE

ರಾಮನಗರ : ಖಾಸಗಿ ಫೋಟೋ – ವಿಡಿಯೋಗಳನ್ನು ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವ ವೈದ್ಯನ ವಿರುದ್ಧ ಮಹಿಳೆಯೊಬ್ಬರು ಕುಂಬಳಗೂಡು ಪೊಲೀಸ್  ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿನಾಯಕನಗರ ಬಡಾವಣೆ ವಾಸಿ ಪರಸಪ್ಪ  ಖಾಸಗಿ ಫೋಟೋ – ವಿಡಿಯೋಗಳನ್ನು ಇಟ್ಟುಕೊಂಡು ತನ್ನನ್ನು ತೇಜೋವಧೆ ಮಾಡಿ ಬ್ಲಾಕ್  ಮೇಲ್  ಮಾಡುತ್ತಿದ್ದು, ಆತನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ಮಹಿಳೆ ಕೋರಿದ್ದಾರೆ.

ಆ ಮಹಿಳೆ ವಾಸವಿದ್ದ ಮನೆಯ ಗ್ರೌಂಡ್  ಫ್ಲೋರ್ ಅನ್ನು ವೈದ್ಯ ಎಂದು ಹೇಳಿಕೊಂಡಿದ್ದ  ಕೊಪ್ಪಳ ಮೂಲದ ಪರಸಪ್ಪ ಎಂಬುವನಿಗೆ ಬಾಡಿಗೆಗೆ ನೀಡಿದ್ದರು. ಅದೇ ಬಡಾವಣೆಯಲ್ಲಿ ಆತ ಕ್ಲಿನಿಕ್  ಇಟ್ಟುಕೊಂಡಿದ್ದನು. ಮಹಿಳೆಯ ಮನೆಯಲ್ಲಿ ಯಾರಾದರು ಅನಾರೋಗ್ಯಕ್ಕೆ ಒಳಗಾದರೆ ಆತನ ಬಳಿ ಚಿಕಿತ್ಸೆ ಪಡೆಯುತ್ತಿದ್ದರು.

ಮಹಿಳೆಯ ಕೈಯಲ್ಲಿ ಗಂಟು ಆಗಿದ್ದಾಗಲು ಆತನಿಂದಲೇ ಚಿಕಿತ್ಸೆ ಪಡೆದಾಗ ಇಬ್ಬರಲ್ಲಿ ಆತ್ಮೀಯತೆ ಬೆಳೆದಿದೆ. ಆಗಿನಿಂದ ವೈದ್ಯ ಮನೆಗೆ ಬಂದು ಹೋಗುತ್ತಿದ್ದನು. ಆ ವೈದ್ಯನೊಂದಿಗೆ ಅನ್ಯೋನ್ಯವಾಗಿರುವ ಹಾಗೂ ಖಾಸಗಿ ಫೋಟೋ, ವಿಡಿಯೋಗಳನ್ನು ತನ್ನ ಅರಿವಿಗೆ ಬಾರದಂತೆ ತೆಗೆದುಕೊಂಡಿದ್ದಾನೆ.

- ಜಾಹೀರಾತು -

ಆ ಫೋಟೋ-ವಿಡಿಯೋಗಳನ್ನು ಮುಂದಿಟ್ಟುಕೊಂಡು ವೈದ್ಯ ಮಹಿಳೆಯಿಂದ ಹಣ, ಒಡವೆ ಪಡೆದಿದ್ದಾನೆ. ಹಣ ನೀಡದಿದ್ದಾಗ ವೈದ್ಯ  ಕೆಲ ಖಾಸಗಿ ಫೋಟೋಗಳನ್ನು ಮಹಿಳೆಯ ಪತಿ ಮತ್ತು ಸಂಬಂಧಿಕರಿಗೆ ಕಳುಹಿಸಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಪೊಲೀಸರಿಗೆ ದೂರು ನೀಡಿದರೆ ಸಾಮಾಜಿಕ ಜಾಲತಾಣಗಳಲ್ಲಿ  ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.

ಈ ಸಂಬಂಧ ಕುಂಬಳಗೂಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿದ್ಯಾರ್ಥಿನಿಗೆ 1.74 ಲಕ್ಷ ರೂ.ವಂಚನೆ

ರಾಮನಗರ : ಪಾರ್ಟ್  ಟೈಮ್  ಜಾಬ್  ಆಸೆಗೆ ಬಿದ್ದು  ವಿದ್ಯಾರ್ಥಿನಿಯೊಬ್ಬಳು 1.74 ಲಕ್ಷ ರುಪಾಯಿ ವಂಚನೆಗೊಳಗಾಗಿರುವ ಘಟನೆ ನಡೆದಿದೆ. ತಾಲೂಕಿನ ಕೈಲಾಂಚ ಹೋಬಳಿ ಶಂಬೇಗೌಡನದೊಡ್ಡಿ ಗ್ರಾಮದ ಎಸ್.ಪಿ.ಪೂರ್ಣಿಮಾ ಹಣ ಕಳೆದುಕೊಂಡವರು.

ಪೂರ್ಣಿಮಾ ರವರ ಮೊಬೈಲ್  ಗೆ ವಂಚಕರು ಕರೆ ಮಾಡಿ ಅಮೇಜನ್  ಮಲ್ಟಿ ನ್ಯಾಷನಲ್  ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಪಾರ್ಟ್  ಟೈಮ್  ಜಾಬ್ ಇದೆ ಎಂದು ಹೇಳಿ ವಾಟ್ಸ್  ಆಪ್  ನಲ್ಲಿ ಲಿಂಕ್  ಕಳುಹಿಸಿದ್ದಾರೆ.

ಆ ಲಿಂಕ್  ಅನ್ನು ಕ್ಲಿಕ್  ಮಾಡಿದಾಗ ಅದರಲ್ಲಿ  ಮೊಬೈಲ್  ನಂಬರ್  , ಲಾಗಿನ್  ಪಾಸ್ ವರ್ಡ್, ವಿತ್  ಡ್ರಾ ಪಾಸ್  ವರ್ಡ್   ಹಾಕಿದಾಗ ಪೇಜ್  ರಿಜಿಸ್ಟ್ರೇಷನ್  ಗೆಂದು ವಂಚಕರು ಹೇಳಿದ ಖಾತೆಗಳಿಗೆ ಹಣ ಸಂದಾಯ ಮಾಡಿದ್ದಾರೆ. ಒಟ್ಟು 1,74,720 ರುಪಾಯಿಗಳನ್ನು ಪೂರ್ಣಿಮಾ ಕಳೆದುಕೊಂಡಿದ್ದು, ರಾಮನಗರ ಸಿಇಎನ್  ಪೊಲೀಸ್  ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ.

ವಿಡಿಯೋ ಹರಿಬಿಟ್ಟ ವ್ಯಕ್ತಿ ವಿರುದ್ಧ ಮಹಿಳೆಯಿಂದ ದೂರು

ರಾಮನಗರ : ಪತಿಯನ್ನು ಕೊಲೆ ಮಾಡುವುದಾಗಿ ಹೆದರಿಸಿ ಆತನ ಪತ್ನಿಯಾದ ತನ್ನೊಂದಿಗೆ  ಬಲವಂತವಾಗಿ ವಿಡಿಯೋ ಮಾಡಿಕೊಂಡಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ  ಹರಿಬಿಟ್ಟಿರುವ ವ್ಯಕ್ತಿ ವಿರುದ್ಧ  ಮಹಿಳೆಯೊಬ್ಬರು ರಾಮನಗರ ಸಿಇಎನ್  ಪೊಲೀಸ್  ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಲೂಕಿನ ದೊಡ್ಡಮಣ್ಣುಗುಡ್ಡೆ ವಾಸಿ ರಾಜೇಶ್  ಎಂಬಾತನ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ.

14 ವರ್ಷಗಳ ಹಿಂದೆ ತಾನು ವಿವಾಹವಾಗಿದ್ದು, ಪತಿ, ಇಬ್ಬರು ಮಕ್ಕಳಿದ್ದಾರೆ. ನನ್ನನ್ನು ಬೆದರಿಸಿ ನೀನು ನನಗೆ ಸ್ಪಂದಿಸದಿದ್ದರೆ ನಿನ್ನ ಗಂಡನನ್ನು ಕೊಲೆ ಮಾಡಿ ಸಾಯಿಸುವುದಾಗಿ ಬೆದರಿಸಿ 2 ವರ್ಷಗಳಿಂದ ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಿ ವಿಡಿಯೋ ಮಾಡಿಕೊಂಡಿದ್ದಾನೆ. ಅಲ್ಲದೆ, ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

ಇದರಿಂದ ನನಗೆ ಮತ್ತು ಪತಿ, ಮಕ್ಕಳ ಮರ್ಯಾದೆ ಹೋಗಿದ್ದು, ಕುಟುಂಬದವರಿಗೆ ಮಾನಸಿಕವಾಗಿ ನೋವುಂಟಾಗಿದೆ. ನೀನು ಕರೆದಾಗಲೆಲ್ಲ  ಸ್ಪಂದಿಸದಿದ್ದರೆ ಉಳಿದ ವಿಡಿಯೋಗಳನ್ನು ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾನೆ.

ಈ ವಿಚಾರವಾಗಿ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದಾಗ ಆತನಿಂದ ಮುಚ್ಚಳಿಕೆ ಬರೆಸಿಕೊಂಡು ಬುದ್ಧಿ ಹೇಳಿ ಕಳುಹಿಸಿದ್ದರು. ಈಗ ಮತ್ತೆ ಪೀಡಿಸುತ್ತಿದ್ದು, ಆತನ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾಳೆ.

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಸಮಗ್ರ

ಸಾಧನೆ, ಪರಿಶ್ರಮದ ಪ್ರತೀಕವೇ ಹೆಣ್ಣು

March 28, 2024
ಸಮಗ್ರ

ನಟರಾಜ್ ನಿಧನ

May 30, 2024
ಸಮಗ್ರ

ಕೈ ಬಿಟ್ಟು ಕಮಲ ಹಿಡಿದ ಕಾರ್ಯಕರ್ತರು

April 17, 2024
ಸಮಗ್ರ

ಡಿ.ಕೆ.ಶಿವಕುಮಾರ್ ವಜಾಗೊಳಿಸಲು ಒತ್ತಾಯ

May 8, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?