ರಾಜ್ಯದ ಜನತೆಗೆ ಹಾಗೂ ರೈತರಿಗೆ ಅನ್ಯಾಯ ಮಾಡಿ, ತೆಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಎಲ್.ನಾಗರಾಜು ತಿಳಿಸಿದರು.
ಜೆಎಂಎಫ್ಸಿ ಕೋರ್ಟ್ ಆವರಣದಲ್ಲಿ ತಾಲೂಕು ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ ಸುದ್ದಿಗಾರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಈಗಾಗಲೇ ಮಳೆ ಇಲ್ಲದೇ ಕೆಆರ್ಎಸ್ ಡ್ಯಾಮ್ನಲ್ಲಿ ನೀರಿಲ್ಲದೇ ರೈತರು ಕಂಗಲಾಗಿದ್ದು, ತಮಿಳುನಾಡಿಗೆ ನೀರು ಬಿಡುತ್ತಿರುವುದು ರೈತರಿಗೆ ಮಾಡಿದ ದ್ರೋಹ. ರಾಜ್ಯ ಸರಕಾರ ಯಾವುದೇ ಕಾರಣ ತಮಿಳುನಾಡಿಗೆ ನೀರು ಬಿಡಬಾರದು ಒಂದು ವೇಳೆ ನೀರನ್ನು ಬಿಟ್ಟರೆ ರಾಜ್ಯದ ಜನತೆಗೆ ಹಾಗೂ ರೈತರಿಗೆ ಮೋಸ ಮಾಡಿದಂತೆ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ವಕೀಲ ಟಿ. ಕೃಷ್ಣಮೂರ್ತಿ ಮಾತನಾಡಿ, ಕಾವೇರಿ ನದಿಯು ನಮ್ಮ ನಾಡಿನಲ್ಲಿ ಹುಟ್ಟಿದರೂ ಅದರ ಪ್ರಯೋಜನವನ್ನು ತಮಿಳುನಾಡು ಪಡೆದುಕೊಳ್ಳುತ್ತಿದೆ. ೧೯೯೦ರಲ್ಲಿ ಕಾವೇರಿ ನದಿಗೆ ಪ್ರಾಧಿಕಾರ ರಚನೆಯಾದ ಮೇಲೆ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದೆ. ರಾಜ್ಯ ಸರ್ಕಾರ ಸರಿಯಾದ ವಾದ ವಿವಾದ ನಡೆಸದೆ ತಾತ್ಸಾರ ಮಾಡುತ್ತಿರುವುದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದರು.
- ಜಾಹೀರಾತು -
ವಕೀಲರಾದ ಪುಟ್ಟರಾಜು, ಕೃಷ್ಣಮೂರ್ತಿ, ರಾಮಚಂದ್ರಯ್ಯ, ದೇವರಾಜು, ನರಸಿಂಹರಾಜು, ಶಿವಕುಮಾರ್, ಸಂತೋಷ್, ನಾಗರಾಜು, ಮಂಜುನಾಥ್, ತಿಮ್ಮರಾಜು, ಮಲ್ಲಿಕಾರ್ಜುನಯ್ಯ, ರವಿ, ಕೃಷ್ಣಪ್ಪ, ಕೋಮಲ್, ಆರುಂಧತಿ, ಶಿವರಾಜು, ಅನಂತರಾಜು ಇದ್ದರು.