ಪ್ರತಿನಿಧಿ ವರದಿ ಪಿರಿಯಾಪಟ್ಟಣ
ಶ್ರೀ ಶಿವಕುಮಾರಸ್ವಾಮಿ ಅಭಿಮಾನಿ ಬಳಗ ನೇತೃತ್ವದಲ್ಲಿ ವಿವಿಧ ವೀರಶೈವ ಸಂಘಟನೆಗಳ ಸಹಕಾರದೊಂದಿಗೆ ತ್ರಿವಿದ ದಾಸೋಹಿ ಕರ್ನಾಟಕ ರತ್ನ ಡಾ.ಶಿವಕುಮಾರ ಮಹಾಸ್ವಾಮಿಗಳ ಜನ್ಮದಿನವನ್ನು ಪಿರಿಯಾಪಟ್ಟಣದಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹೊರರೋಗಿಗಳಿಗೆ ಹಣ್ಣು ಹಂಪಲ ವಿತರಿಸಿದ ಬಳಿಕ ಬಸವೇಶ್ವರ ವೃತ್ತದ ಬಳಿ ಇರುವ ಡಿ.ದೇವರಾಜ ಅರಸು ಕಲಾಭವನ ಬಳಿ ಶ್ರೀ ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ನಡೆಸಲಾಯಿತು. ಈ ವೇಳೆ ರಾವಂದೂರು ಮುರುಗ ಮಠದ ಶ್ರೀ ಮೋಕ್ಷಪತಿ ಮಹಾಸ್ವಾಮೀಜಿಗಳು ಹಾಜರಿದ್ದು ಆಶೀರ್ವಚನ ನೀಡಿದರು.
ಭಕ್ತರಿಗೆ ಪಲಾವ್, ಮೊಸರನ್ನ, ಜಿಲೇಬಿ, ಮಜ್ಜಿಗೆ, ವಿತರಿಸಲಾಯಿತು. ಮುಖಂಡರಾದ ಚಂದ್ರಶೇಕರ್, ಮುಕೇಶ್ ಕುಮಾರ್, ಆರ್.ಜೆ. ಮಂಜು, ನಿರಂಜನ್, ಮಹೇಶ್, ನಾಗಾನಂದ, ಬಿ.ವಿ ಅನಿತಾ, ರಾಜಣ್ಣ, ಶಿವಕುಮಾರ ಸ್ವಾಮಿ, ಮಹದೇವಪ್ಪ, ನವೀನ್ ಕುಮಾರ್, ವಿನಯ್, ಸಂತೋಷ್, ತಾರೇಶ್, ಆನಂದ್, ಶಿವದೇವ್, ಗಿರೀಶ್, ಪರಶಿವಮೂರ್ತಿ ವಿವಿಧ ವೀರಶೈವ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು ಮುಖಂಡರು ಇದ್ದರು.
