ಮೈಸೂರು: ಹುಣಸೂರು ತಾಲೂಕಿನ ಅರಸು ಕಲ್ಲಳ್ಳಿ ಬಳಿ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸಾವಿಗೀಡಾಗಿದ್ದಾರೆ ಎರಡು ಬಸ್, ಎರಡು ಕಾರುಗಳಿಗೆ ಜಖಂ ಆಗಿದೆ. ಮೈಸೂರು- ಬಂಟ್ವಾಳ ಹೆದ್ದಾರಿ- 275ರ ಅರಸು ಕಲ್ಲಹಳ್ಳಿ ಗೇಟ್ ಬಳಿಯಲ್ಲಿ ಘಟನೆ ನಡೆದಿದೆ. ಮೈಸೂರು ತಾಲೂಕಿನ ಹೂಟಗಳ್ಳಿಯ ಎಸ್‌ಆರ್‌ಎಸ್ ಕಾಲೋನಿಯ ಲೇಟ್ ಭೈರಪ್ಪ ಪುತ್ರ, ಕೂಲಿ ಕಾರ್ಮಿಕ ಕರಿಯಪ್ಪ (40) ಮೃತರು. ಗ್ರಾಮದ ಹಬ್ಬ ಮುಗಿಸಿ ವಾಪಸ್ ಆಗುವ ವೇಳೆ ನಡೆದ ಅವಘಡದಲ್ಲಿ ಕರಿಯಪ್ಪ ಸ್ಥಳದಲ್ಲೇ ಸಾವಿಗೀಡಾದರು. ಸರಣಿ ಅಪಘಾತದಲ್ಲಿ ಎರಡು ಬಸ್‌ಗಳು ಹಾಗೂ ಎರಡು ಕಾರುಗಳಿಗೆ ಜಖಂ ಆಗಿದ್ದು, ಕೆಲವರಿಗೆ ತರಚಿದ ಗಾಯಗಳಾಗಿವೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
